ವಿಜೃಂಬಣೆಯಿಂದ ಬಾಬಾ ಸಾಹೇಬ್ ಜಯಂತಿ

0
143

ಕೋಲಾರ/ ಕೆಜಿಎಫ್: ಮಾರಿಕುಪ್ಪ ಗ್ರಾಮ ಪಂಚಾಯತಿಯಲ್ಲಿ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ 126 ನೇ ಜಯಂತಿ ಆಚರಣೆ ಮಾಡಲಾಯಿತು. ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಅತ್ಯಂತ ವಿಜೃಂಬಣೆಯಿಂದ ನಡೆಯಿತು.  ಗ್ರಾಮ ಪಂಚಾಯತಿ ಕಚೇರಿ ಯಿಂದ ಆರಂಭವಾದ ಮೆರವಣಿಗೆಯಲ್ಲಿ ವಾದ್ಯ ತಂಡಗಳೋಂದಿಗೆ ಸಾಗಿ ಬಂದವು. ಅಂಡೆರ್ಸನ್ ಪೇಟ್ ಸರ್ಕಲ್, ಹಾಗೂ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ನಡೆಯಿತು.
ಡಾ.ಅಂಬೇಡ್ಕರ್ ರವರ 126 ನೇ ಜಯಂತಿ ಅಂಗವಾಗಿ ಪಿಡಿಒ ಬಾಬು, ಶೇಷಾದ್ರಿ, ಕಾರ್ಯದರ್ಶಿ ಚಂದ್ರಪ್ಪ ,ಗ್ರಾಮ ಪಂಚಾಯತ್ ಸದಸ್ಯರಾದ ಬಾಬು,ವೆಂಕಟರಾಮ್ ರೆಡ್ಡಿ , ವಿಜಯ ಕುಮಾರ್ , ಹರೀಶ್ ಭಾಗವಹಿಸಿ, ಕಚೇರಿಯ ಆವರಣದಲ್ಲಿ ಉಪಾಧಕ್ಷ್ಯರಾದ ಗೀತಮ್ಮ ಗಿಡ ನೆಟ್ಟು ಅಂಬೇಡ್ಕರ್ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡರಾದ ಶಿವಮೂರ್ತಿ ಕೇಕ್ ಕಟ್ ಮಾಡುವ ಮೂಲಕ ವಿಶೇಷವಾಗಿ ಆಚರಣೆ ಮಾಡಿದರು .ನಂತರ ಗ್ರಾಮ ಪಂಚಾಯತ್ ಸದಸ್ಯರಾದ ಡಾ. ಅಂಬೇಡ್ಕರ್ ಮಾಡಿದ ಸಾಧನೆ ,ಸಮಾಜಕ್ಕೆ ನೀಡದ ಕೊಡುಗೆ ಕುರುತು ಗುಣಗಾನ ಮಾಡಿದರು ಗ್ರಾಮಪಂಚಾತಿಯ ಸಿಬ್ಬಂದಿ ಹಾಜರಿದ್ದರು.

LEAVE A REPLY

Please enter your comment!
Please enter your name here