ವಿದ್ಯಾರ್ಥಿಗಳಿಂದ ಕಾಲ್ನಡಿಗೆ ಜಾಥ.‌

0
103

ಬೆಂಗಳೂರು/ಕೆ.ಆರ್.ಪುರ:- ನಗರದಲ್ಲಿ ವಾಹನ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ‌ಇಂದು ಕೆ.ಆರ್.ಪುರ ಟ್ರಾಫಿಕ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಎಸಿಪಿ ಸಲೀಂ ಅಧ್ಯಕ್ಷತೆಯಲ್ಲಿ, ಕೆ.ಆರ್.ಪುರ ಠಾಣಾ ಇನ್ಸ್ಪೆಕ್ಟರ್ ಸಂಜೀವ ರಾಯಪ್ಪ  ನೇತೃತ್ವದಲ್ಲಿ ಸಾವಿರಾರು ಶಾಲಾ ಮಕ್ಕಳು ಸೇರಿ ಕೆ.ಆರ್.ಪುರ ಪದವಿ ಪೂರ್ವ ಕಾಲೇಜಿನಿಂದ ಸರ್ಕಾರಿ ಆಸ್ಪತ್ರೆ ವರೆಗೆ ಕಾಲ್ನಡಿಗೆ ಜಾಥ ಮ‌ೂಲಕ ಜನರಲ್ಲಿ ಅರಿವು ಮೂಡಿಸಿದರು.

ಟ್ರಾಫಿಕ್ ನಿಯಮ ತಪ್ಪದೆ ಪಾಲಿಸಿ, ಕುಡಿದು ವಾಹನ ಚಲಾಯಿಸಬೇಡಿ, ಜೀಬ್ರಾ ಕ್ರಾಸಿಂಗ್ ತಪ್ಪದೆ ಪಾಲಿಸಿ, ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ಅತಿ ವೇಗದ ಚಾಲನೆ ಬೇಡ, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಬೇಡಾ , ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸಿ ಅನ್ನುವ ಘೋಷಣೆಗಳು ಕೂಗುವ ಮೂಲಕ ಜನರಲ್ಲಿ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಟ್ರಾಫಿಕ್ ಎಸ್ಐ ದರ್ಮರಾಜು, ರಾಮಾ ನಾಯಕ್, ಎಎಸ್ಐ ರಾಮಾ ನಾಯಕ್, ಸಿಬ್ಬಂದಿ, ಹೋಂಗಾರ್ಡ್ಸ್ ಹಾಜರಿದ್ದರು.

LEAVE A REPLY

Please enter your comment!
Please enter your name here