ವಿದ್ಯಾರ್ಥಿಗಳ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

0
225

ಬಳ್ಳಾರಿ/ಹೊಸಪೇಟೆ: ನಗರದ ಪ್ರೌಡ ದೇವರಾಯ ತಾಂತ್ರಿಕ ಮಹಾವಿದ್ಯಾಲಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಲವು ಬೇಡಿಕೆಗಳನ್ನುಈಡೇರಿಸ ಬೇಕು ಎಂದು ಒತ್ತಾಯಿಸಿ ನಗರದಲ್ಲಿ ಗುರುವಾರಪ್ರತಿಭಟನೆ ನಡೆಸಿ ಗ್ರೇಡ್-೨ ತಹಸೀಲ್ದಾರ್ ರೇಣುಕಮ್ಮ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ  ಪತ್ರ ಸಲ್ಲಿಸಿ ಒತ್ತಾಯಿಸಿದರು.

ವಿಟಿಯು ವಿಶ್ವವಿದ್ಯಾನಿಲಯ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಡಿಸೆಂಬರ್೨೦೧೬ರಲ್ಲಿ ನಡೆದ ಇಂಜಿನಿಯರಿಂಗ್ ಪರೀಕ್ಷೆಗಳ ಫಲಿತಾಂಶವನ್ನು ವಿಟಿಯು  ಸಾಕಷ್ಟು ವಿಳಂಬವಾಗಿ ಪ್ರಕಟಿಸಿದ್ದುದ ರಿಂದ ವಿದ್ಯಾರ್ಥಿಗಳಿಗೆ ತೀವ್ರತೊಂದರೆಯನ್ನುಂಟು ಮಾಡಿದೆ. ಸಾವಿರಾರು ವಿದ್ಯಾರ್ಥಿಗಳಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ಆದರ ಫಲಿತಾಂಶಮತ್ತು ಮರುಮೌಲ್ಯಮಾಪನದ ಫಲಿತಾಂಶ ಪರೀಕ್ಷೆಯಹಿಂದಿನ ದಿನ ರಾತ್ರಿ ಪ್ರಕಟಗೊಂಡಿತ್ತು. ಇದರೊಂದಿಗೆ,ಕ್ರಾಷ್ ಸೆಮಿಸ್ಟರ್‌ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳಂತೂಕೇವಲ ೫೦ ದಿನಗಳ ಅಂತರದಲ್ಲಿ ೧೬ರಿಂದ ೨೦ವಿಷಯಗಳ ಪರೀಕ್ಷೆ ಬರೆಯುವಂತಾಗಿದೆ.

ಇನ್ನೂ ಕೆಲವು ವಿದ್ಯಾರ್ಥಿಗಳು ಒಂದೇ ದಿನ ಎರಡುಪರೀಕ್ಷೆಗಳನ್ನು ಎದುರಿಸಬೇಕಾದ ಪರಿಸ್ಥಿತಿಯೂ ಇತ್ತು!ಪರೀಕ್ಷೆಯ ಫಲಿತಾಂಶದ ಪ್ರಕಟಣೆಯಲ್ಲಿನ ಈ ಅನಿಶ್ಚಿತತೆವಿದ್ಯಾರ್ಥಿಗಳಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚುವಂತೆಮಾಡಿತು. ಇದು ಮತ್ತಷ್ಟು ವಿದ್ಯಾರ್ಥಿಗಳುಅನುತ್ತೀರ್ಣರಾಗುವುದಕ್ಕೂ ಕಾರಣವಾಗಲಿದೆ.

ಅಲ್ಲದೇ, ೨೦೧೪-೧೫ರ ಮತ್ತು ಅದರ ಮುಂಚಿನಬ್ಯಾಚ್‌ನ ವಿದ್ಯಾರ್ಥಿಗಳೇ ೨೦೧೦ರ ಸ್ಕೀಮ್ ಓದುತ್ತಿರುವಕೊನೆಯ ಸಾಲು. ೨೦೧೫-೧೬ರಿಂದ ವಿಟಿಯು ಸಿಬಿಸಿಎಸ್ಮಾದರಿಯನ್ನು ಅಳವಡಿಸಿಕೊಂಡಿದೆ. ಸಿಬಿಸಿಎಸ್ಮಾದರಿಯ ರಚನೆಯು ಹಿಂದಿನ ಎಲ್ಲಾ ಮಾದರಿಗಳಿಗಿಂತವಿಭಿನ್ನವಾಗಿದ್ದು, ೨೦೧೦ ಮಾದರಿಯಲ್ಲಿ ಓದುತ್ತಿರುವವಿದ್ಯಾರ್ಥಿಗಳು ಒಂದು ಪಕ್ಷ ಮುಂದಿನ ವರ್ಷಕ್ಕೆ ಅರ್ಹತೆಇಲ್ಲದೆ ತಡೆಹಿಡಿಯಲಾದಲ್ಲಿ, ಅವರುಗಳು ಕೋರ್ಸ್‌ನಉಳಿದ ವರ್ಷಗಳನ್ನು ಹೊಸದೊಂದು ಮಾದರಿಯಲ್ಲಿಕಲಿಯಬೇಕಾಗುತ್ತದೆ. ಕೋರ್ಸ್‌ನ ಅರ್ಧ ಭಾಗವನ್ನು೨೦೧೦ರ ಮಾದರಿಯಲ್ಲಿ ಹಾಗು ಉಳಿದರ್ಧ ಭಾಗವನ್ನುಸಿಬಿಸಿಎಸ್ ಮಾದರಿಯಲ್ಲಿ ಕಲಿಯುವುದು ವಿದ್ಯಾರ್ಥಿಗಳಸಮಗ್ರ ಜ್ಞಾನಾರ್ಜನೆಗೆ ಭಂಗವನ್ನುಂಟು ಮಾಡುತ್ತದೆ. ಇದುವಿಶ್ವವಿದ್ಯಾಲಯದ ಗುರಿಯಾದ ಉತ್ತಮ ಇಂಜಿನಿಯರ್‌ಗಳಸೃಷ್ಠಿಗೆ ತೊಡಕನ್ನುಂಟುಮಾಡುತ್ತದೆ.

ಇದಕ್ಕೆ ಪರಿಹಾರವಾಗಿ ತಾವು ತಡೆಹಿಡಿಯಲಾದ ೨೦೧೦ಮಾದರಿಯ ಅರ್ಹ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹಳೆಯಮಾದರಿಯಂತೆಯೇ ಬೋಧನೆಯ ವ್ಯವಸ್ಥೆ ಮಾಡಬೇಕೆಂದುಕಾಲೇಜುಗಳಿಗೆ ನಿರ್ದೇಶನ ನೀಡಿದ್ದೀರಿ. ಆದರೆ ಹಲವುಕಾಲೇಜುಗಳಲ್ಲಿ ಈಗ ಇರುವ ತರಗತಿಗಳಿಗೇ ಪ್ರಾಧ್ಯಾಪಕರಕೊರತೆಯಿದೆ. ಜೊತೆಗೆ ಮೂಲ ಸೌಕರ್ಯಗಳ ಕೊರತೆಯೂಇದ್ದು, ಇಂತಹ ಪರಿಸ್ಥಿತಿಯಲ್ಲಿ ಕಾಲೇಜುಗಳಲ್ಲಿ ಬೇರೆ ಬೇರೆತರಗತಿಗಳನ್ನು ಸಮಾನಾಂತರವಾಗಿ ನಡೆಸುವುದು ಅಸಾಧ್ಯ.ಕಾಲೇಜುಗಳು ನಾಮಕಾವಸ್ಥೆಗೆ ಬೋಧನೆ ಮಾಡಿರುವಂತೆಮಾಡಿ, ವಿದ್ಯಾರ್ಥಿಗಳನ್ನು ನಡು ನೀರಿನಲ್ಲಿ ಕೈಬಿಡುವುದುಖಂಡಿತ. ಇದು ಸಮಸ್ಯೆಯನ್ನು ಪರಿಹರಿಸುವ ಬದಲುಮತ್ತಷ್ಟು ಉಲ್ಬಣಗೊಳಿಸುತ್ತದೆ.

ಇನ್ನೊಂದೆಡೆ, ಸಿಬಿಸಿಎಸ್‌ನ ಅಗಾಧ ಪಠ್ಯಕ್ರಮವನ್ನು,ಸೆಮಿಸ್ಟರ್ ಪದ್ಧತಿಯಲ್ಲಿ ಸಿಗುವ ಕಡಿಮೆ ಅವಽಯಲ್ಲಿ,ಸಮಯಕ್ಕೆ ಸರಿಯಾಗಿ ಪಠ್ಯಕ್ರಮವನ್ನು ಮುಗಿಸಲಾಗದೇಪ್ರಾಧ್ಯಾಪಕರು ಒದ್ದಾಡುತ್ತಿದ್ದಾರೆ. ಇದು ಫಲಿತಾಂಶದಲ್ಲಿನತೀವ್ರ ಇಳಿಕೆಗೆ ಕಾರಣವಾಗಿದೆ. ಇನ್ನು ಫಲಿತಾಂಶಪ್ರಕಟಣೆಯಲ್ಲಿನ ವಿಳಂಬವು ಸಿಬಿಸಿಎಸ್ ವಿದ್ಯಾರ್ಥಿಗಳಿಗೆಹೆಚ್ಚು ಪಟ್ಟು ನೀಡಿದೆ. ಅಲ್ಲದೇ, ಸಿಬಿಸಿಎಸ್ವಿದ್ಯಾರ್ಥಿಗಳಿಗೆ ಫೇಲಾದ ವಿಷಯದ ಅಂಕಗಳನ್ನುಸೊನ್ನೆಯೆಂದು ನಮೂದಿಸುವುದರ ಫಲವಾಗಿ ವಿದ್ಯಾರ್ಥಿಗಳಿಗೆಮರುಮೌಲ್ಯಮಾಪನಕ್ಕೆ ಹೋಗಬೇಕೋ ಬೇಡವೋಎಂಬುದನ್ನು ನಿರ್ಧರಿಸಲು ತೊಂದರೆಯಾಗುತ್ತಿದೆ.

ಈ ಪರಿಸ್ಥಿತಿಯನ್ನು ವಿಶೇಷವೆಂದು ಪರಿಗಣಿಸಿ, ೨೦೧೦ರಸ್ಕೀಮ್‌ನ ವಿದ್ಯಾರ್ಥಿಗಳಿಗೆ ಇಯರ್ ಬ್ಯಾಕ್ ಮತ್ತು ಕ್ರಿಟಿಕಲ್ಇಯರ್ ಬ್ಯಾಕ್ ವ್ಯವಸ್ಥೆಯನ್ನು ತಗೆದುಹಾಕಿ. ಸಿಬಿಸಿಎಸ್ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ನಡೆಸಿ. ಸಿಬಿಸಿಎಸ್ವಿದ್ಯಾರ್ಥಿಗಳುಗಳಿಸಿರುವ ಅಂಕಗಳನ್ನು ಪ್ರಕಟಿಸಬೇಕು ಎದುಒತ್ತಾಯಿಸಿ ನಗರದ ಪ್ರೌಡದೇವರಾಯ ತಾಂತ್ರಿಕಮಹಾವಿದ್ಯಾಲಯ ವಿದ್ಯಾರ್ಥಿಗಳು ಮನವಿ ಪತ್ರದಲ್ಲಿಒತ್ತಾಯಿಸಿದ್ದಾರೆ.

ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ಜಿಲ್ಲಾಕಾರ್ಯದರ್ಶಿ ಜಿ. ಸುರೇಶ್, ಎಐಡಿಎಸ್‌ಓವಿದ್ಯಾರ್ಥಿಸಂಘಟನೆಯ ರಾಜ್ಯಾಧ್ಯಕ್ಷ ಡಾ. ಪ್ರಮೋದ್, ಜಿಲ್ಲಾಧ್ಯಕ್ಷ ಗೋವಿಂದ್, ವಿಟಿಯು ವಿದ್ಯಾರ್ಥಿಗಳ ಹೋರಾಟ ಸಮಿತಿಯಸಂಚಾಲಕರಾದ ಜಗದೀಶ್.ವಿ.ಎನ್, ಇಂಜಿನಿಯರಿಂಗ್ವಿದ್ಯಾರ್ಥಿಗಳಾದ ಆಕಾಶ ಬಾಬು, ಪ್ರದೀಪ್, ತಿಲಕ್,ಗಣೇಶ್, ಶಿವು, ಆಸಿಫ್, ದಸ್ತಗಿರಿ ಸಾಬ್ ಸೇರಿದಂತೆನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿಭಾಗವಹಿಸಿದ್ದರು.

LEAVE A REPLY

Please enter your comment!
Please enter your name here