ವಿಧಾನಸೌಧಕ್ಕೆ ಸೂಟ್ ಕೇಸ್ ತುಂಬಿಕೊಂಡು ಹೋದ್ರೆ ಮಾತ್ರ ಕೆಲಸವಾಗುತ್ತಂತೆ !

0
387

ಬಳ್ಳಾರಿ /ಹೊಸಪೇಟೆ :ವಿಧಾನಸೌಧಕ್ಕೆ ಸೂಟಿಕೇಸ್ ತುಂಬಿಕೊಂಡು ಹೋದ್ರೆ ಮಾತ್ರ ಕೆಲಸವಾಗುತ್ತಂತೆ !

* ಸಿಎಂ ಸಿದ್ದರಾಮಯ್ಯನವರ ಭರವಸೆ ಒಂದೆ ದಿನಕ್ಕೆ ಮಾತ್ರ ಸೀಮಿತವಂತೆ !

* ಹಂಪಿ ಕನ್ನಡ ವಿವಿ ಕುಲಪತಿಯಿಂದ ವಿವಾದಾತ್ಮಕ ಹೇಳಿಕೆ !

ಆಂಕರ್, ಸಿಎಂ ಸಿದ್ದರಾಮಯ್ಯನವರು ನೀಡುವ
ಭರವಸೆ ಒಂದೇ ದಿನಕ್ಕೆ ಮಾತ್ರ ಸೀಮಿತವಂತೆ,
ವಿಧಾನಸೌಧಕ್ಕೆ ಸೂಟಕೇಸ ತುಂಬಾ ಹಣ ತುಂಬಿಕೊಂಡು ಹೋದ್ರೆ ಮಾತ್ರ ಕೆಲಸವಾಗುತ್ತಂತೆ. ಹೀಗಾಗೇ ವಿಶ್ವ ವಿದ್ಯಾಲಯಗಳ ಅಭಿವೃದ್ಧಿಯಾಗುತ್ತಿಲ್ಲವಂತೆ, ಹೀಗಂತ ವಿವಾದಾತ್ಮಕ ಹೇಳಿಕೆಯನ್ನು ನೀಡಿರೋದು ಪ್ರತಿಪಕ್ಷದ ನಾಯಕರಲ್ಲ, ಬದಲಾಗಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿಗಳೆ ಸ್ವಂತ ಸರ್ಕಾರದ ವಿರುದ್ದ ಹೇಳಿಕೆಯನ್ನು ನೀಡುವ ಮೂಲಕ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ, ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೀಗ ಬೆಳ್ಳಿಹಬ್ಬದ ಸಂಭ್ರಮ, ಬೆಳ್ಳಿಹಬ್ಬದಂಗವಾಗಿ ಆಯೋಜಿಸಿದ್ದ ನುಡಿ ಹಬ್ಬವನ್ನು ಮಂಗಳವಾರ ಸ್ವಂತ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ರೂ, ಈ ವೇಳೆ ಹಂಪಿ ಕನ್ನಡ ವಿವಿಯಲ್ಲಿನ ಸಿಬ್ಬಂದಿ ಅಧ್ಯಾಪಕರ ಕೊರತೆ ನೀಗಿಸುವ ಭರವಸೆಯನ್ನು ಸಿಎಂ ನೀಡಿದ್ರೂ, ಆದ್ರೆ ಎರಡನೇ ದಿನದ ವಿಚಾರ ಸಂಕಿರಣ ಸಮಾರಂಭದಲ್ಲಿ ಹಂಪಿ ಕನ್ನಡ ವಿವಿಯ ಕುಲಪತಿ ಡಾಕ್ಟರ್ ಮಲ್ಲಿಕಾ ಘಂಟಿ,
ಸಿಎಂ ಸಿದ್ದರಾಮಯ್ಯ ಭರವಸೆಯ ಭಾಷಣದ ವಿರುದ್ದವಾಗಿ ಮಾತನಾಡಿ ನೋವು ತೋಡಿಕೊಂಡಿದ್ದಾರೆ, ವಿವಿಯ ಹಿಂದಿನ ಕುಲಪತಿಗಳಾಗಿದ್ದ ಚಂದ್ರಶೇಖರ ಕಂಬಾರರು ಅಂದು ವಿಧಾನಸೌಧಕ್ಕೆ ಬೇಟಿ ನೀಡಿದ್ರೆ ಸ್ವಂತ
ದೇವೇಗೌಡರಂತ ರಾಜಕಾರಣಿಗಳು ಮುಂದೆ ನಿಂತೂಕೊಂಡು ಎಲ್ಲ ಕೆಲಸಗಳು ಮಾಡಿಕೊಟ್ಟು ಸೂಟ್ ಕೇಸ ತುಂಬಾ ಹಣಕೊಟ್ಟು ಹಂಪಿ ವಿವಿ ಅಭಿವೃದ್ಧಿ ಮಾಡಿ ಅಂತಿದ್ರೂ, ಆದ್ರೆ ಇಂದು ವಿವಿಯ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಲು ವಿಧಾನಸೌಧಕ್ಕೆ ಸೂಟಕೇಸ ತುಂಬಾ ಹಣ ತುಂಬಿಕೊಂಡು ಹೋಗಿ ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ, ಅಷ್ಟೆ ಅಲ್ಲ ಅಧ್ಯಾಪಕರು, ಸಿಬ್ಬಂದಿಗಳ ನೇಮಕಾತಿ ವಿಚಾರದಲ್ಲಿ ಬೀದಿಗೀಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಸಿಎಂ ಭರವಸೆಯ ವಿರುದ್ದವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ,
ಹೀಗಾಗಿ ಹಂಪಿ ಕನ್ನಡ ವಿವಿಯನ್ನು ಆಕ್ಸ್‌ಫರ್ಡ್ ವಿವಿಯಂತೆ ಮಾಡಲು ಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿಕೊಳ್ಳಲು ‌ವಿಧಾನಸೌಧಕ್ಕೆ ಸೂಟ್ಕೇಸ ತುಂಬಾ ಹಣ ತುಂಬಿಕೊಂಡು ಹೋಗಬೇಕಾ ಅನ್ನೋ ಪ್ರಶ್ನೆ ಇದೀಗ ಎದ್ದಿದೆ, ಅಷ್ಟಕ್ಕೂ ಸಿಎಂ ಸಿದ್ದರಾಮಯ್ಯ ಕೊಟ್ಟ ಭರವಸೆ ಎನೂ, ಹಂಪಿ ಕನ್ನಡ ವಿವಿಯ ಕುಲಪತಿಗಳು ಎನೂ ಮಾತನಾಡಿದ್ದಾರೆ ಅನ್ನೋದು ಇಲ್ಲಿದೆ ನೋಡಿ,

ಬೈಟ್, ೧) ಸಿದ್ದರಾಮಯ್ಯ ( ಮುಖ್ಯಮಂತ್ರಿಗಳು )
೨) ಡಾಕ್ಟರ್ ಮಲ್ಲಿಕಾ ಘಂಟಿ ( ಕುಲಪತಿಗಳು. ಹಂಪಿ ಕನ್ನಡ ವಿವಿ )

LEAVE A REPLY

Please enter your comment!
Please enter your name here