ವಿಜಯನಗರ ಕಾಲುವೆಗಳಿಗೆ ನೀರುಬಿಡಲು ಸಮಿತಿ ತೀರ್ಮಾನ

0
389

ಬಳ್ಳಾರಿ /ಹೊಸಪೇಟೆ:ಪುರಾತನ ವಿಜಯನಗರ ಕಾಲುವೆಗಳಾದ ರಾಯ-ಭಸವ ಕಾಲುವೆಗಳಿಗೆ ಪ್ರತಿದಿನ 200 ಕ್ಯೂಸಕ್ಸ್ 96 ದಿನಗಳ ಕಾಲ ನಿರಂತರ ನೀರು ಬಿಡಲು ಬೆಂಗಳೂರಿನ ವಿಕಾಸ ಸೌದದಲ್ಲಿ ಭಾನುವಾರ ನಡದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಶಾಸಕ ಆನಂದಸಿಂಗ್ ನಮ್ಮೂರು ಟಿ.ವಿ ಗೆ ತಿಳಿಸಿದರು.
ಬೆಂಗಳೂರಿನ ವಿಕಾಸ ಸೌದದಲ್ಲಿ ನಡದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, :ಪುರಾತನ ವಿಜಯನಗರ ಕಾಲುವೆಗಳಾದ ರಾಯ-ಭಸವ ಕಾಲುವೆಗಳಿಗೆ ಮಾತ್ರ ನೀರು ಹರಿಸಲು ತೀರ್ಮಾನಿಸಲಾಗಿದ್ದು, ತುಂಗಭದ್ರಾ ಕಾಲುವೆಗಳಾದ ಹೆಚ್ಎಲ್ಸಿ ಹಾಗೂ ಎಲ್ಎಲ್ಸಿಗೆ ಸಧ್ಯದ ಪರಿಸ್ಥಿತಿಯಲ್ಲಿ ನೀರು ಹರಿಸದಿರುವಂತೆ ತೀರ್ಮಾನಿಸಲಾಗಿದೆ ಎಂದರು.
ವಿಜಯನಗರ ಕಾಲುವೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಕಬ್ಬು ಹಾಗೂ ಬಾಳೆ ಬೆಳೆದು ನಿಂತಿದ್ದು, ಫಸಲು ರೈತರ ಕೈ ಸೇರಬೇಕೆಂದರೆ ಶೀಘ್ರ ನೀರು ಹರಿಸುವುದು ಅನಿವಾರ್ಯಬವಾಗಿದೆ ಎಂದು ಸಭೆಯಲ್ಲಿ ಸುಧೀರ್ಘವಾಗಿ ಚರ್ಚಿಸಿದ ಬಳಿಗೆ ಗಮನಕ್ಕೆ ತಂದಾಗ ಸ್ಪಂದಿಸಿ, ಸಭೆ ಒಪ್ಪಿ ವಿಜಯನಗರ ಕಾಲುವೆಗಳಿಗೆ ನೀರು ಬಿಡಲು ತೀರ್ಮಾನಿಸಲಾಗಿದೆ ಅಲ್ಲದೆ, ಉಳಿದ ತುಂಗಭದ್ರಾ ಕಾಲುವೆಗಳಿಗೆ ನೀರು ಹರಿಸುವ ಕುರಿತು ಸೆ.1 ರಂದು ಮೊತ್ತೊಂದು ಸುತ್ತಿನ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಿಲಾಯಿತು ಎಂದು ತಿಳಿಸಿದರು.
ಕಳೆದ ನಾಲ್ಕು ವರ್ಷಗಳಿಂದ ಮಳೆಯಿಲ್ಲದೇ ಜಲಾಶಯದಲ್ಲಿ ನೀರಿನ ಸಂಗ್ರಹ ವಾಡಿಕೆಗಿಂತಲೂ ಕಡಿಮೆಯಾಗುತ್ತಿದೆ. ಹೀಗಾಗಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಮುಂದಿನ ದಿನಗಳಲ್ಲಿ ಮಿತ ನೀರು ಬಳಕೆ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here