ಶಾಸಕರಿಗಾಗಿ ಕಾದುಕುಳಿತ ಟಿಪ್ಪು ಅಭಿಮಾನಿಬಳಗ…!

0
45

ಮಂಡ್ಯ/ಮಳವಳ್ಳಿ :ತಾಲ್ಲೂಕು ಆಡಳಿತ ಹಾಗೂ ಅಲ್ಪ ಸಂಖ್ಯಾಂತರ ಇಲಾಖೆ ವತಿಯಿಂದ ಟಿಪ್ಪು ಜಯಂತಿ ಆಚರಣೆ ವೇದಿಕೆ ಸಿದ್ದವಾಗಿತ್ತು ಆದರೆ ನಿಗಧಿತ ವೇಳೆಗೆ ಪ್ರಾರಂಭವಾಗದೆ ಶಾಸಕರಿಗಾಗಿ ಬರುವಿಕೆಗಾಗಿ ತಾಲ್ಲೂಕು ಆಡಳಿತ ಹಾಗೂ ಟಿಪ್ಪು ಅಭಿಮಾನಿಗಳು ಕಾದುಕುಳಿತ. ಪ್ರಸಂಗ ಜರುಗಿತು.
ಮಳವಳ್ಳಿ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಆಡಳಿತ ಕಾರ್ಯಕ್ರಮ ವನ್ನು 11 ಗಂಟೆಗೆ ಆಯೋಜಿಸಲಾಗಿತ್ತು. ಆದರೆ 1ಗಂಟೆಯಾದರೂ ಸಮಾರಂಭಕ್ಕೆ ಬಾರದ ಶಾಸಕ ಡಾ.ಕೆ ಅನ್ನದಾನಿ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮುಸ್ಲಿಂ ಬಂಧವರು ಸಹ ಶಾಸಕರ ಹಾದಿಯನ್ನೇ ಕಾಯ್ದರೆ ಕೆಲವರು ಹಿಡಿಶಾಪಹಾಕಿದುಂಟು ಅಂತೂ ಇಂತೂ 1:05 ಗಂಟೆ ಬಂದ ಶಾಸಕರನ್ನು ಟಿಪ್ಪು ಅಭಿಮಾನಿಯೊಬ್ಬ ಶಾಸಕರನ್ನು ಎಲ್ಲ ಅಭಿಮಾನಿಗಳ ಹಾಗೂ ಅಧಿಕಾರಗಳ ಎದುರೇ ತಡವಾಗಿ ಬಂದ್ದಿದ್ದನ್ನು ಪ್ರಶ್ನಿಸಿದನು ಇದಕ್ಕೆ ಶಾಸಕ ಡಾ.ಕೆ ಅನ್ನದಾನಿ ಕೆಂಡಾಮಂಡಲವಾಗಿ ಅಭಿಮಾನಿ ಮೇಲೆ ಸಿಡಿಕಿದರು ಇದನ್ನು ಅರಿತ ಪುರಸಭೆ ಸದಸ್ಯ ಮೆಹಬೂಬ್ ಪಾಷ ರವರು ಯಾವುದೇ ತೊಂದರೆಯಾಗದೆ ಶಾಸಕರನ್ನು ಹಾಗೂ ಅಭಿಮಾನಿಯನ್ನು ಸಮಾದಾನಪಡಿಸಿ ವೇದಿಕೆಯತ್ತ ಕರೆದುಕೊಂಡು ಹೋದರು. ನಂತರ ಟಿಪ್ಪು ಅಭಿಮಾನಿಗಳಿಗೆ ಕಾರ್ಯಕ್ರಮದಲ್ಲಿ ಕ್ಷಮೆ ಕೋರಿದ ಶಾಸಕ ಡಾ.ಕೆ ಅನ್ನದಾನಿರವರು ಮಾತನಾಡಿ ಟಿಪ್ಪು ಜಯಂತಿಯನ್ನು ಯಾರು ವಿರೋಧಿಸುತ್ತಾರೆ ಅವರು ದೇಶ ವಿರೋಧಿಗಳು ಶಾಸಕ .ಡಾ.ಕೆ ಅನ್ನದಾನಿ. ಎಂದರು ಮಳವಳ್ಳಿಗೂ ಟಿಪ್ಪುವಿಗೂ ನಿಕಟ ಸಂಬಂಧವಿದೆ. ಟಿಪ್ಪುಸುಲ್ತಾನ್ ರವರು ಬ್ರಿಟಿಷ್ ರವರ ವಿರುದ್ದ ಯುದ್ದ ಮಾಡಿದ್ದು ಮಳವಳ್ಳಿ ಯಿಂದ ಪ್ರಾರಂಭವಾದದ್ದು ಅದಕ್ಕೆ ಟಿಪ್ಪು ಸುಲ್ತಾನ್ ರಸ್ತೆ ಹೆಸರು ಈಗಲೂ ಇರುವುದು ನಿದರ್ಶನ . ಕಾರ್ಯಕ್ರಮ ವನ್ನು ತಾ.ಪಂ ಅಧ್ಯಕ್ಷ ಆರ್.ಎನ್ ವಿಶ್ವಾಸ , ಉಪಾಧ್ಯಕ್ಷ ಮಾಧು, ತಹಸೀಲ್ದಾರ್ ಚಂದ್ರಮೌಳಿ, ಪುರಸಭೆ ಸದಸ್ಯ ಮೆಹಬೂಬ್ ಪಾಷ, ಮುಸ್ಲಿಂ ಜನಾಂಗದ ಮುಖಂಡರು ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here