ಶಾಸಕರಿಂದ ಭೂಮಿ ಪೂಜೆ ಕಾರ್ಯಕ್ರಮ.

0
180

ಚಿಕ್ಕಬಳ್ಳಾಪುರ/ಚಿಂತಾಮಣಿ:- 2017-18 ನೇ ಸಾಲಿನ ರೂಸಾ ಯೋಜನೆಯಡಿಯಲ್ಲಿ ಚಿಂತಾಮಣಿ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಸುಮಾರು 70 ಲಕ್ಷಗಳ ವೆಚ್ಚದಲ್ಲಿ ಹೆಚ್ಚುವರಿ ಕೊಠಡಿಗಳುಮತ್ತು 2017 -18 ನೇ ಸಾಲಿನ ರೂಸಾ ಯೋಜನೆಯಡಿಯಲ್ಲಿ ನಗರದ ಸರ್ಕಾರಿ ಬಾಲಕರ ಪದವಿ ಕಾಲೇಜಿನಲ್ಲಿ ಸುಮಾರು 70 ಲಕ್ಷಗಳ ವೆಚ್ಚದಲ್ಲಿ ಹೆಚ್ಚುವರಿ ಕೊಠಡಿಗಳು ನಿರ್ಮಾಣ ಮಾಡುವ ಕಾಮಗಾರಿಗೆ ಮತ್ತುಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಚಿನ್ನಸಂದ್ರ ಗ್ರಾಮದ ಹತ್ತಿರ ಮೇಟ್ರಿಕ್ ನಂತರ ಮಾದರಿ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡದ ಕಾಮಗಾರಿ 3 ಕೋಟಿ 29 ಲಕ್ಷ ಮತ್ತು 2017 -18 ನೇ ಸಾಲಿನ ಎತ್ತಿನಹೊಳೆ ಯೋಜನಯಡಿಯಲ್ಲಿ ಚಿಕ್ಕಕೊಂಡ್ರಹಳ್ಳಿಯಲ್ಲಿ 5 ಲಕ್ಷ , ಹುಸೇನ್ ಪುರ ದಲ್ಲಿ 6 ಲಕ್ಷ , ಮತ್ತು ಶ್ರೀನಿವಾಸಪುರದಲ್ಲಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಎಸ್ ಟಿ ಕಾಲೋನಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೋಜೆಯನ್ನು ಉಪ ಸಭಾಧ್ಯಾಕ್ಷರಾದ ಜೆ.ಕೆ ಕೃಷ್ಣಾ ರೆಡ್ಡಿ ರವರು ನೆರವೇರಿಸಿದರು.
ನಂತರ ಮಾತನಾಡಿ ಕಾಮಗಾರಿಯನ್ನು ಗುಣಮಟ್ಟದಿಂದ ಕೂಡಿರಬೇಕು ಮತ್ತು ಕಾಲಮೀತಿಯ ಒಳಗಡೆ ಕಾಮಗಾರಿಯನ್ನು ಪೂರ್ಣಗೋಳಿಸಬೇಕಂದು ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿದರು .

ಈ ಸಂದರ್ಭದಲ್ಲಿ ಸರ್ಕಾರಿ ಮಹಿಳಾ ಕಾಲೇಜಿ ಪ್ರಾಂಶುಪಾಲರಾಗಿ ಕೆ.ಎ ಉಮಾ ಶಂಕರ ಪ್ರಸಾದ್ , ಉಪನ್ಯಾಸಕ ಎಂ.ಎನ್ ರಘು , ನಗರಸಭೆ ಸದಸ್ಯರು, ಜೆಡಿಎಸ್ ಮುಖಂಡರು ಸೈಯದ್ ಜಮೀಲ್ ,ಎಂ.ಶಫೀ ,ಮುನೇಂದ್ರ, ಭಚಾರೆಡ್ಡಿ ,ಅವಲಪ್ಪ,ನರಸಿಂಹ ರೆಡ್ಡಿ, ಮುನ್ನರೆಡ್ಡಿ , ಸಾದೀಕ್, ಸ್ಥಳೀಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here