ವಿದ್ಯಾರ್ಥಿಗಳಿಗೆ ಅಭಿನಂದನ ಸಮಾರಂಭ..

0
518

ಚಿಕ್ಕಬಳ್ಳಾಪುರ/ಚಿಂತಾಮಣಿ:ವಿದ್ಯಾರ್ಥಿ ಜೀವನದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಪಿಯುಸಿ ಪ್ರಮುಖ ಘಟ್ಟವಾಗಿದ್ದು.ಉತ್ತಮ ಅಂಕಪಡೆದು ಭವಿಷ್ಯ ರೂಪಿಸಿಕೊಳ್ಳಲು ಬೇಕು ಎಂದು ಲಕ್ಷ್ಮೀ ವಿದ್ಯಾಸಂಸ್ಥೆ ಅಧ್ಯಕ್ಷ ಸಿ.ಎನ್ ನರಸಿಂಹ ರೆಡ್ಡಿ ತಿಳಿಸಿದರು.

ನಗರದ ಲಕ್ಷ್ಮೀ ವಿದ್ಯಾಸಂಸ್ಥೆಯಲ್ಲಿ ವಿಕ್ರಮ್ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಎಕ್ಸ್ ಲ್ ಅಕಾಡೆಮಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಅಭಿನಂದನ ಸಮಾರಂಭದಲ್ಲಿ ಅವರು ಮಾತನಾಡಿದರು .
ಕಾಲೇಜಿನಲ್ಲಿ ನುರಿತ ಉಪನ್ಯಾಸಕರಿದ್ದು ,ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುತ್ತಿದಗದಾರೆ .ಎಸ್.ಎಸ್.ಎಲ್.ಸಿ ಮುಗಿದನಂತರ ಪಿಯುಸಿ ಸೇರಲು ರಾಜ್ಯದ ವಿವಿಧ ಭಾಗಗಳಿಗೆ ವಿಧ್ಯಾರ್ಥಿಗಳು ತೆರಳುತ್ತಿದ್ದರು ಈ ವಿಷಯವನ್ನು ಮನಗಂಡು ಚಿಂತಾಮಣಿಯಲ್ಲಿ ಪಿಯುಸಿ ಕಾಲೇಜು ತೆರೆದು ನುರಿತ ಉಪನ್ಯಾಸಕರಿಂದ ಗುಣಮಟ್ಟದ ಬೋಧನೆ ಮಾಡಲಾಗುತ್ತಿದೆ ಎಂದರು .
ಈ ಸಂದರ್ಭದಲ್ಲಿ ಎಕ್ಸ್ ಲ್ ಅಕಾಡೆಮಿ ನಿರ್ದೇಶಕ ಪಣಿಶರ್ಮ,ಕಿರಣಕುಮಾರ್ ,ಶಾಲೆ ಉಪಾಧ್ಯಕ್ಷ ಹುಲಿಯಮ ,ಸಂಸ್ಥೆಯ ಕೃಷ್ಣಾ ರೆಡ್ಡಿ ,ಎಸ್.ವಿ ಸೋಮಣ್ಣ , ಎಂ .ಪ್ರಸಾದ್ , ಕಾಲೇಜಿನ ಪ್ರಾಂಶುಪಾಲ ರಾಜಶೇಖರ ,ವಿಧ್ಯಾರ್ಥಿಗಳು ,ಹಾಗೂ ವಿಧ್ಯಾರ್ಥಿಗಳ ಪೋಷಕರು ಉಪಸ್ಥಿತಿಯಿದರು.

LEAVE A REPLY

Please enter your comment!
Please enter your name here