ವಿಜೃಂಭಣೆಯ ಶಿವಾಜಿ ಜಯಂತೋತ್ಸವ

0
119

ಬೆಂಗಳೂರು ಗ್ರಾಮಾಂತರ/ ದೊಡ್ಡಬಳ್ಳಾಪುರ: ನಗರದ ಒಕ್ಕಲಿಗರ ಭವನದಲ್ಲಿ‌ ಭಾನುವಾರ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ವತಿಯಿಂದ ನಡೆದ ಛತ್ರಪತಿ ಶಿವಾಜಿ ಮಹಾರಾಜದ ೩೯೧ನೇ ಜಯಂತಿ ಯನ್ನು ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮದಲ್ಲಿ ಮಾತನಾಡಿದ ಸಮುದಾಯದ ಮುಖಂಡರು,ವಕೀಲರಾದ ರವಿ ಮಾವಿನಕುಂಟೆ ಮಾತನಾಡಿ, ಶಿವಾಜಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಪ್ರತಿಯೊಬ್ಬ ಹಿಂದೂ ಜನಾಂಗದ ಮನೆಗಳ ಮನವನ್ನು ತಲುಪವಂತಾಗಬೇಕು. ಆ ಮೂಲಕ ಹಿಂದೂ ಧರ್ಮದ ಹೆಮ್ಮೆಯ ಛತ್ರಪತಿ ಶಿವಾಜಿ ಎಂದರು. ಬೆಳಗಾವಿ ಯಲ್ಲಿನ ಮರಾಠ ಜನರು ಯಾರು ಸಹ ಮಹಾರಾಷ್ಟ್ರಕ್ಕೆ ಬೆಳಗಾವಿ ಸೇರ್ಪಡೆಗೊಳ್ಳಬೇಕು ಎನ್ನುವ ಮಾತನ್ನು ಹೇಳುವುದಿಲ್ಲ.‌ಕೆಲವರು ರಾಜಕೀಯ ಪಿತೂರಿಗಳನ್ನು ಮಾಡುವ ನಿಟ್ಟಿನಲ್ಲಿ ಜನರನ್ನು ಉತ್ಪ್ರೇಕ್ಷೆ ಗೊಳಪಡಿಸುತ್ತಿದ್ದಾರೆ. ಶಿವಾಜಿ ಮಹಾರಾಜರು ಜನರಲ್ಲಿ ಭಾವೈಕ್ಯತೆಯನ್ನು ರೂಪಿಸಲು ಮುಂದಾಗಿದ್ದರು. ಹಿಂದೂ ಧರ್ಮದಲ್ಲಿ ಒಡಕು ಮೂಡಿಸಲು ಪ್ರಯತ್ನಿಸುವವರನ್ನು ವಿರೋಧಿಸಿ, ನಮ್ಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಪರಾಕ್ರಮವನ್ನು ತೋರ್ಪಡಿಸಿದ ಮಹಾನ್ ನಾಯಕ ಇಂದಿನ ಯುವಜನರಿಗೆ ಸದಾ ಕಾಲ ಸ್ಫೂರ್ತಿಯನ್ನು ನೀಡುತ್ತಿದ್ದಾರೆ. ಶಿವಾಜಿ ಮಹಾರಾಜರ ಮಹಾನ್ ದೇಶಭಕ್ತಿಯೇ ಮುಖ್ಯಕಾರಣ ಅವರ ತಾಯಿ ಜೀಜಾಬಾಯಿಯ ದೇಶಪ್ರೇಮ. ಇಂದಿಗೂ ಪುಣೆಯ ಶಿವನೇರಿ ಕೋಟೆಯ ನಮ್ಮನಿಮ್ಮೆಲ್ಲರಿಗೂ ಸ್ಪೂರ್ತಿಯ ಚಿಲುಮೆಯಾಗಿದೆ. ಶಿವಾಜಿ ಜಯಂತಿ ಕೇವಲ ಒಂದು ಜನಾಂಗಕ್ಕೆ ಸೀಮಿತವಾಗದೆ, ಸರ್ವಧರ್ಮ ಆಚರಣೆ ಯಾಗಬೇಕು ಎಂದರು
ತಾಲೂಕಿನಲ್ಲಿ ಮರಾಠ ಭವನವನ್ನು ನಿರ್ಮಾಣ ಮಾಡ ಬೇಕಾಗಿದೆ. ಜತೆಗೆ, ಮರಾಠ ಜನಾಂಗದ ಐಕ್ಯತೆಗೆ ಸರಕಾರದ ಸಹಕಾರ ಅಗತ್ಯವಿದೆ. ಜತೆಗೆ, ತಾಲೂಕಿನಲ್ಲಿ ಒಟ್ಟು ೮.೫ ಸಾವಿರ ಜನಸಂಖ್ಯೆ ಹೊಂದಿರುವ ಮರಾಠ ಜನಾಂಗಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳು, ಸರಕಾರದಿಂದ ಲಭಿಸುವ ಎಲ್ಲ ಸೌಲಭ್ಯಗಳನ್ನು ಪಾರದರ್ಶಕವಾಗಿ ಜನರನ್ನು ಮುಟ್ಟುವಂತಾಗಬೇಕು ಎಂದು ಮನವಿಮಾಡಿದರು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡುತ್ತಾ ಛತ್ರಪತಿ ಶಿವಾಜಿ ನಮ್ಮ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಹಿಂದಿನ ಕಾಲದಲ್ಲಿ ಅವರ ತ್ಯಾಗಗಳಿಂದಾಗಿ ನಮ್ಮ ಸಮಾಜ ಉಳಿದಿದೆ. ಪ್ರತಿಯೊಂದು ಸಮಾಜದ ಉಳಿವಿಗಾಗಿ ಶಿವಾಜಿ ಮಹಾರಾಜರು ಸಾಕಷ್ಟು ಶ್ರಮಿಸಿದ್ದಾರೆ. ಅವರಿಂದ ಪ್ರತಿಯೊಬ್ಬರು ಸ್ಪೂರ್ತಿಪಡೆದುಕೊಂಡು ದೇಶಕ್ಕಾಗಿ ಸಾಮಾಜಿಕ ಬದ್ದತೆಯನ್ನು ನಿಭಾಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಸಮುದಾಯದ ವತಿಯಿಂದ ಸಮುದಾಯ ಭವನ ನಿರ್ಮಾಣಕ್ಕೆ ಸೌಕರ್ಯ ಕಲ್ಪಿಸಿಕೊಡಿ ಎನ್ನುವ ಮನವಿ ಬಂದಿದೆ. ಆದರೆ ತಾಲೂಕಿನಲ್ಲಿ ಈಗಾಗಲೇ ಅನೇಕ ಸಮುದಾಯಗಳಿಗೆ ನಿವೇಶನ ಕಲ್ಪಿಸಿಕೊಡಲಾಗಿದೆ. ಸದ್ಯ, ಕ್ಷತ್ರೀಯ ಮರಾಠ ಪರಿಷತ್ ಸಮುದಾಯಕ್ಕೆ ಅಗತ್ಯ ನಿವೇಶನ ನೀಡುವ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಸಭೆಯನ್ನುಏರ್ಪಿಡಿಸುವ ಮೂಲಕ ನಿವೇಶನ ನೀಡುವ ಕುರಿತಾಗಿ ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿದರು.

ತಾಲೂಕಿನಲ್ಲಿ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಲಾಗಿದ್ದು, ಶೈಕ್ಷಣಿಕ ಪ್ರಗತಿಯಿಂದ ಸಮುದಾಯ ಗಳ ಏಳ್ಗೆ ಸಾಧ್ಯ ಎಂದರು.ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಸಮುದಾಯದ ಮಕ್ಕಳಲ್ಲಿ ಸಾಧನೆಯನ್ನು ಮಾಡಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಆ ಮೂಲಕ ಶೈಕ್ಷಣಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಹೇಳಿದರು. ಕ್ಷೇತ್ರದಲ್ಲಿ ೨೨ಸಾವಿರ ೬೬ಸಾವಿರ ಪಡಿತರ ಚೀಟಿಗಳನ್ನು ಏರಿಸಲಾಗಿದೆ. ಬಗರ್ ಹುಕುಂ ಸಾಗುವಳಿ ಅಡಿಯಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎಸ್ ಶಿವಶಂಕರ್, ಕೆಕೆಎಂಪಿ ಪ್ರಧಾನ ಕಾರ್ಯದರ್ಶಿ ಬಿ.ಆರ್ ಹನುಮಂತ ರಾವ್ ಪನ್ನಾಳೆ, ಗೌರವ ಖಜಾಂಚಿ ಎ.ಬೈನೋಜಿ ರಾವ್ ಮೋರೆ, ಜಿಲ್ಲಾಧ್ಯಕ್ಷ ಎಂ.ನಾಗೇಶ್ ರಾವ್ ವನ್ಸೆ, ರಾಜ್ಯ ಉಪಾಧ್ಯಕ್ಷ ಟಿ.ಆರ್ ವೆಂಕಟರಾವ್ ಚವ್ಜಾಣ್, ಸಮುದಾಯದ ಮುಖಂಡರಾದ ಬಿ.ವಿ ಕೃಷ್ಣೋಜಿರಾವ್ ಕದಂ, ಎಸ್.ನಾರಾಯಣರಾವ್ ಸಾವೇಕಾರ್, ಎಸ್.ಸುರೇಶ್ ರಾವ್ ಮಾನೆ, ಎಂ.ಲಕ್ಷ್ಮಣ್ ರಾವ್ ಮೋಹಿತೆ,ಡಿ.ಬಿ ಹನುಮಂತ ರಾವ್ ಚೌಹಾಣ್.ವಕೀಲರು ಎಲ್.ಕೇಶವರಾವ್ ಮೋಹಿತೆ, ಎಲ್.ಮನೋಹರ್ ಕಾಳೆ, ಆರ್.ಶಿವ ಪನ್ನಾಳ್ ಕರ್, ರವಿ ಮಾವಿನಕುಂಟೆ, ಕವಿತಾ ಚೌಹಾಣ್, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಕೆ.ಜಿ.ಅಶೋಕ್, ಕಸಬಾ ಅಧ್ಯಕ್ಷ ಅಪ್ಪಿ‌ ವೆಂಕಟೇಶ್, ದರ್ಗಾಜೋಗ ಹಳ್ಳಿ ಗ್ರಾ.ಪಂ ಸದಸ್ಯೆ ಶೋಭಾಬಾಯಿ ಪ್ರಕಾಶ್ ರಾವ್ ಸೇರಿದಂತೆ ಮತ್ತಿತರ ಮುಖಂಡರು ಹಾಜರಿದ್ದರು.

LEAVE A REPLY

Please enter your comment!
Please enter your name here