ವಿರೂಪಾಕ್ಷೇಶ್ವರ ಸ್ವಾಮಿಯ ತೆಪೋತ್ಸವ..

0
179

ಬಳ್ಳಾರಿ/ಹೊಸಪೇಟೆ:ಐತಿಹಾಸಿಕ ಪ್ರಸಿದ್ಧ ಹಂಪಿಯ ಶ್ರೆ ವಿರೂಪಾಕ್ಷೇಶ್ವರ ಸ್ವಾಮಿಯ ತೆಪೋತ್ಸವ ಭಾನುವಾರ ರಾತ್ರಿ ವಿಜಂಭಣೆಯಿಂದ ಜರುಗಿತು.ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಪೀಠದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಜಿ ಸಾನಿಧ್ಯದಲ್ಲಿ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಮನ್ಮುಖ ಹೊಂಡದಲ್ಲಿ ತೆಪ್ಪೋತ್ಸವ ಅತ್ಯಂತ ಸಡಗರ ಸಂಭ್ರಮ ಸಡಗರದಿಂದ ನಡೆಯಿತು.

ದೀಪಾಲಂಕೃತಗೊಂಡ ತೆಪೋತ್ಸವದಲ್ಲಿ ಪಂಪಾಂಭಿಕೆ ಹಾಗೂ ವಿರೂಪಾಕ್ಷೇಶ್ವರ ಸ್ವಾಮಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, 11ಭಾರಿ ಮನ್ಮುಖ ಕೊಂಡವನ್ನು ಪ್ರದಕ್ಷಿಣೆ ಹಾಕುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.ಮಂಗಳವಾದ್ಯ ಹಾಗೂ ಭಕ್ತರ ಜಯ ಘೋಷಣೆಗಳೊಂದಿಗೆ ತೆಪೋತ್ಸವ ಅತ್ಯಂತ ಸಂಭ್ರಮ-ಸಡಗರದಿಂದ ನಡೆಯಿತು.  ನೆರೆದಿದ್ದ ಸಾವಿರಾರು ಭಕ್ತರು ಜಯಘೋಷ ಮಾಡುತ್ತಾ, ಭಕ್ತಿಭಾವ ಪ್ರದರ್ಶಿಸಿದರು. ಕಂಪ್ಲಿ, ಹೊಸಪೇಟೆ, ಕಮಲಾಪುರ ಸೇರಿದಂತೆ ದೂರದ ಪ್ರದೇಶದಿಂದ ಆಗಮಿಸಿದ ಭಕ್ರರು, ಕೊರೆಯುವ ಚಳಿಯನ್ನು ಲೆಕ್ಕಿಸದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಪಂಪಾಂಭಿಕೆ ಹಾಗೂ ವಿರೂಪಾಕ್ಷ ಸ್ವಾಮಿ ನಿಶ್ಚಿತಾರ್ಥದ (ಫಲಪೂಜಾ) ಕಾರ್ಯಕ್ರಮದ ಅಂಗವಾಗಿ ತೆಪ್ಪೋತ್ಸವ ಮಹೋತ್ಸವವನ್ನು ಆಯೋಜಿಸಲಾಗಿತ್ತು.ನಂತರ ಹಂಪಿಯ ಚಕ್ರತೀರ್ಥ ಕೋದಂಡರಾಮ-ಲಕ್ಷ್ಮಣ ದೇಗುಲದಲ್ಲಿ ಪಂಪಾಂಭಿಕೆ ಹಾಗೂ ಶ್ರೀ ವಿರೂಪಾಕ್ಷೇಶ್ವರ (ಶಿವ-ಪಾರ್ವತಿ)ನಿಶ್ಚಿತಾರ್ಥ ಫಲಪೂಜಾ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಜರುಗಿತು. ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತಿ ಸ್ವಾಮಿಜಿ ಅವರ ನೇತೃತ್ವದಲ್ಲಿ ಆಗಾಮಿಕರು ಹಾಗೂ ಪ್ರಧಾನ ಆರ್ಚಕರು, ಮಧ್ಯರಾತ್ರಿ 12ಗಂಟೆ ವರಗೆ ಶಾಸ್ತ್ರೋತ್ತವಾಗಿ ನೆರವೇರಿಸಿದರು.

LEAVE A REPLY

Please enter your comment!
Please enter your name here