ವೇಶ್ಯಾವಾಟಿಕೆ ಅಡ್ಡೆಮೇಲೆ ಪೊಲೀಸರ ದಾಳಿ…!?

0
152

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದ ಟ್ಯಾಂಕ್ ಬಂಡ್ ರಸ್ತೆಯ ಮನೆಯೊಂದರಲ್ಲಿ ನಡೆಯುತ್ತಿರುವ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಮೇಲೆ ಪೊಲೀಸರದಾಳಿ. ಐದು ಜನರ ಬಂದನ.

ಚಿಂತಾಮಣಿ ತಾಲ್ಲೂಕಿನ ಉಪ ವಿಭಾಗದ ಪೊಲೀಸ್ ಡಿವೈಎಸ್ಪಿ ನಾಗೇಶ್ ರವರ ಮಾರ್ಗದರ್ಶನದಲ್ಲಿ ಮತ್ತು ನಗರದ ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ರವರ ನೇತೃತ್ವದಲ್ಲಿ ಇಂದು ನಗರದ ಟ್ಯಾಂಕ್ ಬಂಡ್ ರಸ್ತೆಯ ಶಾಲಾ ವಸತಿ ಪ್ರದೇಶದಲ್ಲಿ ಹೈಟೆಕ್ ವೇಶ್ಯಾ ವಾಟಿಕೆ ನಡೆಸುತ್ತಿರುವ ಖಚಿತ ಮಾಹಿತಿ ಮೇರಿಗೆ ಪೋಲಿಸರು ದಾಳಿ ಮಾಡಿ ದಂದೆನಡೆಸುತ್ತಿದ್ದರೆನ್ನಲಾದ ಐದು ಜನ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂದಿತರು ಅನಿತಾ, ಪದ್ಮಮ್ಮ, ಆಂಧ್ರ ಪ್ರದೇಶದ ನೆಲ್ಲೂರು ಮೂಲದ ದೇವಿ ,ಮುನಿಶಾಂತಿ, ಪ್ರೀಯಾ ಚಾರಿ ಮತ್ತು ಕೋಲಾರ ಮೂಲದ ನಾರಾಯಣಸ್ವಾಮಿ ಎಂಬುದಾಗಿ ತಿಳಿದು ಬಂದಿದೆ.

ಪೋಲಿಸ್ ಸಬ್ ಇನ್ಸ್ಪೆಕ್ಟರ್ ನಂದೀಶ್, ಎ.ಎಸ್ಐ ಪದ್ಮಮ್ಮ, ಚಂದ್ರಕಲಮ್ಮ, ಸಿಬ್ಬಂದಿ ದೇವರಾಜ್ , ಮಂಜು , ಅಂಬರೀಶ್ ರವರ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದ್ದು,ಪ್ರಕರಣ ನಗರ ಠಾಣೆಯಲ್ಲಿ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಚಿಂತಾಮಣಿ ನಗರದಲ್ಲಿ ಇಂತಹ ದಂಧೆಗಳು ಹೆಚ್ಚಾಗಿದ್ದು ಕಂಡೂ ಕಾಣದಂತೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆಂಬ ಆರೋಪ ಹೊತ್ತಿದ್ದ ಪೊಲೀಸರು ಇನ್ನಾದರೂ ವೇಶ್ಯಾ ವಾಟಿಕೆ ದಂದೆಗಳಿಗೆ ಇನ್ನಾದರೂ ಬ್ರೇಕ್ ಹಾಕುತ್ತಾರಾ ಎಂದು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here