ಶಿಕ್ಷಕರ ಪ್ರತಿಭಟನೆ( ಮಳವಳ್ಳಿ)

0
179

ಮಂಡ್ಯ/ಮಳವಳ್ಳಿ: ಕೇಂದ್ರದ 7 ನೇ ವೇತನ ಆಯೋಗದ ಶಿಫಾರಸುಗಳನ್ನು ತಕ್ಷಣ ರಾಜ್ಯ ದಲ್ಲಿ ಜಾರಿಮಾಡಬೇಕೆಂದು ಒತ್ತಾಯಿಸಿ ಸೇರಿದಂತೆ ವಿವಿದ ಬೇಡಿಕೆಗಳನ್ನು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮಳವಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಒಂದು ದಿನ ಸಾಂಕೇತಿಕ ಪ್ರತಿಭಟನೆ ನಡೆಸಿದರು. ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಪಿಂಚಣಿ ಯೋಜನೆ ಯನ್ನೆ ಮುಂದುವರೆಸುವುದು. ಪ್ರಾಥಮಿಕ ಶಿಕ್ಷಣ ದ ಅಭಿವೃದ್ಧಿ ಗಾಗಿ ಪ್ರಾಥಮಿಕ ಶಿಕ್ಷಣ ಮಂಡಳಿ ಸ್ಥಾಪಿಸುವುದು. ರಾಜ್ಯದ ಎಲ್ಲಾ ಸಕಾ೯ರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಎಲ್ ಕೆಜಿ. ಯುಕೆಜಿ ಆರಂಭಿಸಬೇಕು. ಸಕಾ೯ರಿ ಶಾಲೆಗಳ ಸಬಲೀಕರಣಕ್ಕಾಗಿ ಕನಿಷ್ಠ ವರ್ಗಕ್ಕೆ ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ ಶಾಲೆಗೆ ಒಬ್ಬ ಮುಖ್ಯೋಪಾಧ್ಯಾಯರನ್ನು ನಿಯುಕ್ತಿಗೊಳಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಕಾರ್ಯದರ್ಶಿ ಶಿವಶಂಕರ್, ಸಕಾ೯ರಿ ನೌಕರರ ಸಂಘ ನಿರ್ದೇಶಕ ಮಲ್ಲಿಕಾರ್ಜುನ , ಪುಟ್ಟರಾಚಯ್ಯ, ಆನಂದ, ಮಲ್ಲೇಶ್. ಮಧು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸ್ಮಿತಾರಾಣಿ. ಮುಖ್ಯಶಿಕ್ಷಕರ ಸಂಘದ ಹೆಚ್.ಕೆ ಮಾದೇಗೌಡ, ವಿ.ಎಲ್ ಬಸವರಾಜು, ಶಂಕರೇಗೌಡ, ಅಚ್ಯುತ್ ಮೂರ್ತಿ, ಅಕ್ಕಮಹಾದೇವಿ ಸೇರಿದಂತೆ ಶಿಕ್ಷಕರ ಸಂಘದ ಪಧಾಧಿಕಾರಿಗಳು. ಹಾಗೂ ತಾಲ್ಲೂಕಿನ ಶಿಕ್ಷಕರು . ಸಿಆರ್ ಪಿ, ಮತ್ತು ಬಿಆರ್ ಪಿ ಗಳು ಇದ್ದರು.

LEAVE A REPLY

Please enter your comment!
Please enter your name here