ಶಾಸಕರ ವಿರುದ್ದ ಬಂಡಾಯ ಅಭ್ಯರ್ಥಿಯ ಆರೋಪ

0
970

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : ಪಕ್ಷ ದ್ರೋಹಿಗಳು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂ.ರಾಜಣ್ಣ ಇವರಿಬ್ಬರ ಕುಂತಂತ್ರ ರಾಜಕಾರಣ ಇನ್ನು ಮುಂದೆ ತಾಲ್ಲೂಕಿನಲ್ಲಿ ನಡೆಯಲು ಬಿಡುವುದಿಲ್ಲ. ಎಂ. ರಾಜಣ್ಣ 13 ಎಕರೆ ಬಂಡೆ ಜಮೀನು ಬಾಮೈದನಿಗೆ ಮಾಡಿದ್ದಾರೆ..?, ಮಗಳ ಮದುವೆಗೆ 2 ಕೋಟಿ ಹಣ ಎಲ್ಲಿಂದ ಬಂತು? ಎಂದು ಪ್ರಶ್ನಿಸಿ,ಮುನಿಯಪ್ಪ ಮತ್ತು ರಾಜಣ್ಣ ಬಹಳಷ್ಟು ಹಗರಣಗಳನ್ನೂ ಮಾಡಿದ್ದಾರೆ. ಅವರ ಹಗರಣಗಳ ಪ್ರತಿಯೊಂದು ದಾಖಲೆಯೂ ಬಹಿರಂಗ ಪಡಿಸುತ್ತೇನೆ ಎಂದು ಜೆಡಿಎಸ್ ಪಕ್ಷದ ಬಂಡಾಯ ಅಭ್ಯರ್ಥಿ ಮೇಲೂರು ರವಿಕುಮಾರ್ ಆರೋಪಿಸಿದ್ದಾರೆ.

ಇತ್ತೀಚಗೆ ತಾಲ್ಲೂಕಿನಲ್ಲಿ ನಡೆದ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ನೋವಾಗುವಂತೆ ಮಾತಾಡಿದ್ದಾರೆ. ನಾವು ಪಕ್ಷದ ರಾಷ್ಟ್ರೀಯ ಅದ್ಯಕ್ಷರಾದ ಹೆಚ್.ಡಿ.ದೇವೆಗೌಡರ ಮಾರ್ಗದರ್ಶನ ಹಾಗೂ ಈ ಕ್ಷೇತ್ರದ ಮತದಾರರ ಆರ್ಶಿವಾದದಿಂದ ಬಂಡಾಯ ಅಭ್ಯಾರ್ಥಿಯಾಗಿ ಚುನಾವಣೆಯನ್ನು ಎದುರಿಸುತ್ತೇನೆ. ಎಂದು ತಾದೂರು ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮೇಲೂರು ರವಿ ಕುಮಾರ್ ಮಾತನಾಡಿದರು.

ಈ ಸಂದರ್ಭದಲ್ಲಿ ಕೊಚಿಮೂಲ್ ನಿರ್ದೇಶಕ ಬಂಕ್ ಮುನಿಯಪ್ಪ , ಪಿಎಲ್ ಡಿ ಬ್ಯಾಂಕ್ ಮಾಜಿ ಅದ್ಯಕ್ಷ ಚೀಮನಹಳ್ಳಿ ಗೋಪಾಲಣ್ಣ ನಿರ್ದೇಶಕ ಪಿ.ವಿ ನಾಗರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ. ಹಾಗೂ ಜೆಡಿಎಸ್ ಮುಖಂಡ ತಾದೂರು ರಘು, ದೊಣ್ಣಹಳ್ಳಿ ರಾಮಣ್ಣ ಹಾಗೂ ಮುಂತಾದವರು ಉಪಸ್ಥಿಯಲ್ಲಿದ್ದರು.

LEAVE A REPLY

Please enter your comment!
Please enter your name here