ಶಿಕ್ಷಕರ ಪ್ರತಿಭಟನೆ

0
381

ಕೋಲಾರ / ಬಂಗಾರಪೇಟೆ : ಕೆಂದ್ರ ಸರ್ಕಾರ ನೌಕರರಿಗೆ ನೀಡುತ್ತಿರುವ ವೇತನದಂತೆ ರಾಜ್ಯ ಸರ್ಕಾರದ ನೌಕರರಿಗೂ ವೇತನ ನೀಡಬೇಕೆಂದು ಒತ್ತಾಯಿಸಿ ಇಲ್ಲಿನ ಬಿಇಓ ಕಛೇರಿ ಮುಂದೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವತಿಯಿಂದ ಶಿಕ್ಷಕರು ಪ್ರತಿಭಟನೆ ನಡೆಸಿದರು.ಏಕರೂಪ ಶಿಕ್ಷಣ ಹಾಗು ಏಕರೂಪ ಪಠ್ಯ ಅಳವಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಯಿತು, ರಾಜ್ಯ ಸರ್ಕಾರ 7 ನೇ ವೇತನ ಹಾಗು ಬೇಡಿಕೆಗಳನ್ನ ಈಡೇರಿಸದಿದ್ದರೆ ರಾಜ್ಯಾದ್ಯಂತ ಸಂಘದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಕಾ ಸಂಘದ ಉಪಾಧ್ಯಕ್ಷ ಅಪ್ಪಯ್ಯಗೌಡ ಎಚ್ಚರಿಸಿದರು, ಬಿಇಓ ಜಯರಾಜ್ ರವರಿಗೆ ಮನವಿ ಪತ್ರ ನೀಡಲಾಯಿತು, ಸಂಘದ ಅಧ್ಯಕ್ಷ ಆಂಜನೇಗೌಡ, ಉಪಾಧ್ಯಕ್ಷ ಕಾಂತರಾಜ್, ಸದಸ್ಯರಾದ ಪ್ರೇಮಲತ, ನೈಟಿಂಗೇಲ್, ಭಾರತಿ, ಎನ್ಜಿಓ ಅಧ್ಯಕ್ಷ ನಾಗಾನಂದ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here