ವಿಜೃಂಭಣೆಯ ಭಗೀರಥ ಜಯಂತೋತ್ಸವ

0
423

ಬೆಂಗಳೂರು: ಕರ್ನಾಟಕ ರಾಜ್ಯ ಉಪ್ಪಾರ ಸಂಘದ ವತಿಯಿಂದ ನಗರದ ಆನಂದ ರಾವ್ ಸರ್ಕಲ್ ನ ಎಸ್ ಜೆ ಆರ್ ಸಿ ಕಾಲೇಜಿನ ಸಭಾಂಗಣದಲ್ಲಿ ಶ್ರೀ ಭಗೀರಥ ಜಯಂತೋತ್ಸವ,‌ಪ್ರತಿಭಾ ಪುರಸ್ಕಾರ ಮತ್ತು ಸಮಾಜದ ಸಮುದಾಯದ ಮುಖಂಡರಿಗೆ ಚುನಾಯಿತ ಜನ ಪ್ರತಿನಿಧಿಗಳಿಗೆ ಮತ್ತು ಪತ್ರಿಕಾ-ಮಾದ್ಯಮ ದವರಿಗೂ ಸನ್ಮಾನ ಸಮಾರಂಭವನ್ನು ಹಮ್ಮಿ ಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ವಹಿಸಿದ್ದ ಮಾಜಿಪ್ರಧಾನಿ ಹೆಚ್.ಡಿ‌ ದೇವೇಗೌಡರವರು ಜ್ಯೋತಿ ಬೆಳಗಿಸಿ ಮಾತನಾಡುತ್ತಾ ಭಗೀರಥ ಮಹರ್ಷಿ ಮತ್ತು ಸಮುದಾಯದ ಬಗ್ಗೆ ಸಾಕಷ್ಟು ವಿಚಾರಗಳು ಮಾತನಾಡಿದರು ಮತ್ತು ಸಮುದಾಯದ ಮುಖಂಡರ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ ಕಾರಣ ದಕ್ಷ ಅಧಿಕಾರ ಆಡಳಿತ ನೀಡಿದ,ನೀಡಬೇಕಿರುವ ಸಾಕಷ್ಟು ಮಂದಿ ಉಪ್ಪಾರ ಸಮುದಾಯದಲ್ಲೀದ್ದೀರಿ ಎಂದರು. ಸಮುದಾಯದವರಿಗೆ ಈ ಗಾಗಲೇ ನಮ್ಮ ಪಕ್ಷದ ವತಿಯಿಂದ ಸಾಕಷ್ಟು ಅವಕಾಶಗಳನ್ನು ನೀಡಿದ್ದೇವೆ ಇನ್ನೂ ನೀಡುವವರಿದ್ದೇವೆ ಎಂಬ ಬರವಸೆ ನೀಡಿದರು.

ಜಾತ್ಯಾತೀತವಾಗಿ ರಾಜ್ಯದ ರಾಜಕೀಯಕ್ಕೆ ಎಲ್ಲ ಸಮುದಾಯದ ನಾಯಕತ್ವದ ಗುಣ ಹೊಂದಿರು ವಂಥಹ ನಾಯಕರುಗಳನ್ನಗುರುತಿಸಿ ಬೆಳೆಸಿ ಬೆಂಬಲಿಸುವಂತಹ ಕೆಲಸ ಎಲ್ಲ ಸಮುದಾಯದಲ್ಲೂ ಅತ್ಯವಶಕವಾಗಿದೆ ಎಂದರು. ಸಮುದಾಯದ ಅಭಿವೃದ್ದಿಗಾಗಿ ಪಕ್ಷಾತೀತವಾಗಿ ದುಡಿದಾಗ ಮಾತ್ರವೇ ಮುಂದಿನ ಪೀಳಿಗೆ ಸಾಮಾಜಿಕವಾಗಿ, ರಾಜಕೀಯ ವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯ ಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಂಎಲ್ಸಿ ರೇವಣ್ಣ, ಪಿಜಿಆರ್, ಸಿಂಧ್ಯ. ಉಪ್ಪಾರಹಟ್ಟಿಯ ನಾಗರಾಜಸ್ವಾಮಿಜಿ ಸಮುದಾಯದ ಮುಖಂಡರು ಮಾಜಿ ಎಂಎಲ್ಸಿ ನೀರಾವರಿಯವರು, ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷರು ಈಶ್ವರಯ್ಯ,,ಕಾರ್ಯದರ್ಶಿ ಕೆಪಿ.ರಮೇಶ್,  ಲಾಥೋರ್, ಲೋಕೇಶಪ್ಪ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದಂತಹ ಅನೇಕ ಮುಖಂಡರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here