ಶಾಸಕರಿಗೆ ಅಭಿನಂದನ ಕಾರ್ಯಕ್ರಮ..

0
123

ಬೆಂಗಳೂರು/ಕೆ.ಆರ್.ಪುರ:-ಕ್ಷೇತ್ರ ಅಭಿವೃದ್ದಿಗೆ ಜನ ಮನ್ನಣೆ ನೀಡಿ ಅತಿ ಹೆಚ್ಚು ಬಹುಮತಗಳಿಂದ ಗೆಲ್ಲಿಸಿದ್ದುಜನರ ವಿಶ್ವಾಸದಂತೆ ಮಾದರಿ ಕ್ಷೇತ್ರವನ್ನಾಗಿ ಮಾಡುವ ಬರವಸೆಯನ್ನು ಶಾಸಕ ಬೈರತಿ ಬಸವರಾಜ್ ತಿಳಿಸಿದರು.ಕ್ಷೇತ್ರದ ಜನಪ್ರಿಯ ಶಾಸಕರಾಗಿ ಎರಡನೇ ಬಾರಿಗೆ ಅತಿ ಹೆಚ್ಚು ಬಹುಮತಗಳಿಂದ ಆಯ್ಕೆಯಾದ ಬೈರತಿ ಬಸವರಾಜ್ರವರನ್ನು ಅಭಿನಂದಿಸಲು ವಿಜಿನಾಪುರ ವಾರ್ಡ್ ಎಪ್.ಸಿ.ಐ ಗೋದಾಮು ಬಳಿ ಸೈಯದ್ ಮಸ್ತಾನ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಚುನಾವಣಾ ಪೂರ್ವದಲ್ಲಿ ನಾನು ನೀಡಿರುವ ಬರವಸೆಯಂತೆ ಕಳೆದ ಅವಧಿಯಲ್ಲಿ ಕ್ಷೇತ್ರದ ಸಂಪೂರ್ಣ ಅಭಿವೃದ್ದಿ ಪಡಿಸಿರುವುದಾಗಿ, ಮುಂದಿನ ಅವಧಿಯಲ್ಲಿ ಉಳಿಕೆಯಿರುವ ಕಾಮಗರಿಗಳನ್ನು ಮುಂದುವರೆಸುವುದಾಗಿ ತಿಳಿಸಿದರು. ಎಲ್ಲ ರಸ್ತೆಗಳ ಡಾಂಬರೀಕರಣ ಹಾಗೂ ಚರಂಡಿ ಅಭಿವೃದ್ದಿ ಮುಗಿದಿದ್ದು ಉಳಿಕೆಯಿರುವ ಕಾಮಗಾರಿ ಕೂಡಲೆ ಕೈಗೆತ್ತಿಕೊಳ್ಳಲಾಗುವುದೆಂದರು. ಈ ಬಾರಿ ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಪರಿಸ್ಥಿತಿ ಉಂಟಾಯಿತೆಂದರು. ಮೈತ್ರಿ ಸರ್ಕಾರದ ಮುಖ್ಯ ಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಮಿ ಹಾಗೂ ಉಪಮುಖ್ಯಮಂತ್ರಿಯಾಗಿ ಡಾ||ಜಿ.ಪರಮೇಶ್ವರ್ ಅಧಿಕಾರ ವಹಿಸಿಕೊಂಡು ಉತ್ತಮ ಆಡಳಿತ ಒದಗಿಸುವ ಬರವಸೆಯಿದೆ ಎಂದರು. ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರದಲ್ಲಿ ಈಗಾಗಲೆ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದ್ದು ಕುಡಿಯಲು ಸಮರ್ಪಕವಾಗಿ ಕಾವೇರಿ ನೀರು ಒದಗಿಸಲಾಗಿದೆ ಎಂದರು. ಕ್ಷೇತ್ರದಲ್ಲಿ ನನ್ನ ಮೇಲೆ ಜನರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಹೆಚ್ಚಿನ ಅಭಿವೃದ್ದಿಗೆ ವತ್ತು ನೀಡಿ ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುವುದಾಗಿ ತಿಳಿಸಿದರು. ಚುನಾವಣೆಯಲ್ಲಿ ಎರಡನೆಯ ಬಾರಿಗೆ ನನ್ನನ್ನು ಹೆಚ್ಚು ಬಹುಮತಗಳಿಂದ ಆರಿಸಿದ ಮತದಾರರಿಗೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸೈಯದ್ ಮಸ್ತಾನ್, ಹಿರಿಯ ಮುಖಂಡ ಮುನಿಯಪ್ಪ, ಕೃಷ್ಣಮೂರ್ತಿ, ವಜೀರ್, ನಿಸಾರ್ ಹಾಗೂ ವಾರ್ಡ್ ಕಾರ್ಯಕರ್ತರು ಹಾಜರಿದ್ದರು..

LEAVE A REPLY

Please enter your comment!
Please enter your name here