ಶಾಂತಿಯುತ ಬಂದ್ ಯಶಸ್ವಿ

0
610

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕು ಮತ್ತು ನಗರದಲ್ಲಿ ಶಾಂತಿಯುತ ಬಂದ್ ಯಶಸ್ವಿಯಾಗಿದೆ.

ಬೆಳಗಿನಿಂದಲೂ ನಡೆದ ಶಾಂತಿಯುತ ಬಂದ್ ಗೆ ಶಾಶ್ವತ ನೀರಾವರಿ ಸಮಿತಿ, ಮಾನವ ಹಕ್ಕುಗಳ ಸಮಿತಿ,ಕ.ರ.ವೇ ಜಾಗೃತಿ ಸಮಿತಿ, ಕ.ರ.ವೇ(ಸಿಂಹ ಸೇನೆ)ಹಾಗೂ ಕನ್ನಡಪರ ಸಂಘಟನೆಗಳು ಮತ್ತು ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿ ಭಟನೆ ನಡೆಸಿದರು.

ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಾಶ್ವತ ನೀರಾವರಿ ಸಮಿತಿ, ಕನ್ನಡ ಪರ ಒಕ್ಕೂಟದ ವತಿಯಿಂದ ಕರೆ ನೀಡಿದ ಕರ್ನಾಟಕ ಬಂದ್ ಗೆ ಚಿಂತಾಮಣಿ ತಾಲ್ಲೂಕು ಮತ್ತು ನಗರದಲ್ಲಿ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ದೊಂದಿಗೆ ಯಶಸ್ವಿಯಾಗಿದೆ.

ಬಂದ್ ಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಶಾಶ್ವತ ನೀರಾವರಿ ಹೋರಾಟ ಅಧ್ಯಕ್ಷರಾದ ಲಕ್ಷ್ಮಿ ನಾರಾಯಣ ರೆಡ್ಡಿ, ಆಯಿಶಾ ಸುಲ್ತಾನ, ನಾರಾಯಣ ಸ್ವಾಮಿ, ಸಿಕಲ್ ರಾಮಣ್ಣ ರೆಡ್ಡಿ ,ಶ್ರೀ ನಿವಾಸ ಕ.ರ.ವೇ(ಸಿಂಹ ಸೇನೆ) ತಾ ಅಧ್ಯಕ್ಷರು ಕೃಷ್ಣೊಜಿ ರಾವ್ , ಹಾಲು ಅಸೀಫ್, ಅಗ್ರಹಾರ ಬೀರಪ್ಪ, ಕಾರ್ತಿಕ್ , ಅರ್ಚನಾ, ಮುಂತಾದವರು ಭಾಗವಹಿಸಿದರು.

LEAVE A REPLY

Please enter your comment!
Please enter your name here