ವಿಕಾಸ ಬ್ಯಾಂಕ್‌ಗೆ 5.28 ಕೋಟಿ ನಿವ್ವಳ ಲಾಭ.

0
158
Nammuru T V Online News Channel
Nammuru T V Online News Channel

ಬಳ್ಳಾರಿ ಹೊಸಪೇಟೆ: ಪ್ರಸಕ್ತ ಸಾಲಿನಲ್ಲಿ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ರೂ. 5.28 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಹೇಳಿದರು.

ನಗರದಲ್ಲಿ ಶನಿವಾರ ವಿಕಾಸ್ ಬ್ಯಾಂಕ್ ಸಭಾಗಂಣದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತೆರಿಗೆ ಮತ್ತು ಕಡಿತಗಳ ನಂತರ ಬ್ಯಾಂಕ್ ನಿವ್ವಳ ರೂ. 3.15 ಕೋಟಿ ನಿವ್ವಳ ಲಾಭವನ್ನು ಗಳಿಸಿದೆ. ಒಟ್ಟಾರೆ ಪ್ರಸ್ತುತ ವರ್ಷದಲ್ಲಿ ಠೇವಣಾತಿಯ ವೃದ್ದಿಯು ಶೇ. 37, ಸಾಲ ಹಾಗೂ ಮುಂಗಡಗಳ ವೃದ್ದಿಯು ಶೇ. 26.13 ಹಾಗೂ ಒಟ್ಟು ವ್ಯವಹಾರದ ವೃದ್ದಿಯು ಶೇ. 33.55 ಪ್ರಗತಿಯನ್ನು ಸಾಧಿಸಿದೆ ಎಂದರು.

ಬ್ಯಾಂಕಿನ ವ್ಯವಹಾರ :         

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಒಟ್ಟು ವ್ಯವಹಾರ ರೂ. 410 ಕೋಟಿಗಳ್ವಹಿವಾಟು ನಡೆಸಿದೆ. ಠೇವಣಿ ರೂ. 265 ಕೋಟಿ, ಮತ್ತು ಸಾಲ ಮುಂಗಡದಲ್ಲಿ ರೂ. 145 ಕೋಟಿಗಳಷ್ಟು ಸಾಧನೆಗೈದಿದೆ. ಸದ್ಯ ಒಟ್ಟು 40 ಸಾವಿರ ಗ್ರಾಹಕರು, 8 ಸಾವಿರ ಸದಸ್ಯರಿಂದ 5.35 ಕೋಟಿ ಷೇರು ಬಂಡವಾಳ ಹೊಂದಿದ್ದು, ಪ್ರತಿ ವರ್ಷದಂತೆ ಈ ವರ್ಷವೂ 0 ಅನುತ್ಪಾದಕ ಆಸ್ತಿ ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಶಾಖಾ ವಿಸ್ತರಣೆ :

2017-18 ರ ಆರ್ಥಿಕ ವರ್ಷದಲ್ಲಿ ಹೊಸದಾಗಿ 10 ಶಾಖೆಗಳನ್ನು ಪ್ರಾರಂಭಿಸಲು ಭಾರತೀಯ ರಿಜರ್ವ ಬ್ಯಾಂಕಿನ ಅನುಮತಿ ಕೋರಲಾಗಿದೆ. ಅನುಮತಿಯ ಆಧಾರದ ಮೇಲೆ ಕನಿಷ್ಠ 3 ಶಾಖೆಯನ್ನಾದರೂ ಈ ವರ್ಷ ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದರು.

ತಂತ್ರಜ್ಞಾನ ಅಳವಡಿಕೆ :

ಗ್ರಾಹಕರ ಹೆಚ್ಚಿನ ಅನುಕೂಲಕ್ಕೆ ಮತ್ತು ತ್ವರಿತ ಸೇವೆಗಾಗಿ ತಂತ್ರಜ್ಞಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದೆ. ಇವುಗಳಲ್ಲಿ ಪ್ರಮುಖ ತಂತ್ರಜ್ಞಾನ ಸೇವೆಗಳಾದ ಎ.ಟಿ.ಎಂ./ಡೆಬಿಟ್ ಕಾರ್ಡ್ ಮೂಲಕ ಈ ಕಾಮರ್ಸ ಮತ್ತು ಪಿ.ಒ.ಎಸ್ ವ್ಯವಹಾರ, ಮೊಬೈಲ ಬ್ಯಾಂಕಿಂಗ್ (ಒ ಸೇವೆ), ನೆಟ್ ಬ್ಯಾಂಕಿಂಗ್ ಮತ್ತು ಎಬಿಪಿಎಸ್ (ಆಧಾರ ಬೇಸ್ಡ್ ಪೇಮೆಂಟ್ ಸಿಸ್ಟಂ) ಅಳವಡಿಸುವ ಮೂಲಕ ಉತ್ತಮ ಸೇವೆ ನೀಡಲು ಮುಂದಾಗಿದೆ ಎಂದು ವಿವರಿಸಿದರು.

ಬ್ಯಾಂಕ್‌ನ ಗುರಿ ಹಾಗೂ ಯೋಜನೆಗಳು :

ಈಗಾಗಲೇ ನಿಗದಿಯಾದ ಬ್ಯಾಂಕ್ ನಿವೇಶನದಲ್ಲಿ ಸ್ವಂತ ಕಟ್ಟಡವನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದ್ದು, ಸೇರಿದಂತೆ ಆರ್ಥಿಕ ವರ್ಷ 2017-18 ರಲ್ಲಿ ತನ್ನ ಒಟ್ಟು ವ್ಯವಹಾರವನ್ನು ರೂ. 500 ಕೋಟಿಗಳನ್ನು ತಲುಪಿಸುವುದು, ಠೇವಣಾತಿಯಲ್ಲಿ ಸುಮಾರು ರೂ. 340 ಕೋಟಿಗಳು, ಸಾಲ ಹಾಗೂ ಮುಂಗಡ ಸುಮಾರು ರೂ. 200 ಕೋಟಿಗಳಿಗೆ ತಲುಪುವುದಾಗಿದೆ. ಎಂದರು.

ಗೋಷ್ಠಿಯಲ್ಲಿ ಅನಂತ ಜೋಶಿ ನಿರ್ದೇಶಕರಾದ ಛಾಯಾ ದಿವಾಕರ್, ರಮೇಶ ಪುರೋಹಿತ್, ಎಂ. ವೆಂಕಪ್ಪ, ಎಂ. ವಿಠೋಬಣ್ಣ, ಗಂಗಮ್ಮ, ಅಕ್ಕಿ ಮಲ್ಲಿಕಾರ್ಜುನ್, ರಾಜೇಶ್ ಹಿರೇಮಠ ಮತ್ತು ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹಿರೇಮಠ ಹಾಜರಿದ್ದರು

LEAVE A REPLY

Please enter your comment!
Please enter your name here