ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಸೌಲಭ್ಯ ನೀಡಿ ಎಂದು ಪ್ರತಿಭಟನೆ..

0
188

ಬಳ್ಳಾರಿ;ಎಲ್ಲೆಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ-ಅಶ್ಲೀಲ ಸಾಹಿತ್ಯ ಸಿನೇಮಾದಿಂದ ಅಗ್ಗವಾದ ಮಹಿಳೆ-ಮಹಿಳೆಯನ್ನು ಗೌರವಿಸಿ-ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಸೌಲಭ್ಯ ನೀಡಿ-ಬಳ್ಳಾರಿಯಲ್ಲಿ ಎಐಎಂಎಸ್ಎಸ್ ನಿಂದ ಪ್ರತಿಭಟನೆ

ಮಹಿಳೆಯರನ್ನು ಇಂದು ಸಿನೇಮಾ ಸಾಹಿತ್ಯದಲ್ಲಿ ಅಶ್ಲೀಲವಾಗಿ ಚಿತ್ರಿಸುವ ಮೂಲಕ ಅವಮಾನಿಸಲಾಗುತ್ತಿದೆ. ಮಾತೆ ಎಂದು ಪೂಜ್ಯನೀಯ ಭಾವನೆಯಲ್ಲಿ ಕರೆಯಲ್ಪಡುವ ಈ ನಾಡಿನಲ್ಲಿ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ, ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯಿಂದ ಇಂದು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಎಐಎಂಎಸ್ಎಸ್ ನ ರಾಜ್ಯ ಉಪಾಧ್ಯಕ್ಷೆ ಎಂ.ಎನ್.ಮಂಜುಳಾ ನೇತೃತ್ವದಲ್ಲಿ ಈ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಘವ ಕಲಾಮಂದಿರದಿಂದ ಮೆರವಣಿಗೆ ನಡೆಸಿದ ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿದ್ರು.
ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ನೀಡಬೇಕು, ಜೂಡೋ ಮತ್ತು ಕರಾಟೆ ಕಲಿಸಿಕೊಡಲು ಶಿಕ್ಷಕರನ್ನು ನೇಮಿಸಬೇಕು, ಉಚಿತ ಬಸ್ ಪಾಸ್ ವಿತರಿಸಬೇಕು ಅಂತ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿ, ಸಿಎಂ ಗೆ ಮನವಿ ಪತ್ರ ಸಲ್ಲಿಸಿದ್ರು.
ಈ ಸಂದತ್ಙದಲ್ಲಿ ಎಐಎಂಎಸ್ಎಸ್ ನ ಈಶ್ವರಿ ಮತ್ತು ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ರು.

LEAVE A REPLY

Please enter your comment!
Please enter your name here