ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ಸಭೆ…

0
162

ಮಂಡ್ಯ/ಮಳವಳ್ಳಿ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವತಿಯಿಂದ ಮಳವಳ್ಳಿ ತಾಲ್ಲೂಕಿನ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳ ನಿವಾರಣೆ ಗಾಗಿ ಜನಸಂಪರ್ಕ ಸಭೆ ಮಳವಳ್ಳಿ ಪಟ್ಟಣದ ಸೆಸ್ಕಾಂ ಆವರಣದಲ್ಲಿ ನಡೆಸಲಾಯಿತು. .
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಎಸ್ ಇ ಎ.ಎನ್ ರವಿಶಂಕರ್ ಮಾತನಾಡಿ, ತಾಲ್ಲೂಕಿನಲ್ಲಿ ಉತ್ತಮ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ನೀಡುತ್ತಿದ್ದು. ಗ್ರಾಹಕರ ತ್ರೈಮಾಸಿಕ ಸಭೆಯನ್ನು ನಡೆಸಲಾಗುತ್ತಿದೆ. ಈಗಾಗಲೇ ಐಪಿ ಸೆಟ್. ವಿದ್ಯುತ್ ಕಂಬ ವನ್ನು ಆಳವಡಿಸುವ ಬಗ್ಗೆ ತ್ವರಿತಗತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಯಾವುದರೂ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹಾರ ಮಾಡುವ ದೃಷ್ಟಿಯಿಂದ ಜನ ಸಂಪರ್ಕ ಸಭೆ ನಡೆಸಲಾಗುತ್ತಿದೆ ಎಂದರು. ಕಾರ್ಯಕ್ರಮ ದಲ್ಲಿ ಇಇ ನಾಗಭೂಷಣ. ಮದ್ದೂರು, ಮಂಡ್ಯ ಶಾಖೆಯ ಇಇ ರವಿಶಂಕರ್, ಗ್ರಾಮಾಂತರ ಎಇಇ ಪ್ರೇಮಕುಮಾರ್, ಪಟ್ಟಣದ ಎಇಇ ಪರಮೇಶ್ವರಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್.ಎನ್ ವಿಶ್ವಾಸ್ ಸೇರಿದಂತೆ ಮತ್ತಿತ್ತರರು ಇದ್ದರು.

LEAVE A REPLY

Please enter your comment!
Please enter your name here