ಶವವನ್ನು ಹೊರಹಾಕಿದ ಮುಕ್ತಿಧಾಮದ ಆಡಳಿತ

0
208

ದೊಡ್ಡಬಳ್ಳಾಪುರ: ರಸೀದಿ ಹಾಕಿಸಿಲ್ಲ ಎಂಬ ನೆಪ ಹೇಳಿ ಹೆಣವನ್ನು ಮುಕ್ತಿ ದಾಮದಿಂದ  ಹೊರ ಹಾಕಿಸಿ ತಮ್ಮ ಅನಾಗರೀಕತೆಯನ್ನು ಮೆರೆದ ಮುಕ್ತಿದಾಮದ ಆಡಳಿತ. ರಾತ್ರಿ ಇಡೀ ಮುಕ್ತದಾಮದ ಎದುರು ಶವ ಇಟ್ಟು ಮೌನ ಹೋರಾಟ ಮಾಡುತ್ತಿರುವ ಮೃತ ವನಜಾ ಸಂಬಂಧಿಕರು. ಜಾಣ ಕುರುರುಡು ಪ್ರದರ್ಶನಕ್ಕೆ ಮುಂದಾದ ನಗರ ಮತ್ತು ತಾಲ್ಲೂಕು ಆಡಳಿತ. ಘಟನೆಯ ವಿವರ: ವಾರದ ಹಿಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ ಸಂಜಯನಗರದ ನಿವಾಸಿ ವನಜ(30) ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ನೆನ್ನೆ ಸಾವನ್ನಪ್ಪಿದ್ದು ಮರಣೋತ್ತರ ಪರೀಕ್ಷೆ ಪ್ರಕ್ರಿಯೆಗಳನ್ನು ಮುಗಿಸಿ ಮುಕ್ತಿಧಾಮಕ್ಕೆ ಶವನ್ನು ತರುವುದು ವಿಳಂಬ ವಾಗಿದೆ. ಮುಕ್ತಿ ದಾಮದ ನಿಯಮದಂತೆ ಸಂಜೆ 6.30 ನಂತರ ಶವವನ್ನು ದಹನ ಮಾಡುವಂತಿಲ್ಲವಂತೆ  ಮುಕ್ತಿದಾಮದವರು ಹೇಳುವಂತೆ. ಆದರೆ ಅವರ ನಿಯಮದಂತೆ ದಹನಕ್ರಿಯೆ ಬೇಡ ಸರಿ ಆದರೆ ಶವವನ್ನು ಮುಕ್ತಿದಾಮದ ಆವರಣದಿಂದ ಹಿರ ಹಾಕಿ ಅವರ ಅಮಾನವೀಯತೆ ಮೆರದ ಆಡಳಿತದವರನ್ನು ಪ್ರಶ್ನಿಸಿದವರಿಗೆ ಒಂದೇ ಉತ್ತರ ನೀವು ಯಾರಿಗಾದರೂ ಹೇಳಿ ಎಲ್ಲಿಗಾದರೂ ಹೋಗಿ ಎಂಬ ಜಂಬದ ಮಾತೊಂದೇ ಉತ್ತರವಾಗಿದೆ.

LEAVE A REPLY

Please enter your comment!
Please enter your name here