ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ

0
111

ವಿಜಯಪುರ-ಸಿಂದಗಿ:ಅಪರಾಧ ತಡೆ ಮಾಸಾಚರಣೆ: ವಿದ್ಯಾರ್ಥಿಗಳಿಗೆ ಕಾನೂನು ಅರಿವು: ಪಿಎಸ್ಐ ನಿಂಗಪ್ಪ ಪೂಜಾರಿ

ಸಮಾಜದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ತಡೆಗಟ್ಟಲು
ಸಾರ್ವಜನಿಕರು ಹಾಗೂ ವಿದಾರ್ಥಿಗಳು ಕೇಲವು ಮುಂಜಾಗ್ರತೆ ಕ್ರಮಗಳನ್ನು
ಕೈÀಗೊಳ್ಳಬೇಕು ಎಂದು ಠಾಣಾಧಿಕಾರಿ ನಿಂಗಪ್ಪ ಪೂಜಾರಿ ಹೇಳಿದರು.
ಅವರು ಸಿಂದಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೊಲೀಸ್ ಠಾಣೆಯಿಂದ
ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ
ಮಾತನಾಡಿದರು.
ತಮ್ಮ ಸುತ್ತಮುತ್ತಲಿನ ಸಮಾಜ ಘಾತುಕ ಚಟುವಟಿಕೆ, ಅನುಮಾನಸ್ಪಾದ
ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿದಾರರ
ವಿವರಗಳನ್ನು ಗೌಪ್ಯವಾಗಿಡುತ್ತದೆ ನಾವು ನೀವು ಅಪರಾಧ ತಡೆಯುವ
ಪ್ರಯತ್ನ ಮಾಡಿ ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡೋಣ ಎಂದು
ವಿದ್ಯಾರ್ಥಿಗಳಿಗೆ ತಿಳುವಳಿಕೆ ಜೊತೆಗೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸಿಪಿಐ ಎಸ್. ಎಂ. ನ್ಯಾಮಣ್ಣವರ ಮಾತನಾಡಿ, ವಿಶ್ವದಲ್ಲಿ
ಸಮಾನ ಮನಸ್ಕರಿದ್ದರೆ ಅಪರಾಧ ಪ್ರಕರಣಗಳು ನಡೆಯುತ್ತಿರಲಿಲ್ಲ.
ಗೊತ್ತಿಲ್ಲದೆ ಮಾಡುವ ಅಪರಾಧವೂ ಕೂಡಾ ಶಿಕ್ಷರ್ಹವೆ. ವಿದ್ಯಾರ್ಥಿಗಳಿಗೆ ಕನಿಷ್ಠ
ಪಕ್ಷ ಕಾನೂನಿನ ಬಗ್ಗೆ ಜ್ಞಾನವಿರಬೇಕು. ಅಪ್ರಾಪ್ತರು ಅಪರಾಧ ಮಾಡಿದರೂ
ಕೂಡಾ ಅವರಿಗೆ ಎಲ್ಲ ರೀತಿಯ ಕಾನೂನು ಅನ್ವಯಿಸುತ್ತದೆ. ಅಪಘಾತ ಅಕಸ್ಮಿಕವಾರೂ
ಅದು ಕೂಡಾ ಅಪರಾಧದ ಒಂದು ಭಾಗವೇ ಆಗಿದೆ. ಮುಂದೆ ಹೆಜ್ಜೆಯಿಡುವ
ಮೊದಲು ಸರಿಯಾಗಿ ಯೋಚಿಸಿರಿ ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಂಕರ ಅಮಾತೆ, ಪ್ರೊ.
ನಿಂಗಪ್ಪ ತೆಗ್ಗೆಳ್ಳಿ, ಪ್ರೊ. ಮಠಪತಿ, ಪ್ರೊ, ಮೋರಟಗಿ, ಪ್ರೊ, ಮುದ್ದೇಬಿಹಾಳ,
ಪ್ರೊ. ಬಿರಾದಾರ, ಪ್ರೊ, ರಜಪೂತ, ಪ್ರೊ, ಚೌಧರಿ ಹಾಗೂ ಪೊಲೀಸ್ ಸಿಬ್ಬಂದಿಗಳು
ಉಪಸ್ಥಿತರಿದ್ದರು.

ವರದಿ: ನಮ್ಮೂರು ಟಿವಿ
ನಂದೀಶ ಸಿಂದಗಿ

LEAVE A REPLY

Please enter your comment!
Please enter your name here