ವಿಧಾನ ಸೌಧದ ಪದ ಬಳಕೆ ಮಾಡಿಲ್ಲಾ…

0
232

ಬಳ್ಳಾರಿ/ಹೊಸಪೇಟೆ:ಸೂಟ್‌ಕೇಸ್(ಕಡತ)ವನ್ನು ನಾವೇ ತೆಗೆದುಕೊಂಡು ಹೋಗಬೇಕು ಎಂಬ ನನ್ನ ಹೇಳಿಕೆಯನ್ನು ಕೆಲ ಸುದ್ದಿ-ಮಾಧ್ಯಮಗಳು ತಿರುಚಿ, ವಿಧಾನ ಸೌಧಕ್ಕೆ ಸೂಟ್‌ಕೇಸ್ ತೆಗೆದುಕೊಂಡು ಹೋಗಿ ಹಣ ತರಬೇಕಾಗಿದೆ ಎಂದು ವರದಿ ಮಾಡಿವೆ ಎಂದು ಕನ್ನಡ ವಿವಿ ಕುಲಪತಿ ಡಾ.ಮಲ್ಲಿಕಾ ಎಸ್.ಘಂಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಗುರುವಾರ ಪ್ರತಿಕಾ ಹೇಳಿಕೆ ನೀಡಿರುವ ಅವರು, ಕನ್ನಡ ವಿವಿಯ ರಜತ ಮಹೋತ್ಸವ ಅಂಗವಾಗಿ, ಇಡೀ ಒಂದು ವಾರಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣಗಳು ನಡೆಯುತ್ತಿದ್ದು, ಸೆ. 13ರಂದು ನಡೆದ ಭವಿಷ್ಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಕುರಿತ ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿದ್ದ ನಾನು 25 ವರ್ಷಗಳ ಸಾಂಸ್ಕೃತಿಕ ಹಾಗೂ ರಾಜಕೀಯ ಪರಿಸ್ಥಿತಿಗೂ ಇಂದಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಬೆಳ್ಳಿಹಬ್ಬ ಆಚರಣೆಯ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪಕ ವಿಶ್ರಾಂತ ಕುಲಪತಿ ಚಂದ್ರಶೇಖರ ಕಮ್ಮಾರ ಅವರನ್ನು ಆಹ್ವಾನಿಸಲು ಹೋದಾಗ ಅವರು, ಈ ಹಿಂದೆ ಮಂತ್ರಿಗಳು ಬೇಟಿ ಮಾಡಲು ಬರುವುದಾಗಿ ತಿಳಿಸಿದರೆ, ಅವರೇ ನಮಗಾಗಿ ಕಾಯುತ್ತಿದ್ದರು. ಜೊತೆಗೆ ತಮ್ಮ ಅಧಿಕಾರಿಗಳನ್ನು ಕಳಹಿಸಿ, ಸೂಟ್‌ಕೇಸ್ ಹಿಡಿದುಕೊಂಡು ತಮ್ಮ ಜೊತೆಗೆ ಬಂದು ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ, ಸೂಟ್‌ಕೇಸ್ ತುಂಬಾ ಹಣ ಕಳಹಿಸುತ್ತಿದ್ದರು ಎಂಬ ರೂಪಕವಾಗಿ ಹೇಳಿದ್ದರು. ಇಂದು ಈ ಪರಿಸ್ಥಿತಿ ಇಲ್ಲ ಸೂಟ್‌ಕೇಸ್ (ಕಡತ)ವನ್ನು ನಾವೇ ತೆಗೆದುಕೊಂಡು ಹೋಗಬೇಕಾಗಿದೆ ಎಂದು ರೂಪಕವಾಗಿ ಹೇಳಿದನ್ನು ಕೆಲ ಮಾಧ್ಯಮಗಳು ತಿರುಚಿ ಸೂಟ್‌ಕೇಸ್ ತೆಗೆದುಕೊಂಡು ಹಣ ತರಬೇಕಾಗಿದೆ ಎಂದು ತಿರುಚಿ ಪ್ರಚಾರ ಮಾಡಿರುವುದು ಅತ್ಯಂತ ಬೇಸರ ಸಂಗತಿಯಾಗಿದೆ. ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಬಗ್ಗೆ ನನಗೆ ಅತೀವ ಗೌರವಿದೆ. ಪಟ್ಟಭದ್ರ ಹಿತಾಶಕ್ತಿಗಳು, ಇತಂಹ ಮಾತುಗಳನ್ನು ತಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುತ್ತಿರುವು ಆತಂಕದ ಸಂಗತಿಯಾಗಿದೆ. ಇಡೀ ಭಾಷಣದಲ್ಲಿ ವಿಧಾನ ಸೌಧದ ಪದ ಬಳಕೆ ಮಾಡಿಲ್ಲ. ಇಂದಿನ ಸರ್ಕಾರ ಹಿಂದಿನ ಅವಧಿಗಿಂತಲೂ ಹೆಚ್ಚು ಅನುದಾನ ನೀಡಿರುವುದನ್ನು ನಾನು ನೆನೆಯುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here