ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ

0
157

ಬಳ್ಳಾರಿ /ಹೊಸಪೇಟೆ. ತಾಲೂಕಿನ ಕಮಲಾಪುರ ಬಳಿ ಇರುವ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್ ಗಳನ್ನು ವಿತರಿಸಲಾಯಿತು.
ಸರ್ಕಾರದ ವತಿಯಿಂದ ವಿದ್ಯಾರ್ಥಿನಿಯರಿಗೆ ನೀಡಲಾಗುವ 2017-18ನೇ ಸಾಲಿನ ಉಚಿತ ಸೈಕಲ್ ಗಳನ್ನು ವಿದ್ಯಾಲಯದ 8ನೇ ತರಗತಿಯ 41 ವಿದ್ಯಾರ್ಥಿನಿಯರಿಗೆ ವಿತರಿಸಲಾಯಿತು. ವಿದ್ಯಾಲಯದ ಎಸ್.ಡಿ.ಎಂ.ಸಿ ಅಧ್ಯಕ್ಷೆ ಶೋಭಾ ಸೈಕಲ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾಲಯದ ವಾರ್ಡನ್ ಶೈಲಜಾ, ಮುಖ್ಯಗುರು ಲಲಿತ ವೆಂಕೋಬ ನಾಯಕ, ಶಿಕ್ಷಕಿ ಮಂಜುಳಾ ದೇವಿ, ಅಂಬಿಕಾ, ಪುಷ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here