ಕಾರಹುಣ್ಣಿಮೆ ಆಚರಣೆ.

0
156

ವಿಜಯಪುರ: ಕಳೆದ ಮೂರು ದಿನಗಳಿಂದ ಜಿಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಈ ಬಾರಿಯ ಕಾರಹುಣ್ಣಿಮೆ ಸಂಭ್ರಮ ಕೃಷಿಕರ ಸಂತೋಷವನ್ನು ಇಮ್ಮಡಿ ಗೊಳಿಸಿದೆ. ಕಾರಹುಣ್ಣಿಮೆ ಸಂಭ್ರಮ ಶತಮಾನಗಳಿದಿಂದಲೂ ಆಚರಣೆ ಮಾಡಿಕೊಂಡು ಬರುತ್ತಿದ್ದು,  ಮಳೆಗೂ ಈ ಹಬ್ಬಕ್ಕೂ ಸಂಬಂಧವಿಲ್ಲ. ಹಬ್ಬದ ದಿನದಂದು ರೈತರು ತಮ್ಮ ಎತ್ತುಗಳಿಗೆ ನಸುಕಿನಲ್ಲೇ ಸ್ನಾನ ಮಾಡಿಸಿ, ಶ್ರದ್ದಾಭಕ್ತಿಯಿಂದ ಪೂಜೆಗೈಯುತ್ತಾರೆ. ಹೊಸಹಗ್ಗ, ಹಣೆಪಟ್ಟಿ, ಗೆಜ್ಜೆಸರ, ಮೂಗುದಾರ, ದೃಷ್ಟಿಮಣಿ, ಜೂಲ, ಮಿಣಿಯೊಂದಿಗೆ ಅಲಂಕರಿಸಿ ರಂಗು ರಂಗಿನ ಬಣ್ಣ ಬಳಿದು ಸಂಭ್ರಮಿಸುತ್ತಾರೆ. ಮುಸ್ಸಂಜೆ ಊರ ಮುಂದೆ ಎತ್ತುಗಳನ್ನು ಓಡಿಸಿ ಸಂಭ್ರಮ ಪಡುತ್ತಾರೆ. ವರ್ಷವಿಡಿ ತನ್ನ ಜೊತೆ ದುಡಿಯುವ ಎತ್ತುಗಳಿಗೆ ಅಲಂಕರಿಸಿ, ಪೂಜಿಸಿ ನಮಿಸುವ ಶ್ರೇಷ್ಠ ಕಾಯಕವನ್ನು ಹುಣ್ಣುಮೆಯಂದು ನಡೆಸಿದರೆ, ವರ್ಷವಿಡಿ ನಮಗೆ ಶುಭಫಲ ದೊರಕುತ್ತದೆ ಎನ್ನುವುದು ಅನ್ನದಾತರ  ನಂಬಿಕೆ. ಹೀಗಾಗಿ ಜಿಲ್ಲೆಯ ಗ್ರಾಮೀಣ ಭಾಗದ ಎಲ್ಲ ರೈತಾಪಿ ವರ್ಗದವರು ಕಾರಹುಣ್ಣಿಮೆ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ.

LEAVE A REPLY

Please enter your comment!
Please enter your name here