ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ..

0
107

ಮಂಡ್ಯ/ಮಳವಳ್ಳಿ: ತಾಲ್ಲೂಕು ಕಾನೂನು ಸೇವೆಗಳ ಸಮಿತಿ. ವಕೀಲರಸಂಘ, ವಿಶೇಶ್ವರಯ್ಯ ತಾಲ್ಲೂಕು ಕಟ್ಟಡ ಕಾರ್ಮಿಕ ಸಂಘ, ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆ ಹಾಗೂ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು.ಕಾರ್ಯಕ್ರಮ ವನ್ನು ಅಪರ ಸಿವಿಲ್ ನ್ಯಾಯಾದೀಶೆ ಶ್ರೀಮತಿ ಶಮೀದಾ ಉದ್ಘಾಟಿಸಿ ಮಾತನಾಡಿ ಬಾಲ ಕಾರ್ಮಿಕರಾಗಿರುವುದು ಕಂಡು ಬಂದರೆ ಅದನ್ನು ಸಂಬಂಧಪಟ್ಟ ಇಲಾಖೆ ದೂರು ನೀಡಿ, ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಬಾಲಕಾರ್ಮಿಕರಾದರೆ ಕಾನೂನು ರೀತಿ ಅಪರಾಧವಾಗುತ್ತದೆ ಇದನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡಿ ಎಂದರು . ಇದೇ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿ ಆನಂದ ಮಾತನಾಡಿ , ಬಾಲ ಕಾರ್ಮಿಕರಾದರೆ ಯಾವ ಯಾವ ರೀತಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮಾಲೀಕರಿಗೆ ಯಾವ ಶಿಕ್ಷೆ ಎಂಬುವುದನ್ನು ತಿಳಿಸಿದರು. ಕಾರ್ಯಕ್ರಮ ದಲ್ಲಿ ವಕೀಲರ ಸಂಘದ ಅಧ್ಯಕ್ಷ ಹೇಮಂತ್, ಕಾರ್ಯದರ್ಶಿ ಸುಂದರ್, ವಕೀಲ ರಾಚಾಪ್ಪಾಜಿ, ಶಾಲೆಯ ಪ್ರಬಾರ ಮುಖ್ಯಶಿಕ್ಷಕ ರಾಮಕೃಷ್ಣಯ್ಯ, ಕಟ್ಟಡ ಕಾರ್ಮಿಕ ಸಂಘದ ಪ್ರಧಾನಕಾರ್ಯದರ್ಶಿ ಜನಾರ್ಧನಸ್ವಾಮಿ, ಕಾರ್ಯದರ್ಶಿ ಕೀರ್ತಿರಾಜ್ ತಿಲಕ್ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here