ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ…

0
156

ಚಿಕ್ಕಬಳ್ಳಾಪುರ:ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯ ಕ್ರಮ…

ಚಿಕ್ಕಬಳ್ಳಾಪುರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ. ವಕೀಲರ ಸಂಘ ಮತ್ತು ಕೆಂಪೇಗೌಡ ಕಾನೂನು ವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ” NALSA (Legal services To Victims. Of Acid Attacks)” Scheme-2016 ರ ಕಾನೂನು ಅರಿವು ಕಾರ್ಯ ಕ್ರಮವನ್ನು ಗೌರವಾನ್ವಿತ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಉದ್ಗಾಟಿಸಿ ಮಾತನಾಡಿ ಸಮಾಜದಲ್ಲಿ ಅಪರಾಧ ಗಳು ನಡೆಯುತ್ತವೆ ಕಾರಣ ಅವರಿಗೆ ಕಾನೂನಿನ ಬಗ್ಗೆ ಅರಿವು ಇಲ್ಲದೆ ಇರುವುದರಿಂದ ಆದ್ದರಿಂದ ಇಂದಿನ ಯುವಕ ಯುವತಿಯರಿಗೆ ಕಾನೂನಿನ ಅರಿವು ಬಹಳ ಮುಖ್ಯ ಎಂದರು.. ಆ್ಯಸಿಡ್ ದಾಳಿಯ ಬಗ್ಗೆ ಪ್ರಧಾನ ನ್ಯಾಯಾಧೀಶರಾದ ಶ್ರೀಮತಿ ಅನುಪಮರವರು ಮಾತನಾಡಿ ಆ್ಯಸಿಡ್ ದಾಳಿ ಹೆಣ್ಣು ಮಕ್ಕಳ ಮೇಲೆ ಹೆಚ್ಚಾಗಿ ನಡೆಯುತ್ತದೆ..ಈ ಆ್ಯಸಿಡ್ ದಾಳಿ ಬಹಳ ಅಪಾಯಕಾರಿ ಯಾಕೆಂದರೆ ಅದು ಬರಿ ದೇಹವನ್ನು ಮಾತ್ರವೇ ಸುಡುವುದಿಲ್ಲ ಮೂಳೆಯನ್ನ ಸಹ ಸುಡುತ್ತದೆ.ಮಾನವನಿಗೆ ಮೊದಲು ಮಾನವೀಯತೆ ಮುಖ್ಯ ಆದಷ್ಟು ಈ ಕ್ರೂರವಾದ ಆ್ಯಸಿಡ್ ದಾಳಿ ಮಾಡುವ ಮೊದಲು ಯೋಚನೆ ಮಾಡಬೇಕಾಗುತ್ತದೆ
ಎಂದು ತಿಳಿಸಿದರು.ವೇದಿಕೆಯಲ್ಲಿ ಇತರೆ ನ್ಯಾಯಾಧೀಶರಾದ ಎಸ್.ಎಂ.ಅರುಟಗಿ.ಕೆ.ವಿ.ಬಾಲಾಜಿ. ವಕೀಲರ ಸಂಘದ ನರಸಿಂಹ ಮೂರ್ತಿ.ಪ್ರಕಾಶ.ನವೀನ್ ಕುಮಾರ್ ಕಾಲೇಜಿನ ಪ್ರಾಂಶುಪಾಲರಾದ ಶೋಭಾರವರು ಇದ್ದರು.

ವರದಿಗಾರರು
ಅರಿಕೆರೆ ಮುನಿರಾಜು
ನಮ್ಮೂರು ಟಿವಿ
ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here