ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗಿ ನೂತನ ವ್ಯಾಯಮ ಶಾಲೆ..

0
162

ಬಳ್ಳಾರಿ /ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರ ನೂತನ ವ್ಯಾಯಾಮ ಶಾಲೆಯನ್ನು ಕುಲಪತಿ ಡಾ.ಮಲ್ಲಿಕಾ ಘಂಟಿ ಹಾಗೂ ಕುಲಸಚಿವ ಡಾ.ಬಿ.ಪಾಂಡುರಂಗ ಬಾಬು ಗುರುವಾರ ಚಾಲನೆ ನೀಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಶೇಷ ಘಟಕದ ಎಸ್‌ಸಿಪಿ/ಟಿಎಸ್‌ಪಿ ಅನುದಾನದಲ್ಲಿ ನಿರ್ಮಿಸಿದ ಪರಿಕರಸಹಿತ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವ್ಯಾಯಾಮ ಶಾಲೆಯನ್ನು ಉದ್ಘಾಟಿಸಲಾಯಿತು.

ಡೀನರಾದ ಡಾ. ಅಶೋಕ ಕುಮಾರ ರಂಜೇರೆ, ಡಾ.ಪಿ.ಮಹಾದೇವಯ್ಯ, ಡಾ.ಡಿ.ಮೀನಾಕ್ಷಿ, ಡಾ.ಸಿದ್ದಗಂಗಮ್ಮ, ಡಾ.ಎ.ವೆಂಕಟೇಶ, ಎಚ್.ಶ್ರೀನಿವಾಸ, ಗುರುಬಸಪ್ಪ ಅಧಿಕಾರಿ ವರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಸಿಬ್ಬಂದಿ ವರ್ಗ ಹಾಜರಿದ್ದರು.

ಪುಸ್ತಕ ವಿತರಣೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಶೇಷ ಘಟಕದವತಿಯಿಂದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಲಪತಿ ಡಾ. ಮಲ್ಲಿಕಾ ಎಸ್. ಘಂಟಿ, ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿದರು.

ಕೆ.ಎ.ಎಸ್., ಕೆಪಿಎಸ್‌ಸಿ, ಸ್ಲೆಟ್, ನೆಟ್, ಕೇ-ಸೆಟ್, ಐ.ಎ.ಎಸ್., ಸರ್ಕಾರಿ ಸೇವಾ ನಿಯಮಗಳು ಸೇರಿದಂತೆ ಇತರೆ ಪುಸ್ತಕಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವ ಸಿದ್ಧತೆಯ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕುಲಸಚಿವ ಡಾ.ಡಿ.ಪಾಂಡುರಂಗ ಬಾಬು ಮಾತನಾಡಿದರು.ಉಪ ಕುಲಸಚಿವ ಡಾ. ಎ. ವೆಂಕಟೇಶ ನಿರೂಪಿಸಿದರು.

LEAVE A REPLY

Please enter your comment!
Please enter your name here