ವಿಷ ಸೇವಿಸಿ ರೈತ ಆತ್ಮಹತ್ಯೆ..

0
381

ಬಳ್ಳಾರಿ/ಹೂವಿನಹಡಗಲಿ:ಹೊಳಲು ಗ್ರಾಮದಲ್ಲಿ ಸಾಲಬಾದೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತ ಸಾಲಬಾದೆ ತಾಳಲಾರದೆ ಮನನೊಂದು ರೈತನೊಬ್ಬ ಬೆಳೆನಾಶದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೂವಿನಹಡಗಲಿ ತಾಲೂಕು ಹೊಳಲು ಗ್ರಾಮದಲ್ಲಿ ಸಂಭವಿಸಿದೆ.

ಕರಿಯಪ್ಪ ದಿಳ್ಳೆಪ್ಪನವರ (55)ಎಂಬುವವರೆ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.ಮೃತ ರೈತನು ಆರು ಎಕರೆ ಜಮೀನು ಹೊಂದಿದ್ದು ಸಂಪೂರ್ಣವಾಗಿ ಕಬ್ಬನ್ನು ಹಾಕಿದ್ದನು, ಇದಕ್ಕಾಗಿ ಗ್ರಾಮದ ಎಸ್.ಬಿ.ಐ ಬ್ಯಾಂಕಿನಲ್ಲಿ ನಾಲ್ಕುವರೆ ಲಕ್ಷ ಹಾಗೂ ಹೊರಗಡೆ ಸುಮಾರು ಎರಡು ಲಕ್ಷ ಕೈಸಾಲ ಮಾಡಿದ್ದನು. ಕಳೆದ ಮೂರು ವರ್ಷದಿಂದ ಸಕಾಲಕ್ಕೆ ಮಳೆಯಾಗಿಲ್ಲ ಹಾಗೂ ಜಮೀನಿನಲ್ಲಿ ಮೂರು ಕೊಳವೆಬಾವಿಗಳಿದ್ದರೂ ಸಹ ಅಂತರ್ಜಲ ಕುಷಿತದಿಂದ ಕೊಳವೆಬಾವಿಗಳೂಕೂಡಾ ಕೈಕೊಟ್ಟಿವೆ ಇದರಿಂದ ಆರು ಎಕರೆ ಕಬ್ಬು ಸಂಪೂರ್ಣ ಒಣಗಿ ಹೋಗಿದ್ದರಿಂದ ಕಳೆದ ಮೂರು ತಿಂಗಳ ಹಿಂದಷ್ಟೆ ಸಂಪೂರ್ಣ ಬೆಳೆಯನ್ನು ನಾಶ ಮಾಡಿದ್ದ ರೈತ ಶುಕ್ರವಾರ ರಾತ್ರಿ ತನ್ನ ಹೊಲದಲ್ಲಿ ಬೆಳೆನಾಶ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಹಿರೇಹಡಗಲಿ ಪೊಲೀಸಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here