ಶಾಲಾ ವಾಷಿ೯ಕೋತ್ಸವದಲ್ಲಿ ಮಿಂದೆದ್ದ ಪುಟಾಣಿಗಳು

0
285

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಪ್ರೀತಿ ಮತ್ತು ಶಿಸ್ತು ನಾಣ್ಯದ ಎರಡು ಮುಖಗಳಿದ್ದಂತೆ  ಪೋಷಕರು ಮತ್ತು ಶಿಕ್ಷಕರು ಮಕ್ಕಳ ಮೇಲೆ ಪ್ರೀತಿ ಮತ್ತು ಶಿಸ್ತನ್ನು ಜೊತೆ ಜೊತೆಯಾಗಿ ಸರಿಸಮವಾಗಿ ನೀಡಬೇಕಾಗುತ್ತದೆ. ಇವೆರಡರಲ್ಲಿ ಯಾವುದೇ ಒಂದನ್ನು ಹೆಚ್ಚಾಗಿ ನೀಡಿದರು ಮಕ್ಕಳ ಜೀವನದ ಮೇಲೆ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಹೇಳಿದರು. ನಗರದ ವಿಸ್ಡಮ್ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾಷಿ೯ ಕೋತ್ಸವ ಸಮಾರ೦ಭದಲ್ಲಿ ದೀಪ ಬೆಳಗಿಸುವುದರ ಮೂಲಕ ಅವರು ಮಾತನಾಡಿದರು  ಕ್ಷೇತ್ರ ಶಿಕ್ಷಣ ಅಧಿಕಾರಿ ರಘುನಾಥ್ ರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ನಾಡು ಸಂಸ್ಕತಿ ಕನ್ನಡ , ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕನ್ನಡದಲ್ಲಿ ಓದಿ ಸಾಧನೆ ಮಾಡಿದ , ಚಿಕ್ಕಬಳ್ಳಾಪುರ ಜಿಲ್ಲೆಯವರಾದ ನಾರಾಯಣಮೂತಿ೯ , ವಿಶ್ವೇಶ್ವರಯ್ಯ , ಮುಂತಾದವರ ಆದಶ೯ಗಳನ್ನು ಮಕ್ಕಳು ಪಡೆಯಬೇಕು ಎಂದರು .ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು . ಮಕ್ಕಳು ವಿವಿಧ ನೃತ್ಯಗಳನ್ನು ಮಾಡುವುದರ ಮೂಲಕ ಜನಗಳನ್ನು ರಂಜಿಸಿದರು. ಕಾಯ೯ಕ್ರಮದಲ್ಲಿ ವಿಸ್ಡಮ್ ಶಾಲೆಯ ಆಡಳಿತವರ್ಗ, ಪೋಲಿಸ್ ಉಪನಿರೀಕ್ಷಕ ನವೀನ್. ಕ್ಷೇತ್ರ ಶಿಕ್ಷಣ ಅಧಿಕಾರಿಗ ಕಚೇರಿ ನಿವೃತ್ತ ಪತ್ರಾಂಕಿತ ವ್ಯವಸ್ಥಾಪಕ ಮುನಿಯಪ್ಪ. ನಗರ ಸಭೆ ಮಾಜಿ ಅಧ್ಯಕ್ಷ ತನ್ವೀರ್. ಮುಖ್ಯ ಶಿಕ್ಷಕಿ ಮಾಲ . ಶಿಕ್ಷಕ ರಾಮಾಂಜಿ. ಆಮ್ ಆದ್ಮಿಯ ನಗರ ಘಟಕ ಅಧ್ಯಕ್ಷ ರಾಮಚಂದ್ರ ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here