ವಿಶ್ವಕರ್ಮ ಜಯಂತೋತ್ಸವ..

0
143

ಬಳ್ಳಾರಿ /ಹೊಸಪೇಟೆ :ವಿಶ್ವ ಕರ್ಮರ ಇತಿಹಾಸ ಅತ್ಯಂತ ಪ್ರಾಚೀನವಾದದ್ದು ಪೌರಾಣಿಕ ಕಥೆಗಳಲ್ಲಿ ಅಲ್ಲದೆ ಐತಿಹಾಸಿಕ ಶಿಲಾ ಶಾಸನಗಳಲ್ಲಿಯೂ ಇವರ ಬಗ್ಗೆ ಉಲ್ಲೇಖಗಳು ಸಿಗುತ್ತವೆ ಎಂದು ಪಟ್ಟಣ ಪಂಚಾಯತಿ ಕಾರ್ಯಲಯದ ಸಮುಧಾಯ ಸಂಘಟನಾಧಿಕಾರಿ ಮಂಜುನಾಥ್ ಹೇಳಿದರು. ಬಾನುವಾರ ಪಟ್ಟಣ ಪಂಚಾಯತಿ ಕಾರ್ಯಲಯದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಶ್ವವಿಖ್ಯಾತ ಸ್ಮಾರಕಗಳ ನಿರ್ಮಾಣದಲ್ಲಿ ವಿಶ್ವಕರ್ಮರ ಪಾತ್ರ ಅಮೋಘವಾಗಿದೆ, ಹಂಪಿ, ಬೇಲೂರು, ಹಳೇಬೀಡು ಮತ್ತು ದೇಶದ ಲಕ್ಷಾಂತರ ದೇವಾಲಯಗಳು ವಿಶ್ವಕರ್ಮರಿಂದಲೇ ರಚನೆಗೊಂಡಿವೆ. ಸರ್ಕಾರದಿಂದ ವಿಶ್ವಕರ್ಮ ಸಮುದಾಯವನ್ನು ಗುರುತಿಸಿ ಜಯಂತಿ ಆಚರಣೆಗೆ ಅನುಮತಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಮುಖ್ಯಾಧಿಕಾರಿ ಫಣಿರಾಜ್, ಅಧ್ಯಕ್ಷ ಬಿ.ಆರ್.ಮಳಲಿ, ಸದಸ್ಯರಾದ ಶಶಿಧರ, ಸಿ.ಖಾಜಾಹುಸೇನ್, ಕಿರಣ್‍ಕುಮಾರ್, ಮಸ್ತಾನ್, ಮರ್ಧಾನ್, ನೋಡಲ್ ಎಂಜಿನೀಯರ್ ಹನುಮಂತಪ್ಪ ಇತರರು ಇದ್ದರು.

LEAVE A REPLY

Please enter your comment!
Please enter your name here