ಶಾಸಕರಿಗೆ ಘೆರಾವ್…

0
919

ತುಮಕೂರು/ ಪಾವಗಡ ಗ್ರಾಮಾಂತರ :ರಸ್ತೆ ತಡೆದು ಬಂದ್ಆಚರಿಸುವಾ ವೇಳೆ ಅದೇ ಮಾರ್ಗವಾಗಿ ಬಂದ ಶಾಸಕರ ಕಾರನ್ನು ತಡೆದು ದಿಕ್ಕಾರ ಕೂಗಿ ಘೇರಾವ್ ಹಾಕಿ ವಾಪಸ್ ಕಳುಹಿಸಿದ ಘಟನೆ ಗುರುವಾರ ತಾಲ್ಲೂಕಿನ ಕೋಟಗುಡ್ಡ ಗ್ರಾಮದಲ್ಲಿ ನಡೆದಿದೆ

ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಹಾಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಕಳೆದಾ ಇಪ್ಪತ್ತು ನಾಲ್ಕು ದಿನಗಳಿಂದ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳು ಧರಣೆ ಕೈಗೋಂಡು ಎರಡು ದಿನಗಳ ಬಂದ್ ಆಚರಿಸುತ್ತಿದ್ದು ರೈತರು ಹಾಗೂ ಸಂಘ ಸಂಸ್ಥೆಗಳ ಬಂದ್ ಗೆ ಬೆಂಬಲ ಸೂಚಿಸಿ ಕೋಟಗುಡ್ಡ ಗ್ರಾಮದಲ್ಲಿ ಗ್ರಾಮಸ್ಥರು ರಸ್ತೆಗೆ ಬೆಲಿ ಹಾಕಿ ಬಂದ್ ಆಚರಿಸುವಾ ವೇಳೆ ಅದೇ ಮಾರ್ಗವಾಗಿ ಶಾಸಕರು ಪಾವಗಡದಿಂದ ತಮ್ಮ ಸ್ವಗ್ರಾಮವಾದ ಕೆ.ಟಿ.ಹಳ್ಳಿ ಗ್ರಾಮಕ್ಕೆ ತೆರಳುತ್ತಿರುವ ವೇಳೆ ಕೋಟಗುಡ್ಡ ಗ್ರಾಮದಲ್ಲಿ ಬಂದ್ ಆಚರಿಸುತ್ತಿರುವ ಗ್ರಾಮಸ್ಥರು ಹಾಗೂ ಮುಖಂಡರು ಶಾಸಕ ಕೆ.ಎಮ್.ತಿಮ್ಮರಾಯಪ್ಪ ರವರ ಕಾರನ್ನು ತಡೆದು ನಿಲ್ಲಿಸಿ ದಿಕ್ಕಾರ ಕೂಗಿ ಬಂದಾ ದಾರಿಯಲ್ಲೆ ಸುಂಕವಿಲ್ಲವೆಂಬಂತೆ ಮುಂದೆ ಹೋಗಲು ಬೀಡದೆ ಮತ್ತೆ ಪಾವಗಡ ಕಡೆಗೆ ಗ್ರಾಮಸ್ಥರು ವಾಪಸ್ಸು ಕಳುಹಿಸಿದರು
ಶಾಸಕರ ಕಾರನ್ನು ತಡೆದ ತಕ್ಷಣ ಸ್ಥಳದಲ್ಲಿದ್ದ ಪೋಲಿಸರು ಸೂಕ್ತ ರಕ್ಷಣೆ ನೀಡಿದ್ದು ರಸ್ತೆ ತಡೆದು ಬಂದ್ ಆಚರಿಸುತ್ತಿದ್ದ ಗ್ರಾಮಸ್ಥರನ್ನು ಪೋಲಿಸರು ಮನವೋಲಿಸಿ ದಾರಿ ಮಾಡಿಕೋಡಲು ಯತ್ನಿಸಿದರು ಯಾವುದೇ ರೀತಿಯ ಪ್ರಯೋಜನವಾಗದ ಕಾರಣ ಶಾಸಕರು ಕೋಡಗುಡ್ಡ ಗ್ರಾಮದಿಂದ ಪಾವಗಡ ಕಡೆಗೆ ಹಿಂದಿರುಗಿರುತ್ತಾರೆ

ಈ ಘಟನೆಯ ಬಗ್ಗೆ ಸ್ಥಳೀಯರಾದ ಓಂಕಾರ್ ನಾಯಕ ಮಾತನಾಡಿ ಶಾಸಕರು ನೀರಿಗಾಗಿ ಗ್ರಾಮ ಮಟ್ಟದಲ್ಲಿ ಹೋರಾಟ ನಡೆಯುತ್ತಿರುವುದನ್ನು ಕಂಡರು ಕಂಡು ಕಾಣದಂತೆ ಕೋಡಗುಡ್ಡ ಗ್ರಾಮದಲ್ಲಿ ಬೇರೆ ಮಾರ್ಗವಾಗಿ ಹೋಗುತ್ತಿದ್ದನ್ನ ಕಂಡ ಗ್ರಾಮಸ್ಥರು ಕಾರನ್ನು ತಡೆದು ನಿಲ್ಲಿಸಿ ದಿಕ್ಕಾರ ಕೂಗಿ ಘೇರಾವ್ ಹಾಕಿ ವಾಪಸ್ ಕಳುಹಿಸಿದರು ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಮಂಜುನಾಥ್ ಮಾರನಾಯಕ ವೀರೇಶ ನರೇಶ್ ಶ್ರೀರಾಮ್ ಹರೀಶ್ ಓಬಳೇಶ್ ಶಿವಕುಮಾರ್ ಆನಂದ ನಾಯಕ ಕದ್ರಪ್ಪ ತಿಮ್ಮಯ್ಯ ಧನಂಜಯ ಶ್ರೀನಾಥ್ ಉಗ್ರಮೂರ್ತಿ ಮಲ್ಲಿಕಾರ್ಜುನ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here