ವಿಭಿನ್ನವಾಗಿ ಗೋಚರಿಸುತ್ತಿರುವ ಹಂಪೆ..

0
215

ಬಳ್ಳಾರಿ /ಹೊಸಪೇಟೆ : ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳು ಮಳೆಗಾಲದಲ್ಲಿವಿಭಿನ್ನವಾಗಿ ಗೋಚರಿಸುತ್ತಿದ್ದು ಈ ಸುಂದರ ಸ್ಮಾರಕಗಳನ್ನುನೋಡಲು ಪ್ರವಾಸಿಗರು ಆಗಮಿಸುತ್ತಿದ್ದಾರೆ ಹಂಪೆಯ ಸ್ಮಾರಕಗಳು ಬಳಿ ನೀರು ನಿಲ್ಲುತ್ತಿರುವುದರಿಂದ ಸ್ಮಾರಕಗಳುಸುಂದರವಾಗಿ ಕಂಗೊಳಿಸುತ್ತವೆ ಸ್ಮಾರಕಗಳ ಪ್ರತಿಬಿಂಬಗೋಚರಿಸುತ್ತಿರುವ ಹಿನ್ನಲೆಯಲ್ಲಿ ಪ್ರವಾಸಿಗರು ತಮ್ಮ ಕ್ಯಾಮರಾ ಮತ್ತು ಮೊಬೈಲ್‍ನಲ್ಲಿ ಸೆರೆಹಿಡಿಯುತ್ತಿದ್ದಾರೆ.

ಹಂಪಿಯ ಆನೆಸಾಲು, ಕಮಲ್ ಮಹಲ್, ಅಷ್ಟಭುಜಆಕೃತಿಕೊಳ,ವಿಜಯವಿಠ್ಠಲ ದೇವಸ್ಥಾನ, ಕೃಷ್ಣದೇವಸ್ಥಾನ, ಎದರು ಬಸವಣ್ಣಮಂಟಪ, ಹೇಮಕೂಟದಲ್ಲಿನ ಮೂಲವಿರುಪಾಕ್ಷ ದೇವಸ್ಥಾನ,ಆಂಜನೇಯ ದೇವಸ್ಥಾನ, ಎರಡು ಅಂತಸ್ತಿನ ಮಂಟಪ ಇನ್ನೂಅನೇಕ ಸ್ಮಾರಕಗಳ ಪ್ರತಿಬಿಂಬವು ಈ ನಾಡು ಇಂಡಿಯಾ ನಮ್ಮಕನ್ನಡ ಕ್ಯಾಮರಾದಲ್ಲಿ ಸೆರೆಯಾಗಿದೆ

ಪ್ರತಿನಿತ್ಯ ನೂರಾರು ದೇಶ ವಿದೇಶಿ ಪ್ರವಾಸಿಗರು ಸ್ಮಾರಕಗಳನ್ನುನೋಡಲು ಆಗಮಿಸಿ ಸ್ಮಾರಕಗಳ ಪ್ರತಿಬಿಂಬವನ್ನುಕಣ್ತುಂಬಿಕೊಳ್ಳತ್ತಿದ್ದರೆ ಚಿತ್ರಸೆರೆಹಿಡಿಯಲು ಜಿಲ್ಲೆಯ ವಿವಿಧಭಾಗಗಳಿಂದ ಹತ್ತಾರು ಛಾಯಾಗ್ರಾಹಕರು ಲಗ್ಗೆ ಇಡುತ್ತಿದ್ದಾರೆ

ಮಳೆಗಾಲದಲ್ಲಿ ಹಂಪಿಯ ವಾತಾವರಣವೇ ವಿಭಿನ್ನವಾಗಿಕಾಣುತ್ತದೆ ಹಾಗು ಸ್ಮಾರಕಗಳ ಪ್ರತಿಬಿಂಬ ವಿಭಿನ್ನವಾಗಿಕಾಣಿಸುತ್ತದೆ ಈ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳವುದೇ ಒಂದುಸೌಭಾಗ್ಯ ಎನ್ನುತ್ತಾರೆ ಉಪನ್ಯಾಸಕ ಹಾಗು ಹವ್ಯಾಸಿ ಛಾಯಾಗ್ರಾಹಕ ಪನ್ನಂಗಧರ​.

LEAVE A REPLY

Please enter your comment!
Please enter your name here