ಶಸ್ತ್ರಸಜ್ಜಿತ ಸಿಬ್ಬಂದಿ ನಿಯೋಜಿಸುವಂತೆ..

0
219

ಬಳ್ಳಾರಿ /ಹೊಸಪೇಟೆ:ವಿಶ್ವ ಪರಂಪರೆ ತಾಣ ಹಂಪಿಯ ಸ್ಮಾರಕಗಳ ಹಾಗೂ ಪ್ರವಾಸಿಗರ ಭದ್ರತೆಗೆ ಶಸ್ತ್ರಸಜ್ಜಿತ ಸಿಬ್ಬಂದಿ ನಿಯೋಜಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕ್ರಮ ಕೈಗೊಂಡಿದೆ.

ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲ, ವಿಜಯ ವಿಠ್ಠಲ್ ದೇಗುಲ, ಕಲ್ಲಿನ ತೇರು, ಕಮಲ ಮಹಲ್, ಮಾಲ್ಯವಂತ ರಘುನಾಥ್ ದೇವಾಲಯ, ಶ್ರೀಕೃಷ್ಣ ದೇಗುಲ ಸೇರಿದಂತೆ ಪ್ರಮುಖ ಸ್ಮಾರಕಗಳ ಬಳಿ 12 ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲು ಇಲಾಖೆ ಯೋಜನೆ ರೂಪಿಸಿದೆ. ಹಂಪಿಯ ಸ್ಮಾರಕಗಳ ಸಂರಕ್ಷಣೆಗೆ ಇದೇ ಮೊತ್ತಮೊದಲ ಬಾರಿಗೆ ಶಸ್ತ್ರ ಸಜ್ಜಿತ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.

ಹಂಪಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ 64 ಕಾವಲುಗಾರರನ್ನು ನಿಯೋಜನೆ ಮಾಡಿದೆ. ಆದರೆ, ಅವರು ಶಸ್ತ್ರರಹಿತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಂಪಿಯ ಸ್ಮಾರಕಗಳ ಬಳಿ ಶಸ್ತ್ರ ಸಜ್ಜಿತ ಭದ್ರತಾ ಸಿಬ್ಬಂದಿಯ ನಿಯೋಜನೆಗಾಗಿ ಬಳ್ಳಾರಿ ಎಸ್ಪಿಯವರ ಜತೆಗೂ ಚರ್ಚಿಸಲು ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಹಂಪಿಯಲ್ಲಿ ನಿಧಿಚೋರರ ಹಾವಳಿ ಹೆಚ್ಚಿರುವುದರಿಂದ; ಸ್ಮಾರಕಗಳಿಗೆ ಹೆಚ್ಚಿನ ಭದ್ರತೆ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಹಂಪಿಯ ಮಾಲ್ಯವಂತ ರಘುನಾಥ್ ದೇಗುಲದ ಬಳಿ 2012ರಲ್ಲಿ ಗಾಳಿ ಗೋಪುರವನ್ನು ನಿಧಿಚೋರರು ಧ್ವಂಸಗೊಳಿಸಿದ್ದರು. 2010-09ರಲ್ಲಿ ಸಾಲು ಸಾಲಾಗಿ ಮಂಟಪಗಳ ಬಳಿ ನಿಧಿ ಅಗೆಯಲಾಗಿತ್ತು. ಹಂಪಿಯಲ್ಲಿ ನಿಧಿಚೋರರ ಹಾವಳಿ ಜಾಸ್ತಿಯಾಗಿರುವುದರಿಂದ ಹಾಗೂ ಪ್ರವಾಸಿಗರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹೆಸರುಹೇಳಲ್ಛಿಸದ ಅಧಿಕಾರಿಗಳು ಹೇಳುತ್ತಾರೆ

LEAVE A REPLY

Please enter your comment!
Please enter your name here