ಶರಣರ ವಚನಗಳ ಅಧ್ಯಯನ ಅವಶ್ಯಕ…

0
298

ಬಳ್ಳಾರಿ /ಹೊಸಪೇಟೆ. ಪ್ರತಿಯೊಬ್ಬರು ಶರಣರ ವಚನಗಳ ಅಧ್ಯಯನ ಮಾಡುವುದು ಅತ್ಯಂತ ಅವಶ್ಯಕತೆಯಿದೆ ಎಂದು ಸ್ಥಳೀಯ ಶ್ರೀಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳು ಹೇಳಿದರು.
ಸ್ಥಳೀಯ ಶ್ರೀಕೊಟ್ಟೂರುಸ್ವಾಮಿ ಮಠದ ಹಾನಗಲ್ಲ ಕುಮಾರೇಶ್ವರ ಶಿವಾನುಭವ ಮಂಟಪದಲ್ಲಿ ಶುಕ್ರವಾರ ಸಂಜೆ ಆಯೋಜಿಸಲಾಗಿದ್ದ 1131ನೇ ಮಾಸಿಕ ಶಿವಾನುಭವ ಸಂಪದ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಶರಣರ ವಚನಗಳ ಅಧ್ಯಯನದಿಂದ ಜೀವನದ ಉದ್ದೇಶ ತಿಳಿಯುತ್ತದೆ. ಮನುಷ್ಯನಿಗೆ ಹಣ ಗಳಿಕೆ ಮುಖ್ಯವಾಗಬಾರದು. ಆದರೆ ಗಳಿಸಿದ ಹಣ ಸಧ್ವಿನಿಯೋಗವಾಗಬೇಕು. ಮಕ್ಕಳಿಗೆ ಶರಣರ ವಚನಗಳನ್ನು ಕಲಿಸುವ ಕೆಲಸವನ್ನು ಪಾಲಕರು ಮಾಡಬೇಕು ಎಂದರು.
ಅಲ್ಲದೆ ದೇಶದಲ್ಲಿ ಶ್ರೇಣಿಕೃತ ಸಮಾಜ ವ್ಯವಸ್ಥೆಯಿಂದಾಗಿ ಅಸಮಾನತೆ ಹೆಚ್ಚಾಗಿದೆ. ಅಸಮಾನತೆ ನಿವಾರಣೆಗಾಗಿ ಬಸವಣ್ಣ ನವರು ಭಕ್ತಿ ತತ್ವವನ್ನು ಜಾರಿಗೆ ತಂದರು. ಆದರೆ 800 ರಿಂದ 900 ವರ್ಷಗಳಾದರೂ ಜಾತಿ ವ್ಯವಸ್ಥೆ ತೊಲಗಿದರುವುದು ದುರ್ದೈವದ ಸಂಗತಿಯಾಗಿದೆ. ಅಂತಹ ಮಹಾನ್ ವ್ಯಕ್ತಿ ಮಹಾಮಾನವತಾವಾಧಿ ಬಸವಣ್ಣ ನವರ ಭಾವಚಿತ್ರವನ್ನು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಹಾಕಲು ಆದೇಶಿಸಿದ, ಮತ್ತು ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಶರಣೆ ಅಕ್ಕಮಹಾದೇವಿಯವರ ಹೆಸರನ್ನು ನಾಮಕರಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಯವರ ಕಾರ್ಯವನ್ನು ಸ್ವಾಗತಿಸಿದರು. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ರನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಸನ್ಮಾನಿಸಲಾಯಿತು. ಯಾವುದೇ ಮುಖ್ಯಮಂತ್ರಿ ಕೈಗೊಳ್ಳಲಾಗದ ದಿಟ್ಟ ನಿರ್ಧಾರವನ್ನು ಸಿದ್ದರಾಮಯ್ಯ ಕೈಗೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಬಳೂಟಗಿಯ ಶಿವಕುಮಾರ ದೇವರು, ನಾವು ಮಾಡುವ ದಾನ ಶ್ರೇಷ್ಠವಾಗಿರಬೇಕು. ನಮ್ಮ ದಾನ ಸತ್ಪಾತ್ರಕ್ಕೆ ಸಲ್ಲುವಂತಿರಬೇಕು. ಮತ್ತು ಜೀವನದಲ್ಲಿ ಪ್ರತಿಯೊಬ್ಬರು ತಮ್ಮ ಪಂಚೇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವರ್ತಕ ಕೆ.ಗಂಗಾಧರಪ್ಪ ಮಾತನಾಡಿ, ಮುಂಬರುವ ದಿನಗಳಲ್ಲಿ ಶಿವಾನುಭವ ಸಂಪದ ಕಾರ್ಯಕ್ರಮದಲ್ಲಿ ಹೊಸ ಹೊಸ ವಚನಗಳನ್ನು ಭಕ್ತಾಧಿಗಳಿಗೆ ತಿಳಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದರೂರು ಸಂಗನಬಸವೇಶ್ವರ ವಿರಕ್ತಮಠದ ಕೊಟ್ಟೂರು ದೇಶಿಕರು, ಅಕ್ಕನ ಬಳಗದ ಅಧ್ಯಕ್ಷೆ ಕೋರಿಶೆಟ್ಟಿ ರತ್ನಮ್ಮ, ಉದ್ಯಮಿ ಕೆ.ರವಿಶಂಕರ, ಸಿಐಟಿಯು ಉಪಾಧ್ಯಕ್ಷ ಹೆಚ್.ಎಂ.ಮಧುರಚೆನ್ನಶಾಸ್ತ್ರಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ, ನಗರ ವೀರಶೈವ ಸಮಾಜದ ಕಾರ್ಯದರ್ಶಿ ಕೋರಿಶೆಟ್ಟಿ ಲಿಂಗಪ್ಪ ಸೇರಿದಂತೆ ಶ್ರೀಮಠದ ಭಕ್ತಾಧಿಗಳು ಭಾಗವಹಿಸಿದ್ದರು.
ಸಂಗೀತ ಶಿಕ್ಷಕ ಜಯಣ್ಣ ಅಕ್ಕಸಾಲಿ ಮತ್ತು ವೆಂಕಟೇಶ ಚಿತ್ರಗಾರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ರಾಣಿ ಚೆನ್ನಮ್ಮ ಪ್ರೌಢಶಾಲೆ ಮುಖ್ಯಗುರು ಸಿ.ಎಸ್.ಶರಣಯ್ಯ ನಿರ್ವಹಿಸಿದರು.

LEAVE A REPLY

Please enter your comment!
Please enter your name here