ವಿಶ್ವ ತಂಬಾಕು ರಹಿತ ದಿನಾಚರಣೆಯ ಜಾಗೃತಿ ಜಾಥಾ

0
83

ತಂಬಾಕು ಉತ್ಪನ್ನಗಳ ಹಾನಿಯ ಕುರಿತು ಜಾಗೃತಿಯಾಗಲಿ

ರಾಯಚೂರು- ಇಂದು ಶಿಕ್ಷಿತ ಸಮುದಾಯ ತಂಬಾಕು ಉತ್ಪನ್ನಗಳ ಸೇವನೆ ಹೆಚ್ಚಾಗಿ ಮಾಡುತ್ತಿದ್ದು, ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ಹಾನಿಯ ಕುರಿತು ಯುವ ಸಮುದಾಯದಲ್ಲಿ ಜಾಗೃತಿಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಜಿಲ್ಲಾ ಸಮೀಕ್ಷಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ಇಂದು ಶಿಕ್ಷಿತ ಸಮುದಾಯದಲ್ಲಿ ತಂಬಾಕು ಉತ್ಪನ್ನಗಳ ಸೇವನೆ ಹೆಚ್ಚಾಗಿದ್ದು ಈ ಸಮುದಾಯಕ್ಕೆ ತಿಳಿ ಹೇಳುವ ಕಾರ್ಯವಾಗಬೇಕು, ದೇಶದಲ್ಲಿ ಪ್ರತಿದಿನ 2500 ಜನರು ತಂಬಾಕು ಉತ್ಪನ್ನಗಳ ಸೇವನೆಯಿಂದ ಬರುವ ರೋಗಗಳಿಗೆ ಬಲಿಯಾಗುತ್ತಿದ್ದು, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶ ಕಾಯಿಲೆಗಳ ಪ್ರಕರಣಗಳು ಹೆಚ್ಚಾಗುತ್ತಿವೆ.

ಪ್ರತಿ ಭಾರಿ ಬಿಡಿ ಸಿಗರೇಟು ಸೇವನೆಯಿಂದ 7 ನಿಮಿಷ ಆಯಸ್ಸು ಕಡಿಮೆಯಾಗಲಿದ್ದು, ಜನರಲ್ಲಿ ತಂಬಾಕು ಉತ್ಪನ್ನಗಳ ಹಾನಿಯ ಕುರಿತು ಜನರು ಜಾಗೃತರಾದಲ್ಲಿ ಮಾತ್ರ ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದ್ದು, ಪ್ರಮುಖವಾಗಿ ಇಂದಿನ ಯುವ ಸಮುದಾಯ ಈ ಉತ್ಪನ್ನಗಳಿಂದ ದೂರ ಉಳಿವುದು ಅವಶ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ನಗರದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಿಂದ ಆರಂಭಗೊಂಡ ಜಾಗೃತಿ ಜಾಥಾ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ತುಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ಹಾನಿ ಕುರಿತು ಜಾಗೃತಿಗೊಳಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಬಾಯಿ, ಡಾ. ವಿಜಯ ಶಂಕರ್, ವಿಜಯಾಕೆ. ಡಾ. ಎಂ.ಎನ್ ನಂದಿತಾ, ಡಾ. ಮನೋಹರ ಪತ್ತಾರ, ಡಂಡಪ್ಪ ಬಿರಾದರ, ಸೇರಿದಂತೆ ರಿಮ್ಸ್ ವಿದ್ಯಾರ್ಥಿಗಳು, ನವೋದಯ ಮೇಡಿಕಲ್ ಕಾಲೇಜು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here