ಶಾಸಕರಿಂದ ಪರಿಹಾರದನದ ಚೆಕ್ ವಿತರಣೆ

0
250

ಚಾಮರಾಜನಗರ/ಕೊಳ್ಳೇಗಾಲ.: ಇತ್ತಿಚೆಗೆ ಬಿದ್ದ ಗಾಳಿ ಮಳೆಗೆ ತಾಲ್ಲೂಕಿನ ಹೊಸಹಂಪಾಪುರ ಗ್ರಾಮದಲ್ಲಿ
ಮನೆಯ ಗೋಡೆಗಳು ಕುಸಿದು ಹಾನಿಗೊಳಗಾಗಿದ್ದ ಏಳು ಮಂದಿಗೆ ಕೊಳ್ಳೇಗಾಲ ಮೀಸಲು ವಿಧಾನ ಸಭಾಕ್ಷೇತ್ರದ ಶಾಸಕ ಎಸ್.ಜಯಣ್ಣ ಅವರು 30ಸಾವಿರ ಪರಿಹಾರ ದನದ ಚೆಕ್ಕ್ ಅನ್ನು ಭಾನುವಾರ ವಿತರಿಸಿದರು.
ಹೊಸಹಂಪಾಪುರ ಗ್ರಾಮದ ಕಲಾವತಿ, ಶಾಂತಮ್ಮ, ಸಿದ್ದಮ್ಮ, ನಿಂಗನಾಯ್ಕ, ಕೆಂಪಮ್ಮ, ತಾಯಮ್ಮ, ಶೋಭ ಎಂಬುವರ ಮನೆ ಗೋಡೆಗಳು ಗಾಳಿಮಳೆಗೆ ಕುಸಿದು ಹಾನಿಗೊಳಗಾಗಿತ್ತು. ಇದನ್ನು ಮನಗಂಡ ತಾಲೂಕು ಆಡಳಿತ ಗ್ರಾಮಕ್ಕೆ ಬೇಟಿ ನೀಡಿ
ಪÀರಿಶೀಲಿಸಿ ಪರಿಹಾರಕ್ಕೆ ಶಿಫಾರಸ್ಸು ಮಾಡಿತ್ತು. ಈಹಿನ್ನೆಲೆ ಭಾನುವಾರ ಶಾಸಕ ಎಸ್.ಜಯಣ್ಣ ಅವರು
ಗ್ರಾಮದ ಕಲಾವತಿ, ಶಾಂತಮ್ಮ, ಸಿದ್ದಮ್ಮ, ನಿಂಗನಾಯ್ಕ ಅವರುಗಳಿಗೆ ತಲಾ 5.200 ಸಾವಿರ ರೂ ಹಾಗೂ ಕೆಂಪಮ್ಮ, ತಾಯಮ್ಮ, ಶೋಭ ಎಂಬುವವರಿಗೆ ತಲಾ 3.200 ಸಾವಿರ ರೂಗಳನ್ನು ಚೆಕ್ ಅನ್ನು ವಿತರಿಸಿದರು.
ಈ ಸಂದÀರ್ಭದಲ್ಲಿ ತಾ.ಪಂ ಮಾಜಿ ಉಪಾಧ್ಯಕ್ಷ ಬಸವಣ್ಣನಾಯಕ, ಹಂಪಾಪುರ ಬಸವಣ್ಣ, ಗ್ರಾ.ಪಂ ಮಾಜಿ ಅಧ್ಯಕ್ಷ ಲೋಕೇಶ್, ನಗರಸಭೆ ಮಾಜಿ ಸದಸ್ಯ ಮುಡಿಗುಂಡ ಶಾಂತು, ಹರಳೆ ಗ್ರಾ.ಪಂ ಸದಸ್ಯರಾದ ಶಿವಮಲ್ಲು, ಸಿ.ಮಹದೇವ, ಸಿದ್ದಯ್ಯನಪುರ ಗುಣಶೇಖರ್, ಗ್ರಾಮಲೆಕ್ಕಿಗ ಶಿವಣ್ಣ, ಕಂದಾಯಾಧಿಕಾರಿ ವೆಂಕಟರಂಗಸ್ವಾಮಿ ಇನ್ನಿತರರು ಇದ್ದರು.

ಕೊಳ್ಳೇಗಾಲ ತಾಲೂಕಿನ ಹಂಪಾಪುರ ಗ್ರಾಮದ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದವರಿಗೆ
ಶಾಸಕ ಜಯಣ್ಣ ಪರಿಹಾರ ವಿತರಿಸಿದರು.
ಕೊಳ್ಳೇಗಾಲ.ಜೂ.18: ಹಿಂದುಳಿದ ಗ್ರಾಮಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ 3.75 ಕೋಟಿ ಹಣವನ್ನು ಬಿಡುಗಡೆ ಮಾಡಿದೆ ಎಂದು ಶಾಸಕ ಎಸ್.ಜಯಣ್ಣ ಹೇಳಿದರು.
ಅವರು ತಾಲ್ಲೂಕಿನ ಟಗರಪುರಮೋಳೆ ಗ್ರಾಮದಲ್ಲಿ ಭಾನುವಾರ ಗ್ರಾಮವಿಕಾಸ್ ಯೋಜನೆಯಡಿ 97 ಲಕ್ಷ ವೆಚ್ಚದಲ್ಲಿ ಹಾಗೂ ಸಿಲ್ಕಲ್‍ಪುರ ಗ್ರಾಮದಲ್ಲಿ 47 ಲಕ್ಷ್ಷ ವೆಚ್ಚದಲ್ಲಿ ವಿವಿಧ ಕಾಮಾಗಾರಿಗಳಿಗೆ ಗುದ್ಧಲಿಪೂಜೆಗೆ ಚಾಲನೆ ನೀಡಿ ಮಾತನಾಡಿ, ಸಣ್ಣಪುಟ್ಟ ಗ್ರಾಮಗಳಲ್ಲಿ ನೈಮಲ್ಯತೆ ಕಾಪಾಡುವ ನಿಟ್ಟಿನಲ್ಲಿ ಚರಂಡಿ, ರಸ್ತೆ ನಿರ್ಮಾಣ, ಹಸು ಸಾಕುವ ಜನರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತಿಪ್ಪೆಗುಂಡಿ ಮಾಡಲು ಅವಕಾಶ, ವಿದ್ಯುತ್ ಅಳವಡಿಸಿಕೊಳ್ಳಲು ಸಾಧ್ಯವಾಗದ ಕುಗ್ರಾಮದ ಜನರಿಗೆ ವಿದ್ಯುತ್ ಸುಲಭವಾಗಿ ದೊರಕುವ ನಿಟ್ಟಿನಲ್ಲಿ ಸೋಲಾರ್ ಅಳವಡಿಕೆ ಹಾಗೂ ಸಮುದಾಯಭವನ, ಆಟದ ಮೈದಾನ, ರಂಗ ಮಂದಿರ, ದೇವಾಲಯ ಅಭಿವೃದ್ಧಿ ಸೇರಿದಂತೆ ಹಲವಾರು ಯೋಜನೆಗಳನ್ನು ನೀಡಿ ದೊಡ್ಡ ಗ್ರಾಮದ ಮಟ್ಟಕೆ ತರುವ ನಿಟ್ಟಿನಲ್ಲಿ ಸರ್ಕಾರ ಗ್ರಾಮ ವಿಕಾಸ್ ಯೋಜನೆ ರೂಪಿಸಿ ಪ್ರತಿ ವಿಧಾನಸಭಾ ವ್ಯಾಪ್ತಿಗೆ ಹಣವನ್ನು ಬಿಡುಗಡೆ ಮಾಡಿದೆ ಎಂದರು.
ನನ್ನ ಕ್ಷೇತ್ರದಲ್ಲಿ ಸಾವಿರ ಸಂಖ್ಯೆಗಿಂತ ಕಡಿಮೆ ಇರುವ 6 ಸಣ್ಣ ಸಣ್ಣ ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು ಅದರಲ್ಲಿ ಟಗರಪುರ ಮೋಳೆ ಹಾಗೂ ಸಿಲ್ಕಲ್‍ಪುರ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿ ಪಡಿಸಲಾಗುತ್ತಿದೆ. ಕಾಮಗಾರಿಗಳ ಅಭಿವೃದ್ಧಿಗೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಬ್ಲಾಕ್ ಅಧ್ಯಕ್ಷ ತೋಟೇಶ್, ತಾ.ಪಂ ಉಪಾಧ್ಯಕ್ಷೆ ಲತಾರಾಜಣ್ಣ, ಎಪಿಎಂಸಿ ಸದಸ್ಯ ಬಸವಣ್ಣ, ಟಗರಪುರ ಗ್ರಾ.ಪಂ ಅಧ್ಯಕ್ಷ ನಿಂಗರಾಜು, ಮುಖಂಡರಾದ ರಾಚಶೆಟ್ಟಿ, ತಾಯಿವೀರೇಗೌಡ, ರವಿ, ಮಲ್ಲಣ್ಣ, ರಾಚಶೆಟ್ಟಿ, ಭೂ ಸೇನಾ ನಿಗಮದ ಇಂಜಿನಿಯರ್ ಶಿವನಂಜಪ್ಪ ಇನ್ನಿತರರು ಇದ್ದರು.
ಕೊಳ್ಳೇಗಾಲ ತಾಲೂಕಿನ ಟಗರಪುರಮೋಳೆ ಗ್ರಾಮದಲ್ಲಿ ಭಾನುವಾರ ಗ್ರಾಮವಿಕಾಸ್ ಯೋಜನೆಯಡಿ 97 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಜಯಣ್ಣ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here