ವ್ಯಕ್ತಿಯ ಅಪಹರಣ..

0
206

 

ಬಳ್ಳಾರಿ:ಅಪರಿಚಿತ ವ್ಯಕ್ತಿಗಳು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಬಟ್ಟೆ ವ್ಯಾಪಾರಿಯೊಬ್ಬರನ್ನು ಅಪಹರಣ ಮಾಡಿಕೊಂಡು ಹೋದ ಘಟನೆ ಎನ್‍ಎಚ್ 50ರಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಕೂಡ್ಲಿಗಿ ಪಟ್ಟಣದ ಬಟ್ಟೆ ವ್ಯಾಪಾರಿ ಖಾಸಿಂ ಸಾಬ್(52) ಅಪಹಾರಣ ಕ್ಕೊಳಗಾದ ವ್ಯಕ್ತಿ.

ಖಾಸಿಂ ಸಾಬ್ ಬೆಳಿಗ್ಗೆ ಬಟ್ಟೆ ಬಾಕಿ ವಸೂಲಿಗೆಂದು ಸಂಡೂರು ತಾಲ್ಲೂಕು ಹುಲಿ ಕುಂಟೆ ಗ್ರಾಮಕ್ಕೆ ಹೋಗಿ ಬರುವಾಗ ಶಿವಪುರ ಬಳಿ ಟಿಪ್ಪು ಸಾಬ್ ಎನ್ನುವವರ ಹೋಟೆಲ್ ನಲ್ಲಿ ಟೀ ಕುಡಿಯುತ್ತಿದ್ದರಂತೆ. ಈ ಸಂದರ್ಭದಲ್ಲಿ ಹೋಟೆಲಿ ನಿಂದ ಸ್ವಲ್ಪ ದೂರದಲ್ಲಿ ಸ್ಕಾರ್ಪಿಯೋ ವಾಹನದಲ್ಲಿದ್ದ ವ್ಯಕ್ತಿಯೊಬ್ಬ ಓಡಿ ಹೋಗು ತ್ತಿದ್ದಾಗ ಖಾಸೀಮ್ ಸಾಬ್ ಸೇರಿದಂತೆ ಅಲ್ಲಿದ್ದ ಇತರರು ಸ್ಕಾರ್ಪಿಯೋ ವಾಹನದ ಬಳಿ ಹೋಗಿ ನೋಡಲು ಹೋಗಿದ್ದಾರೆ ಆಗ ಅಪರಿಚಿತ ವ್ಯಕ್ತಿಗಳು ಅದೇ ಸ್ಮಾರ್ಪಿಯೋ ವಾಹನ ದಲ್ಲಿ ಖಾಸಿಂಸಾಬ್ ಅವರನ್ನು ಎತ್ತಿ ಹಾಕಿಕೊಂಡು ಹೋಗಿ ದ್ದಾರೆ. ಇದನ್ನು ನೋಡಿದ ಸ್ಥಳೀಯರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ ಎಲ್ಲೇಡೆ ಹುಡುಕಿದ್ರು ಸಿಗದ ಕಾರಣ ಕುಟುಂಬದ ಸದಸ್ಯರು ಕೂಡ್ಲಿಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here