ವೀರಶೈವ ಲಿಂಗಾಯತ ಸದ್ಭಾವನಾ ಸಮಾವೇಶ ಯಶಸ್ವಿ..

0
150

ಬಾಗಲಕೋಟೆ: ಶಿವಯೋಗ ಮಂದಿರದಲ್ಲಿ ಇಂದು ಪ್ರತ್ಯೇಕ ಲಿಂಗಾಯತ ಧರ್ಮದ ವಿರುದ್ಧ ಎಲ್ಲೆಲ್ಲೂ ವೀರಶೈವರ ಪರಾಕ್ರಮ ಮೊಳಗಿತ್ತು. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಅನ್ನೋ ಘೋಷವಾಕ್ಯಗಳು ಪ್ರತಿಧ್ವನಿಸಿದ್ವು. ಅಂದಹಾಗೆ ಇದೆಲ್ಲಾ ನಡೆದಿದ್ದು ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಶಿವಯೋಗ ಮಂದಿರದಲ್ಲಿ ವೀರಶೈವ ಲಿಂಗಾಯತ ಸದ್ಭಾವನಾ ಸಮಾವೇಶದಲ್ಲಿ. ಪಂಚ ಪೀಠಾಧೀಶರಾದ ಕಾಶಿ, ಉಜ್ಜೈನಿ, ಶ್ರೀಶೈಲ, ಮತ್ತು ರಂಭಾಪುರಿ ಶ್ರೀಗಳು ಭಾಗಿಯಾಗುವುದರ ಮೂಲಕ ಸಮಾವೇಶಕ್ಕೆ ಮೆರಗು ನೀಡಿದ್ರು. ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲದೆ ಕರ್ನಾಟಕ, ಆಂದ್ರಪ್ರದೇಶ, ಮಹಾರಾಷ್ಟ್ರಗಳಿಂದಲೂ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ರು. ಬಿರುಬಿಸಿಲಿನ ಮಧ್ಯೆ ಸಮಾವೇಶದಲ್ಲಿ ಭಾಗವಹಿಸಿ ಜನ್ರು ಮಠಾಧೀಶರಿಗೆ ಬೆಂಬಲ ಸೂಚಿಸಿದ್ರು. ಮುಖ್ಯವಾಗಿ ಸಮಾವೇಶದಲ್ಲಿ ಪ್ರತ್ಯೇಕ ಲಿಂಗಾಯತವಾದಿಗಳ ವಿರುದ್ಧ ಖಾರವಾದ ಮಾತುಗಳು ಕೇಳಿಬಂದವು. ಈ ಮಧ್ಯೆ ಕೊಳದ ಮಠದ ಶಾಂತವೀರ ಸ್ವಾಮೀಜಿ ಮಾತನಾಡಿ, ಮಾತೆ ಮಹಾದೇವಿ ಓರ್ವ ಗುರುದ್ರೋಹಿ, ನಾಲಾಯಕ್ ಮತ್ತು ಆಕೆ ಒಬ್ಬ ಮಾತಿನ ದೆವ್ವ ಎನ್ನುವ ಮೂಲಕ ಕೂಡಲಸಂಗಮದೇವ ಎಂಬ ಬಸವಣ್ಣನವರ ಅಂಕಿತ ಬದಲು ಲಿಂಗದೇವ ಅಂಕಿತವಿಟ್ಟಿದ್ದು ಅವರಿಗೂ ಇವರಿಗೂ ಸಂಭಂದವೇನು ಅನ್ನೋದನ್ನ ಸ್ಪಷ್ಟಪಡಿಸಲಿ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ರು. 

ಸಮಾವೇಶಕ್ಕೂ ಮುನ್ನ ಶಿವಯೋಗ ಮಂದಿರದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯ್ತು. ಸಮಾವೇಶದಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದಂತ ಸಮಾರು ಇನೂರಕ್ಕೂ ಅಧಿಕ ಸ್ವಾಮೀಜಿಗಳು ವೇದಿಕೆಯನ್ನ ಹಂಚಿಕೊಂಡಿದ್ರು. ಅಲ್ದೆ ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತರು ಸಮಾವೇಶಕ್ಕೆ ಸಾಕ್ಷಿಯಾಗಿದ್ದರು. ಇತ್ತ ಬೆಳಿಗ್ಗೆಯೇ ಪಂಚಪೀಠಾಧೀಶರು ಪೂಜಾಕೈಂಕರ್ಯಗಳನ್ನ ಮುಗಿಸಿ ಸಮಾವೇಶದಲ್ಲಿ ಪಾಲ್ಗೊಂಡರು. ಸಮಾವೇಶದಲ್ಲಿ ಪ್ರಮುಖವಾಗಿ ಸನಾತನ ಧರ್ಮದ ಉಳಿವಿಗೆ ವಿರಕ್ತರು ಕಟಿಬದ್ಧ ಮತ್ತು ವೀರಶೈವ ಮಹಾಸಭೆಯ ನಿರ್ಣಯಿಸಿದ ವೀರಶೈವ ಲಿಂಗಾಯತ ಎಂಬ ಅಂಶವನ್ನ ಪ್ರತಿನಿಧಿಸಿ ಧರ್ಮವನ್ನ ಒಗ್ಗಟ್ಟಿನಿಂದ ಮುನ್ನಡೆಸಿಕೊಂಡು ಹೋಗುವುದು ಸೇರಿದಂತೆ ಒಟ್ಟು 10 ಪ್ರಮುಖ ನಿರ್ಣಯಗಳನ್ನ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಶೀ ಶ್ರೀಗಳು ಲಿಂಗಾಯತ ಧರ್ಮವೆಂಬುದೇ ಇಲ್ಲ ಇರೋದೊಂದೆ ವೀರಶೈವ ಧರ್ಮ, ಲಿಂಗಾಯತ ಎಂಬುದು ಪರ್ಯಾಯ ಪದವೇ ಹೊರತು ಧರ್ಮವಲ್ಲ ಎಂದು ಹೇಳಿದ್ರು. ಸದ್ಭಾವನಾ ಸಮಾವೇಶದ ಹೆಸರಿನಲ್ಲಿ ನಡೆದ ವೀರಶೈವ ಮಠಾಧೀಶರ ಸಮಾವೇಶ ಲಿಂಗಾಯತ ಪ್ರತ್ಯೇಕವಾದಿಗಳ ವಿರುದ್ಧ ಶಕ್ತಿ ಪ್ರದರ್ಶನ ಎಂಬಂತೆ ಬಿಂಬಿತವಾಗಿದೆ.

LEAVE A REPLY

Please enter your comment!
Please enter your name here