“ವಿಶ್ವ ಪರಿಸರ ದಿನ” ಆಚರಣೆ

0
98

ಚಾಮರಾಜನಗರ: ವಿಶ್ವಪರಿಸರ ದಿನಾಚರಣೆಯ ಅಂಗ ವಾಗಿ, ಜಿಲ್ಲಾಡಳಿತದಿಂದ ಗಿಡನೆಡುವ ಕಾರ್ಯ ಕ್ರಮ ವನ್ನು ಹಮ್ಮಿಕೊಳ್ಳಲಾ ಗಿತ್ತು.

ನಗರದ ಜಿಲ್ಲಾಡಳಿತದ ಭವನದ ಆವರಣದಲ್ಲಿ, ಜಿಲ್ಲಾಧಿಕಾರಿ ಬಿಬಿ ಕಾವೇರಿ ಗಿಡ ನೆಟ್ಟು ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಓ ಹರೀಶ್ ಕುಮಾರ್ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿ ಗಳು ಗಿಡನೆಡುವ ಕಾರ್ಯ ಕ್ರಮದಲ್ಲಿ ಭಾಗಿಯಾಗಿದ್ದರು.

ನಂತರ ನಗರದ ಹೊಸ ಕೆಡಿಪಿಹಾಲ್ ನಲ್ಲಿ ನಡೆದ ಕಾರ್ಯ ಕ್ರಮವನ್ನ ಜಿಲ್ಲಾಧಿಕಾರಿ ಬಿಬಿ ಕಾವೇರಿ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನಾವು ಅರಣ್ಯಪ್ರದೇಶ ವನ್ನ ಸಂರಕ್ಷಣೆ ಮಾಡುವುದೇ ಅಲ್ಲದೆ, ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಬೇಕು.

ಪ್ಲಾಸ್ಟಿಕ್ ನಿಂದ ಅರಣ್ಯನಾಶ ಆಗುವುದರಲ್ಲಿ ಸಂಶಯ ವಿಲ್ಲ.ಹಾಗಾಗಿ ಪ್ಲಾಸ್ಟಿಕ್ ಬಳಕೆಯನ್ನ ನಾವು ಕಡೆಗಣಿಸ ಬೇಕು.ಅಲ್ಲದೆ ಮನೆಯ ಅಕ್ಕಪಕ್ಕದಲ್ಲಿ, ಜಮೀನಿ ನಲ್ಲಿ, ಶಾಲೆಯ ಆವರಣದಲ್ಲಿ ಗಿಡನೆಡುವ ಪ್ರೌವೃತ್ತಿ ಬೆಳೆಸಿ ಕೊಳ್ಳಬೇಕು ಎಂದರು.ವಿದ್ಯಾರ್ಥಿಗಳು ಇಂದಿನಿಂದಲೇ ಪರಿಸರ ಕಾಲಜಿಯನ್ನು ಬೆಳೆಸಿ ಕೊಳ್ಳಬೇಕು.ಇದರಿಂದ ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದ್ರು.

LEAVE A REPLY

Please enter your comment!
Please enter your name here