ವಿಜ್ಞಾನ ತಂತ್ರಜ್ಞಾನದಿಂದಲೂ ನಲುಗಿ ಹೋಗಿದ್ದೇವೆ….

0
156

ಬಳ್ಳಾರಿ/ತೋರಣಗಲ್:ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಎಷ್ಟು ಅನುಕೂಲಕರ ವಾತಾವರಣ ಇದೆಯೋ ಅಷ್ಟೇ ಪ್ರಮಾಣದಲ್ಲಿ ನಾವು ನಲುಗಿ ಹೋಗುತ್ತಿದ್ದೇವೆ ಎಂದು ಚಿಂತಕ ಡಾ.ವಡ್ಡಗೆರೆ ನಾಗರಾಜ್ ಹೇಳಿದರು.ತೋರಣಗಲ್  ಆಯೋಜಿಸಿದ್ದ ಮನ್ವಂತರ  ಧರೆಯ  ಮಾತು ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.ಕರ್ನಾಟಕದ  ಮೂಲೆ ಯಲ್ಲಿರುವ  ಹೋರಾಟಗಾರರು, ಚಿಂತಕರನ್ನು ಧರೆಯ ಮಾತು ಮೂಲಕ  ಒಗ್ಗೂಡಿಸಿದ  ಧರೆಯ ಮಾತು ತಂಡಕ್ಕೆ  ಅಭಿನಂದನೆ  ಸಲ್ಲಿಸಿದರು.ಅಧ್ಯಾತ್ಮ  ಅನ್ನುವುದು ನಮ್ಮ ಜೀವದ   ಭಾವಕೋಶದ  ಅಂತರ್ ಧರ್ಮವಾಗಬೇಕು. ಅಧ್ಯಾತ್ಮ  ಅನ್ನುವುದು ವಿಚಾರದ, ಹೋರಾಟಕ್ಕೆ  ಸ್ಫೂರ್ತಿಯಾಗಬೇಕು. ಜೀವನ ಕಟ್ಟಿಕೊಳ್ಳಲು  ಸಹಕಾರಿಯಾಗುವಂತಹದಾಗಿರಬೇಕು.ಅಬ್ದುಲ್ ಅವರು ಮಾತನಾಡಿ, ಸಾಮಾಜಿಕ  ಜಾಲತಾಣಗಳು ಕಾಗದ  ರಹಿತ  ಮಾಧ್ಯಮ ಎಂದರು. ವಿಚಾವಂತರು, ಚಿಂತಕರು, ಕವಿಗಳು,  ಅಲ್ಪಸಂಖ್ಯಾತರು ಯಾರೇ ಇರಲಿ ಸಮಾಜದಲ್ಲಿ ಪೆನ್ನಿಗೆ  ಇರುವ  ಬಲ –  ನಿಮ್ಮ ಗನ್ನಿಗೆ ಇಲ್ಲ  ಎಂದರು.  ಸಾಹಿತಿಗಳನ್ನು  ಕವಿಗಳನ್ನು , ವಿಚಾರವಂತರನ್ನು  ಹತ್ತಿಕ್ಕುವ  ಶಕ್ತಿಗಳಿಗೆ  ಮಾತಿನ ಚಾಟಿ  ಬೀಸಿದರು.

ಪೀರ್  ಭಾಷ ಬಾವಾಜಿ  .

ಫೇಸ್ಬುಕ್  , ವಾಟ್ಸಪ್  ,ಎಂಬ ಸಾಮಾಜಿಕ ಜಾಲತಾಣಗಳಮೂಲಕ ಒಗ್ಗೂಡಿ ಈ ಧರೆಯ ಮಾತು   ಕಾರ್ಯಕ್ರಮವನ್ನು  ಆಯೋಜಿಸಿರುವ  ಈ ಧರೆಯ ಮಾತು  ಯುವಶಕ್ತಿಗೆ ಅಭಿನಂದಿಸಿದರು.ವಿಜಯನಗರದ  ಹಕ್ಕು ಕರ್ನಾಟಕದ ಹಕ್ಕು ಎಂಬ ಮೂಲಕ ಹಕ್ಕೊತ್ತಾಯ  ಮೊಳಗಿಸಿದ  ಸ್ಥಳ  ತೋರಣಗಲ್ಲು ಎಂಬುದು  ನಮ್ಮ ಹೆಮ್ಮೆ. ಇದು  ಮುಂದೊಂದು  ದಿನ  ಕರ್ನಾಟಕದ ಧ್ವನಿಯಾಗಿ  ಮೊಳಗಲಿದೆ ಎಂದರು . ರಾಷ್ಟ್ರೀಯತೆಯ  ಹೆಸರಿನಲ್ಲಿ  ಗಲಭೆಗಳನ್ನು  ಸೃಷ್ಟಿಸಲಾಗುತ್ತಿದೆ. ರಾಷ್ಟ್ರೀಯತೆ  ಯನ್ನು ಕೇವಲ   ಹುನ್ನಾರಕ್ಕಾಗಿ , ರಾಜಕೀಯ ಪಕ್ಷಗಳು  , ಮೂಲಭೂತವಾದಿ  ಸಂಘಟನೆಗಳಿಂದ   ಸೃಷ್ಟಿಸಲಾಗಿದೆ.ನಾಡಿನ  ಅಭಿಮಾನ  ಕಟ್ಟಿಕೊಂಡಾಗ  ಇಂತಹ ಪ್ಯಾಸಿಸಂ   ಸಂಘರ್ಷಗಳನ್ನು  ಗಲಭೆಗಳನ್ನು  ಹತ್ತಿಕ್ಕಬಹುದು .ಆದ್ದರಿಂದ ಪ್ರಸ್ತುತ  ದಿನಮಾನಗಳಲ್ಲಿ  ರಾಷ್ಟ್ರೀಯತೆಗಿಂತ  ನಾಡಿನ  ಪ್ರೇಮ  ಹೆಚ್ಚಾಗಬೇಕಿದೆ  ಹಾಗು ನಾವು ವಿಶ್ವಮಾನವರು ಆಗಬೇಕೆಂದು  ಹೇಳಿದರು.

LEAVE A REPLY

Please enter your comment!
Please enter your name here