ಶಾಸಕರಿಗೆ ಹುಟ್ಟೂರಿನಲ್ಲಿ ಸನ್ಮಾನ…

0
54

ಚಾಮರಾಜನಗರ/ ಕೊಳ್ಳೇಗಾಲ:ಯಾವುದೇ ವ್ಯಕ್ತಿಗೆ ತನ್ನ ಗ್ರಾಮದಲ್ಲಿ ಸನ್ಮಾನ ಮಾಡುವುದಕ್ಕಿಂತ ಹೆಚ್ಚಿಗೆ ಗೌರವ ಬೇರಲ್ಲೂ ಸಿಗಲ್ಲ ಅಂತ ಗೌರವ ನನ್ನ ಗ್ರಾಮದಿಂದ ನನಗೆ ದೊರೆತಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎನ್.ಮಹೇಶ್ ರವರು ಹೇಳಿದರು.
ಪಟ್ಟಣದ ಶಂಕನಪುರ ಗ್ರಾಮದಲ್ಲಿ ಭಾನುವಾರ ಶಂಕನಪುರ ಮತ್ತು ಮುತ್ತಾಪುರದ ಹುಂಡಿ ಗ್ರಾಮಸ್ಥರಿಂದ ನಡೆದ ಹುಟ್ಟೂರು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು, ಉಳಿದಿರುವ ನನ್ನ ಜೀವನ ಹಾಗೂ ಅಧಿಕಾರವನ್ನು ಬಳಸಿಕೊಂಡು ಜನರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮೊದಲ ಬಾರಿಗೆ ನಾನು ಚುನಾವಣೆ ಯಲ್ಲಿ ಸ್ಪರ್ಧೆ ಮಾಡಿದಾಗಿನಿಂದ ಇಲ್ಲಿಯವರೆಗೆ ನನ್ನ ಬೆಂಬಲಕ್ಕೆ ನನ್ನ ಸ್ವಗ್ರಾಮದ ಜನರು ಸಹಕರಿಸಿದ್ದಾರೆ. ನಾನು ಚುನಾವಣೆಗೆ ಮುನ್ನ ನುಡಿದಿರುವಂತೆ ನಡೆಯುತ್ತೇನೆ ಎಂದು ಸಾವ೯ಜನಿಕರಿಗೆ ಭರವಸೆ ನೀಡಿದರು.
ನನಗೆ ಮಧುವೆಯಾಗಿ 30 ವಷ೯ ಕಳೆದಿದ್ದರು ಗಂಡ ಹೆಂಡತಿ ಒಟ್ಟಿಗೆ ಮೂರು ವಷ೯ವು ಜೀವನ ನಡೆಸಿಲ್ಲ, ಆದರೆ ನನ್ನ ಹೆಂಡತಿ ನಾನು ಇಬ್ಬರು ಒಟ್ಟೊಟ್ಟಿಗೆ ಚಳುವಳಿಯ ಮೂಲಕ ಬಂದವರು ಹಾಗಾಗಿ ನನ್ನ ಹೆಂಡತಿಯ ಸಹಕಾರ ನನಗೆ ಅಪಾರವಾಗಿ ಸಿಕ್ಕಿದೆ. ನನ್ನಲ್ಲಿ ಒಂದು ಮಾನವ ಸಹಜವಾದ ವೀಕ್ಸೆಸ್ ಇದೆ ಅದೇನೆಂದರೆ ನೂರಾರು ಜನರೊಂದಿಗೆ ಮಾತನಾಡುವಾಗ ಸಣ್ಣಪುಟ್ಟ ಕಿರಿ ಕಿರಿ ಮಾಡಿರುತ್ತೇನೆ ಅದನ್ನು ದಯಮಾಡಿ ಹೊಟ್ಟೆಗಾಕಿಕೊಳ್ಳಿ ಎಂದು ಸಾವ೯ಜನಿಕರನ್ನುದ್ದೇಶಿಸಿ ಹೇಳಿದರು.
ಪಕ್ಷ ಸಂಘಟನೆ ಯ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿದೆ. ವಿಶೇಷವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ.ನನ್ನ ಅಧಿಕಾರದ ಅವಧಿಯಲ್ಲಿ ಸ್ವಗ್ರಾಮವನ್ನು ಮಾದರಿ ಗ್ರಾಮ ಮಾಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕರ ಪತ್ನಿ ವಿಜಯಮಹೇಶ್,ಪುತ್ರ ಜಗುವೀರ್ ಅರ್ಜುನ್, ಶಾಸಕರ ಸಹೋದರ ಕೃಷ್ಣಸ್ವಾಮಿ ರವರ ದಂಪತಿಗಳು, ಐಪಿಎಸ್ ಅಧಿಕಾರಿ ಕಲಾ ರವರು ಹಾಗೂ ನಗರಸಭೆ ಸದಸ್ಯರು, ಸರ್ಕಾರಿ ನೌಕರರು, ಗ್ರಾಮದ ಯಜಮಾನರು, ನೀಲಗಾರರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಎಸ್ಪಿ ರಾಜ್ಯ ಘಟಕದ ಲಕ್ಷಮ್ಮ, ಜಿಲ್ಲಾಧ್ಯಾಕ್ಷ ಮರಳ್ಳಿ ಮಾದಪ್ಪ, ಉಪಾಧ್ಯಕ್ಷ ಸೋಮಣ್ಣ ಉಪ್ಪಾರ್, ಮುಖಂಡ ಸಮೀಉಲ್ಲಾ, ನಗರಸಭೆ ಸದಸ್ಯರುಗಳಾದ ಜಯಮೇರಿ,ನಾಗಸುಂದ್ರಮ್ಮ,ಪ್ರಕಾಶ್, ರಾಮಕೃಷ್ಣ,ಜಯರಾಜು,ನಾಸೀರ್ ಶರೀಫ್ ಗ್ರಾಮದ ಯಜಮಾನರು, ಮುಖಂಡರುಗಳು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

LEAVE A REPLY

Please enter your comment!
Please enter your name here