ವಿಚಾರ ಸಂಕೀಣ೯ ಮತ್ತು ಸಂಘಟನಾ ‌ ಶಿಬಿರ

0
191

ಚಿಕ್ಕಬಳ್ಳಾಪುರ/ಚಿಂತಾಮಣಿ : ನಗರದ ರಂಗಮಂದಿರದಲ್ಲಿ ಐಸಿಡಿಎಸ್ ಬಲಪಡಿಸುವ ಕುರಿತು ವಿಚಾರ ಸಂಕೀಣ೯ ಮತ್ತು ಸಂಘಟನಾ ‌ ಶಿಬಿರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಉಮಾಶ್ರೀ ರವರು ಉದ್ಘಾಘಟಿಸಿ ಮಾತನಾಡಿದರು.

ಸ್ವತಂತ್ರ್ಯ ಪಡೆಯಲು ನಮ್ಮ ಮಹನೀಯರು ಹೋರಾಟವನ್ನು ಮಾಡಿ ಭಾರತಕ್ಕೆ ಸ್ವಾತಂತ್ರ್ಯ ವನ್ನು ತಂದು ಕೊಟ್ಟ ಹಾಗೇ ಹಲವಾರು ಹೋರಾಟಗಳನ್ನು ನಡೆಸಿ ತಮ್ಮ ಹಕ್ಕುಗಳನ್ನು ಪಡೆಯುವುದರಲ್ಲಿ ಅಂಗನವಾಡಿ ಕಾಯ೯ಕತೆ೯ಯರು ಮುಂದಾಗಿದ್ದಾರೆ. ಇಲ್ಲವೆಂದರೆ ಸಕಾ೯ರ ನಿಲ೯ಕ್ಷ್ಯತೋರುತ್ತಿತ್ತು. ನಿಮ್ಮ ಲಕ್ಷಾಂತರ ಧ್ವನಿಯೇ ಮಾನ್ಯ ಸಿದ್ದರಾಮಯ್ಯ ರವರಿಗೆ ಹಕ್ಕುಗಳ ಒತ್ತಾಯದ ಬಗ್ಗೆ ಮನದಟ್ಟು ಮಾಡಿಸುತ್ತಿದ್ದೇನೆ ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೂರಕ ಹಾಗೂ ಪೌಷ್ಟಿಕ ಒದಗಿಸಿಕೊಡುವುದು, ಆರೋಗ್ಯದ ಬಗ್ಗೆ ಮಾಹಿತಿ ನೀಡುವುದು ಆಶಾ ಕಾಯ೯ಕತೆಯರ ಮೂಲಕ ಹೆಚ್ಚಿನ ಕಾಳಜಿ ವಹಿಸುತ್ತಿದ್ದು , ಪೌಷ್ಟಿಕಾಂಶಗಳ ಕೊರತೆಯಿಂದ ಉಂಟಾಗುವ ಗಭೀ೯ಣಿ ತಾಯಿ ಮತ್ತು ಮಕ್ಕಳ ಮಾರಕಗಳನ್ನು ತಪ್ಪಿಸುವ ಮೊದಲೆನೇ ಸ್ಥಾನ ಅಂಗನವಾಡಿ ಕಾಯ೯ಕತೆ೯ಯರದ್ದು‌ , ತಾಯಿ ತನ್ನ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳುವ ಹಾಗೇ ಅಂಗನವಾಡಿ ಕೇಂದ್ರಗಳಲ್ಲಿ ನೋಡಿಕೋಳ್ಳುತ್ತಿರುವ ಇವರಿಗೆ ಕೇಂದ್ರ ಸಕಾ೯ರದಲ್ಲಿ ಸಿಗುವ ಸಹಾಯಧನಕ್ಕೆ ಹೆಚ್ಚಿನ ಕಾಯ೯ನಿವ೯ಹಿಸುತ್ತಿದ್ದ ಇವರು ಅಸಂಘಟಿತ ಕಾಮಿ೯ಕರಾಗಿ ಉಳಿದಿದ್ದಾರೆ ಎಂದು ಅಸಾಮಾಧಾನ ವ್ಯಕ್ತ ಪಡಿಸಿದ್ದಾರೆ.

ಕಾಯ೯ಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಎಂ ಗಂಗಪ್ಪ , ಚಂದ್ರಪೂಜಾರಿ ಆಥಿ೯ಕ ತಜ್ಞರು ಪ್ರಗತಿಪರ ಚಿಂತಕರು , ಕಾಂ ಎ ಆರ್ ಸಿಂಧೂ ಪ್ರಧಾನ ಕಾಯ೯ದಶಿ೯ಅಖಿಲ ಭಾರತ ಅಂಗನವಾಡಿ ನೌಕರರ ಸಂಘ , ಕಾಂ ಮೀನಾಕ್ಷಿ ಸುಂದರಂ ರಾಜ್ಯ ಪ್ರಧಾನ ಕಾಯ೯ದಶಿ೯ ಸಿಟಿಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here