ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ

0
95

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ಸಂತೇಕಲ್ಲಹಳ್ಳಿ, ತಳಗವಾರ , ಮಸ್ತೆನಹಳ್ಳಿ, ಕೈವಾರ ,ಹಲವು ಗ್ರಾಮಗಳಲ್ಲಿ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಚಿಂತಾಮಣಿ ಕ್ಷೇತ್ರದಲ್ಲಿ ಎರಡನೇ ಬಾರಿ ಯಾಗಿ ಶಾಸಕರಾಗಿ ಆಯ್ಕೆಯಾದ ಜೆಕೆ ಕೃಷ್ಣಾ ರೆಡ್ಡಿ ಅವರಿಗೆ ಹೂವಿನ ಹಾರ , ತಲೆಗೆ ಪೇಟ, ಶಾಲೂ ಹೊದಿಸುವ ಮೂಲಕ ಸನ್ಮಾನವನ್ನು ಮಾಡಿದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಜೆಕೆ ಕೃಷ್ಣಾ ರೆಡ್ಡಿ ಅವರು ಚುನಾವಣೆ ಮುಗಿದ ಎರಡು ದಿನಗಳಲ್ಲಿ ಯೇ ತಾಲೂಕಿನ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ತಾಲೂಕಿನ ಜನತೆಗೆ ಅಭಿನಂದನೆಗಳನ್ನು ತಿಳಿಸಬೇಕಾಗಿತ್ತು.

ಸರ್ಕಾರದರಚನೆಯ ಗೊಂದಲದಲ್ಲಿತ್ತು ಅದಾ ಕಾರಣ ಹದಿನೈದು ದಿನಗಳ ಕಾಲ ಸಾಧ್ಯವಾಗಲಿಲ್ಲ ಏಂದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಜನರಿಗೆ ಗ್ರಾಮಸ್ಥರಿಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ಹಾಗೂ ತಾಲೂಕಿನ ಜನರು ಪ್ರಾರ್ಥನೆ, ಸಹಕಾರ ಮೂಲಕ ಮತ್ತೊಮ್ಮೆ ಗೆದ್ದು ಶಾಸಕನಾಗಿ ಬಂದಿದ್ದೇನೆ. ನೀವಿಟ್ಟ ವಿಶ್ವಾಸಕ್ಕೆ ಎಂದಿಗೂ ಧಕ್ಕೆ ಬಾರದಂತೆ ಕೆಲಸ ಮಾಡುತ್ತೇನೆ ಎಂದು. ಅವರು ನುಡಿದರು.

ಈ ಸಂದರ್ಭದಲ್ಲಿ ತಳಗವಾರ ರಾಜಗೋಪಾಲ್, ಶ್ರೀನಿವಾಸ್ ರೆಡ್ಡಿ, ನಾರಾಯಣಸ್ವಾಮಿ, ವೆಂಕಟೇಶ್, ಮೇಷ್ಟ್ರು, ಕೃಷ್ಣಪ್ಪ, ಮಂಜುನಾಥ್, ಮಹೇಶ್ ,ರಮೇಶ್, ಗ್ರಾಮದ ಹಿರಿಯರು ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here