ವಿದ್ಯಾರ್ಥಿಗಳಿಗೆ ಉಚಿತ ಬಟ್ಟೆ ಮತ್ತು ಪುಸ್ತಕಗಳ ವಿತರಣೆ..

0
189

ಬಳ್ಳಾರಿ /ಹೊಸಪೇಟೆ:ತಾಲೂಕಿನ ಕಮಲಾಪುರ ಪಟ್ಟಣದಲ್ಲಿ ಗೃಹ ರಕ್ಷಕದಳದ ವತಿಯಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ಬಟ್ಟೆ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು. ಪಟ್ಟಣದ ಪ್ರತಿಭವಂತ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಹಿಸುವ ನಿಟ್ಟಿನಲ್ಲಿ ಗೃಹರಕ್ಷದಳದವರು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪ.ಪಂ ಅಧ್ಯಕ್ಷ ಬಿ.ಆರ್ ಮಳಲಿ ಸೋಮವಾರ ಚಾಲನೆ ನೀಡಿದರು. ಪ್ರತಿ ತಿಂಗಳು ಪಟ್ಟಣದ ಪ್ರತಿಯೊಂದ ಶಾಲೆಗೆ ಬೇಟಿ ನೀಡಿ ಅಲ್ಲಿನ ಬಡ ಮಕ್ಕಳಿಗೆ ಉಚಿತ ಬಟ್ಟೆ ಮತ್ತು ಪುಸ್ತಕಗಳನ್ನು ನೀಡಲಾಗುವುದು ಎಂದು ಕಮಲಾಪುರ ಗೃಹರಕ್ಷಕ ದಳ ಘಟಕದ ಅಧ್ಯಕ್ಷ ಉದಯಚಂದ್ರ ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕ ಭೀಮಪ್ಪ, ಪ.ಪಂ ಸ್ಥಾಯಿಸಮಿತಿ ಅಧ್ಯಕ್ಷ ಅಬ್ದುಲ್ ಜಂತೆ, ಸದಸ್ಯರಾದ ಹನುಮಂತ ನಾಯಕ, ಸಮಾಜ ಸೇವಕರಾದ ತಿಪ್ಪೇಸ್ವಾಮಿ, ಶ್ರೀನಿವಾಸ ಸೇರಿದಂತೆ ಗೃಹ ರಕ್ಷಕದಳದ ಸಿಬ್ಬಂದಿ ಹಾಜರಿದ್ದರು.

LEAVE A REPLY

Please enter your comment!
Please enter your name here