ವಿವಿಧ ಪಕ್ಷಗಳು ತೊರೆದು ಸುಧಾಕರ್ ಬಣಕ್ಕೆ ಸೇರ್ಪಡೆ.

0
417

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಡಾ.ಎಂ.ಸಿ.ಸುಧಾಕರ್ ರವರ ಅಧಿಕೃತ ಅಂಜನಿ ನಿವಾಸದಲ್ಲಿ ಸುನ್ನುಲಾಲ್ ,ಇಂತಿಯಾಜ್ ,ಅಬ್ಬುಗುಂಡು ಶ್ರೀನಿವಾಸ ರೆಡ್ಡಿ , ಯುವ ಮುಖಂಡ ಸಮದ್ ಪಾಷ ,ಇವರ ನೇತೃತ್ವದಲ್ಲಿ ನಗರದ ವಾರ್ಡ್ ನಂ 12 ,13, 25 ,ಮತ್ತು 27 ವಾರ್ಡ್ ಯಿಂದ , ಸುಮಾರು 70 ಕ್ಕೂ ಹೆಚ್ಚು ಯುವಕರು ಮಾಜಿ ಶಾಸಕರ ಆಡಳಿತಾವಧಿಯ ಅಭಿವೃದ್ಧಿ ಕಾರ್ಯಗಳು ಹಾಗೂ ಅವರ ಕಾರ್ಯ ದಕ್ಷತೆಯನ್ನು ಮನಗಂಡು ಜೆಡಿಎಸ್ ಮತ್ತು ವಿವಿಧ ಪಕ್ಷಗಳು ತೊರೆದು ಡಾ.ಎಂ.ಸಿ ಸುಧಾಕರ್ ಬಣಕ್ಕೆ ಸೇರ್ಪಡೆಯಾದರು.

ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಲ ಮುಖಂಡರು ಕೆಲ ದಿನದಿಂದ ದೂರವಿದ್ದ ರು ಈಗಾ ಯುವ ಮುಖಂಡರಾದ ಸಮದ್ ಪಾಷ ರವರ ಸಮ್ಮುಖದಲ್ಲಿ ಸೈಯದ್ ಅಜರ್ (ಲಿಮ್ರಾ ಫ್ಯಾಷನ್) ಫೋಟೋಗ್ರಾಫರ್ ಅನಿಲ್ ,ಸೈಯದ್ ಅಕ್ರಂ , ಶೇಖ್ ಮುನ್ಸೀಪ್ ,ಜಮೀರ್ ಪಾಷ (ಆಟೋ ಅನೌನ್ಸ್ಮೆಂಟ್) ಹಾಗೂ ಪಾಪಮ್ಮ ಮೆಸ್ ಮಂಜು ರವರು ಡಾ.ಎಂ.ಸಿ ಸುಧಾಕರ್ ಬಣಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮುಖಂಡರಾದ ಮುನಿಶಾಮಿರೆಡ್ಡಿ, ಕೆ.ಸಿ.ಗೋಪಾಲ ರೆಡ್ಡಿ,ರಿಯಾಜ್, ಎಸ್.ರಾಗುಟ್ಟಹಳ್ಳಿ ಲಯನ್ ರಘುನಾಥ ರೆಡ್ಡಿ , ಜಿ.ಪ.ಸದಸ್ಯರಾದ ಈರುಳ್ಳಿ ಶಿವಣ್ಣ, ನಾಮನಿರ್ದೇಶನ ನಗರಸಭಾ ಸದಸ್ಯರಾದ ನಿಸಾರ್ ಷಾ, ಕಲಾಯಿ ಶ್ರೀನಿವಾಸ್,ತೌಡು ಮಂಜುನಾಥ್, ಸಿ.ಕೆ.ಎಲ್.ಚಾಂದ್ ಹಾಗೂ ಎಂ.ಸಿ.ಸುಧಾಕರ್ ರವರ ಬಣದ ಹಲವು ಕಾರ್ಯಕರ್ತರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here