ವಿಶ್ವ ಭೂಮಿದಿನ ದಿನಾಚರಣೆ

0
161

ಮಂಡ್ಯ/ಮಳವಳ್ಳಿ: ಅಭಿವೃದ್ಧಿ ಹೆಸರಿನಲ್ಲಿ ಭೂಮಿ ಯನ್ನು ಬರಡು ಮಾಡಿರುವ ನಾವೆಲ್ಲರೂ ಮುಂದಿನ ಪೀಳಿಗೆ ಭವಿಷ್ಯದ ಬಗ್ಗೆ ಚಿಂತನೆ ಮಾಡದೆ ಮನುಕುಲವನ್ನು ನಾಶ ಮಾಡಲು ಹೊರಟಿರುವುದು ವಿಷಾದನೀಯ ಸಂಗತಿ ಎಂದು ಜೆಎಂಎಫ್ ಸಿ ಹಿ ರಿಯ ಸಿವಿಲ್ ನ್ಯಾಯಾದೀಶ ಕೆಂಗಬಾಲಯ್ಯ ತಿಳಿಸಿದರು.

ಮಳವಳ್ಳಿ ಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾಸಮಿತಿ ಹಾಗೂ ವಕೀಲ ಸಂಘ ದ ವತಿಯಿಂದ ವಿಶ್ವಭೂಮಿದಿನ ಕಾಯ೯ಕ್ರಮ ವನ್ನು ಉದ್ಘಾಟಿಸಿ ಮಾತನಾಡಿ ಬೋರ್ ವೆಲ್ ನಲ್ಲಿ ಸಾವಿರಾರು ಅಡಿ ಕೊರೆದು ಭೂಮಿಯಲ್ಲಿರುವ ನೀರನ್ನು ಬಸಿದು ಮತ್ತು ಒಡಲನ್ನು ಬಗೆದು ಅಲ್ಲಿರುವ ಎಲ್ಲಾ ಸಂಪತ್ತು ಯನ್ನು ಲೂಟಿ ಮಾಡುತ್ತಿದ್ದು ಇದೇ ರೀತಿ ಲೂಟಿ ಮಾಡುತ್ತಿದ್ದರೆ ರಾಜಸ್ಥಾನ ದ ರೀತಿ ನಮ್ಮಲ್ಲೂ ಮರುಭೂಮಿ ಕಾಣುವ ದಿನಗಳು ದೂರವಿಲ್ಲ ಎಂದರು.

ತಾತ್ಕಾಲಿಕ ಸುಖ ಹಾಗೂ ಸ್ವಾರ್ಥಕ್ಕಾಗಿ ಭೂಮಿಯನ್ನು ಬರಡು ಮಾಡುತ್ತಿರುವ ಮನುಕುಲಕ್ಕೆ ದಿಕ್ಕಾರ ಎಂದರು ಕಾಯ೯ಕ್ರಮ ದಲ್ಲಿ ಪ್ರಧಾನ ಸಿವಿಲ್ ನ್ಯಾಯಾದೀಶೆ ಎಂ ಭಾರತಿ , ಹೆಚ್ಚುವರಿ ಸಿವಿಲ್ ನ್ಯಾಯಾದೀಶ ರಾಜೇಶ್ ಹೊಸಮನಿ, ಸಹಾಯಕ ಸಕಾ೯ರಿ ಅಭಿ ಯೋಜಕ ರಾದ ಮಧುಸೂದನ್ , ರಾಜೇಂದ್ರ. ಸುಂದರ್ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here