ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನಾಳೆಯಿಂದ..

0
310

ಬೀದರ್/ಬಸವಕಲ್ಯಾಣ: ಸಾಮಾಜಿಕ ಕ್ರಾಂತಿ ಗೈದ ವಿಶ್ವ ಗುರು ಬಸವಣ್ಣನವರ ಕಾಯಕ ಭೂಮಿಯಲ್ಲಿ ವಿಶ್ವ ಬಸವ ಧರ್ಮ ಅನುಭವ ಮಂಟಪ ಟ್ರಸ್ಟ್ನಿಂದ ಅನುಭವ ಮಂಟಪದ ಪರಿಸರದಲ್ಲಿ ನ. 25 ಮತ್ತು 26ರಂದು ನಡೆಯಲಿರುವ 38ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.ಟ್ರಸ್ಟ್ನ ಅಧ್ಯಕ್ಷರು ಆಗಿರುವ ಡಾ.ಬಸವಲಿಂಗ ಪಟ್ಟದೇವರ ನೇತೃತ್ವದಲ್ಲಿ ಅನುಭವ ಮಂಟಪದ ಪರಿಸರದಲ್ಲಿ ಎರಡು ದಿನಗಳ ವರೆಗೆ ನಡೆಯುವ ಉತ್ಸವಕ್ಕಾಗಿ ವಿಶಾಲ ಮೈದಾನದಲ್ಲಿ ಡಾ. ಎಂ.ಎಂ. ಕಲಬುರಗಿ ಹೆಸರಿನಲ್ಲಿ 150ಥ250 ಅಡಿ ಬೃಹತ್ ಮಂಟಪ ನಿಮರ್ಾಣ ಮಾಡಲಾಗಿದ್ದು, ಎರಡು ದಿಗಳ ಕಾರ್ಯಕ್ರಮಕ್ಕಾಗಿ ಸಮಾಜ ವಿಜ್ಞಾನಿ ಡಾ. ಹಿರೇಮಲ್ಲೂರ ಈಶ್ವರನ್ ಅವರ ಹೆಸರಿನಲ್ಲಿ 35ಥ60 ಭವ್ಯವಾದ ವೇದಿಕೆ ನಿರ್ಮಿಸಲಾಗಿದೆ. ಕಮ್ಮಟಕ್ಕಾಗಿ ಬರುವ ಬಸವ ಭಕ್ತರಿಗೆ ಕುಳಿತುಕೊಳ್ಳಲು 3 ಸಾವಿರ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. ವೇಧಿಕೆ ಮುಂಭಾಗದಲ್ಲಿ ಗಣ್ಯರಿಗಾಗಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆ ಸೇರಿದಂತೆ ರಾಜ್ಯ, ನೆರೆಯ ಮಹಾರಾಷ್ಟ್ರ, ತೆಲಂಗಾಣದ ನಾನಾ ಕಡೆಗಳಿಂದ ಸಹಸ್ರಾರು ಬಸವ ಭಕ್ತರು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.
ಕಾರ್ಯಕ್ರಮ ಯಶಸ್ವಿಯಾಗಿ ಪ್ರಮುಖರನ್ನೋಳಗೊಂಡ ಸ್ವಾಗತ ಸಮಿತಿ ರಚಿಸಲಾಗಿದ್ದು, ಕಳೆದೊಂದು ತಿಂಗಳಿಂದ ನಾಡಿನ ನಾನಾ ಭಾಗದಲ್ಲಿ ಸಂಚರಿಸಿ ರಥ ಯಾತ್ರೆಗಳ ಮೂಲಕ ಎಲ್ಲಡೆ ಪ್ರಚಾರ ನಡೆಸಿ ಬಸವ ಭಕ್ತರನ್ನು ಆಹ್ವಾನಿಸಲಾಗಿದೆ. ಉತ್ಸವಕ್ಕೆ ಅಹ್ವಾನಿಸುವ ಪೊಸ್ಟರ್ಗಳು, ಕಟೌಟ್ಗಳು ಗಮನ ಸೆಳೆಯುತ್ತಿವೆ. ಅನುಭವ ಮಂಟಪಕ್ಕೆ ಬರುವ ಮುಖ್ಯ ರಸ್ತೆಯಲ್ಲಿ ಮಹಾಧ್ವಾರಗಳು ಸಿದ್ಧವಾಗುತ್ತಿವೆ.
ಎರಡು ದಿನಗಳ ಉತ್ಸವದಲ್ಲಿ ಭಾಗವಹಿಸುವ ಭಕ್ತರಿಗಾಗಿ ದಾಸೋಹದ ವ್ಯವಸ್ಥೆಯನ್ನು ಶ್ರೀಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಮಂಡಳಿಯಿಂದ ಮಾಡಲಾಗುತ್ತಿದೆ. ದೂರದಿಂದ ಬರುವ ಜನರಿಗಾಗಿ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಮಾಡಲಾಗುತ್ತಿದೆ.
ಇಂದು ಉದ್ಘಾಟನೆ: ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪದಿಂದ ಅನುಭವ ಮಂಟಪದ ಪರಿಸರದಲ್ಲಿ ಎರಡು ದಿನಗಳ ವರೆಗೆ ನಡೆಯಲಿರುವ ಉತ್ಸವವನ್ನು ಶನಿವಾರ ಬೆಳಗ್ಗೆ 10ಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.
ಗದಗ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ಜಗದ್ಗುರು ಡಾ.ಸಿದ್ಧಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ, ಹಾರಕೂಡನ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನೇತೃತ್ವ ವಹಿಸಲಿದ್ದಾರೆ.
ಮುಂಡರಗಿಯ ತೋಂಟದಾರ್ಯ ಶಾಖಾ ಮಠದ ಶ್ರೀ ನಿಜಗುಣಪ್ರಭು ತೋಟದಾರ್ಯ ಮಹಾಸ್ವಾಮೀಜಿ ಅನುಭಾವ ನೀಡಲಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರವಾಸೋದ್ಯಮ ಸಚಿವ ಪ್ರೀಯಾಂಕ ಖರ್ಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು.
ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದು, ಶಾಸಕ ಮಲ್ಲಿಕಾರ್ಜುನ ಖೂಬಾ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. ಎಂಎಲ್ಸಿ ವಿಜಯಸಿಂಗ, ಶಾಸಕ ರಹೀಮಖಾನ, ಬಿಡಿವಿಸಿ ಅಧ್ಯಕ್ಷ ಮಲ್ಲಯ್ಯ ಹಿರೇಮಠ, ಬಿಡಿಪಿಸಿ ಅಧ್ಯಕ್ಷ ವೀರಣ್ಣ ಹಲಶೆಟ್ಟಿ ಸೇರಿದಂತೆ ಪ್ರಮುಖರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 3ಕ್ಕೆ ಲಿಂಗಾಯತಕ್ಕೆ ಬಸವಣ್ಣನೇ ಕರ್ತ ಎನ್ನುವ ವಿಷಯ ಕುರಿತು ಗೋಷ್ಠಿ ನಡೆಯಲಿದ್ದು, ತಾಂಬೋಳನ ಶ್ರೀ ವಿಜಯಕುಮಾರ ಮಹಾಸ್ವಾಮೀಜಿ ಸಾನ್ನಿಧ್ಯ, ಬಸವಬೆಳವಿಯ ಶ್ರೀ ಶರಣಬಸವ ಮಹಾಸ್ವಾಮೀಜಿ ನೇತೃತ್ವ, ಬೇಲೂರನ ಶ್ರೀ ಪಂಚಾಕ್ಷರಿ ಸ್ವಾಮೀಜಿ ಸಮ್ಮುಖ ವಹಿಸುವರು.
ತೋಟಗಾರಿಕೆ ವಿವಿಯ ಅಶೋಕ ಆಲೂರ ಗೋಷ್ಠಿ ಉದ್ಘಾಟಿಸಲಿದ್ದು, ಡಾ.ಅಮರನಾಥ ಸೋಲಪೂರೆ ಅಧ್ಯಕ್ಷತೆ ವಹಿಸುವರು. ಧಾರವಾಡನ ಎನ್.ಜಿ.ಮಹಾದೇವಪ್ಪ, ಶಹಾಪೂರನ ವಿಶ್ವರಾಧ್ಯ ಸತ್ಯಂಪೇಟೆ, ಕೊಲ್ಲಾಪೂರನ ರಾಜಾಭಾವು ಸಿರಗುಪ್ಪೆ ಅನುಭಾವ ನೀಡುವರು.
ಸಂಜೆ 6ಕ್ಕೆ ವಚನ ಭಜನೆ ಸ್ಪರ್ಧೆ ನಡೆಯಲಿದ್ದು, ಶ್ರೀ ಅಭಿನವ ಷಣ್ಮಖ ಮಹಾಸ್ವಾಮೀಜಿ ಸಾನ್ನಿಧ್ಯ, ಶ್ರೀ ಶಂಕರಲಿಂಗ ಮಹಾಸ್ವಾಮೀಜಿ, ಶ್ರೀ ಸಂಗಮೇಶ್ವರ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಸ್ಪರ್ಧೆ ಗೆ ಚಾಲನೆ ನೀಡಲಿದ್ದು, ಕನ್ನಡ ಸಂಸ್ಕೃತಿ ಇಲಾಖೆ ಸಹ ನಿರ್ದೇಶಕ ರಾಜಶೇಖರ ಪಾಟೀಲ್ ಅಧ್ಯಕ್ಷತೆ ವಹಿಸುವರು.
ಪ್ರಶಸ್ತಿ: ಶರಣ ಕಮ್ಮಟ, ಅನುಭವ ಮಂಟಪ ಉದ್ಘಾಟನಾ ಸಮಾರಂಭದಲ್ಲಿ ಶ್ರೀಶೈಲ ಸಾರಂಗಮಠದ ಶ್ರೀ ಜಗದ್ಗುರು ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಅವರಿಗೆ ಡಾ.ಚನ್ನಬಸವ ಪಟ್ಟದೇವರ ಅನುಭವ ಮಂಟಪ ಪ್ರಶಸ್ತಿ ಹಾಗೂ ಧಾರವಾಡನ ಭಾಷಾ ತಜ್ಞ, ಸಂಶೋಧಕ ಡಾ.ಗಣೇಶ ದೇವಿ ಅವರಿಗೆ ಡಾ.ಎಂ.ಎಂ. ಕಲಬುರಗಿ ರಾಷ್ಟ್ರೀಯ ಸಂಶೋಧನ ಪ್ರಶಸ್ತಿ ಪ್ರದಾನಮಾಡಿ ಗೌರವಿಸಲಾಗುತ್ತಿದೆ.

LEAVE A REPLY

Please enter your comment!
Please enter your name here