ಶಾಸಕರಿಗೆ ಅದ್ಧೂರಿ ಸ್ವಾಗತ..

0
422

ಬಳ್ಳಾರಿ /ಹೊಸಪೇಟೆ:ಗ್ರಾಮ ವಾಸ್ತವ್ಯ ಹೂಡಲು ಇಂದು ತಾಲೂಕಿನ ಕಮಲಾಪುರ ಪಟ್ಟಣಕ್ಕೆ ಆಗಮಿಸಿದ್ದ ಶಾಸಕ ಆನಂದ್ ಸಿಂಗ್ ಗೆ ಪಟ್ಟಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.ಪಟ್ಟಣಕ್ಕೆ ಆಗಮಿಸಿದ ಶಾಸಕರಿಗೆ ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ತಾಷಾ ರಂಡೋಲ್, ಡೊಳ್ಳು, ಕೋಲಾಟ, ನಂದಿಕೋಲು ಸೇರಿದಂತೆ ಗ್ರಾಮದ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ನಾಗರೀಕರು, ಮಹಿಳೆಯರು ಹಾಗೂ ಮಕ್ಕಳು ಅದ್ಧೂರಿ ಸ್ವಾಗತ ಕೋರಿದರು. ಹಳೇ ಬಸ್ ನಿಲ್ದಾಣದಿಂದ ಬಂಡಿಕೇರಿ ವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.ನಂತರ ಶಾಸಕ ಆನಂದ್ ಸಿಂಗ್, ಕಮಲಾಪುರ ಪಟ್ಟಣದ ಬಂಡಿಕೇರಿಯಲ್ಲಿ ನೂತನವಾಗಿ ನಿರ್ಮಿಸಲಾದ ಚಾವಡಿ ಕಟ್ಟಡದ ಉದ್ಘಾಟನೆ, ಗೋನಾಳ್ ಕೆರೆಗೆ ಭೂಮಿಪೂಜೆ ನೆರವೇರಿಸಿದರು. ಅಲ್ಲದೆ ಊರಮ್ಮನಬೈಲು ಪ್ರದೇಶದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ರೈತ ಫಲಾನುಭವಿಗಳಿಗೆ ಪಂಪ್ ಸೆಟ್ ಗಳಿಗೆ ಅಳವಡಿಸುವ ಯಂತ್ರಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸೈಯದ್ ಸಮೀವುಲ್ಲಾ, ಪಟ್ಟಣ ಪಂಚಾಯಿತಿ ಸದಸ್ಯರಾದ ಮೆಹಬೂಬ ಬಾಷಾ, ಶಿವರಾಮ, ಬಿಜೆಪಿ ಅಧ್ಯಕ್ಷ ರಾಮಿರೆಡ್ಡಿ, ಗುರುನಾಥ, ಬಿಜೆಪಿ ಮುಖಂಡರಾದ ಧರ್ಮೇಂದ್ರ ಸಿಂಗ್, ಸಂತೋಷ್ ಸಿಂಗ್ ಸೇರಿದಂತೆ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here