ಶಿಡ್ಲಘಟ್ಟ ಯಲ್ಲಿ ಶ್ರೀ ದೇವರ ದಾಸಿಮಯ್ಯ ಜಯಂತಿ

0
350

ಶಿಡ್ಲಘಟ್ಟ : ನೇಕಾರರ ಸಮುದಾಯಗಳ ಒಕ್ಕೂಟ ಹಾಗೂ ತಾಲೂಕು ಆಡಳಿತ ಮಂಡಳಿ ವತಿಯಿಂದ ಶ್ರೀ ದೇವರ ದಾಸಿಮಯ್ಯ  ಜಯಂತಿ ಯನ್ನು ತಾಲ್ಲೂಕು ಸಂಭಾಗಣ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ನಿವೃತ್ತ ಪ್ರಾಂಶುಪಾಲ ಮಹಮದ್ ಖಾಸಿಂ ಮಾತನಾಡಿ ಕನಾ೯ಟಕದ ಅಮೂಲ್ಯವಾದ ಆಸ್ತಿ ವಚನಕಾರರು.
ಮನುಷ್ಯ ಜಾತಿ ಒಂದೇ ಮಾನವೀಯ ಮೌಲ್ಯಗಳನ್ನು ಯಾವ ರೀತಿ ಬಳಸಿಕೊಂಡು ಹೋಗಬೇಕು ಎಂಬುದನ್ನು ವಚನಕಾರರು ಹೇಳಿದ್ದಾರೆ.
ಭಕ್ತಿ ಎನ್ನುವುದು ಭೂಟಾಟಿಕೆ ವಸ್ತು ಆಲ್ಲ, ಅದು ಆತ್ಮಕ್ಕೆ ಸಂಭಂದಿಸಿದ್ದು ಎಂದು ಜೇಡರ ರ ದಾಸಿಮಯ್ಯ ಹೇಳಿದ್ದಾರೆ.


ಏಕ ದೇವೋ ಪಾಸನೆ ಎಂದು ಎಲ್ಲ ವಚನಕಾರು ಹೇಳುತ್ತಾರೆ. ಆಚಾರಗಳೆ ದೇವರುಗಳು
ಜೇಡರ ದಾಸಿಮಯ್ಯ ವಚನಗಳಲ್ಲಿ ಹೇಳಿದ್ದಾರೆ. ಬರೆದವರಲ್ಲಿ   ಶರಣರ ಸೂಳ್ನುಡಿ ಮೃಡಶರಣರ ನುಡಿ, ಗಡಣ-ಎಂಬ ನುಡಿಗಳನ್ನೂ ದಾಸಿಮಯ್ಯ ತನ್ನ ವಚನಗಳಲ್ಲಿ ಡೋಹರ ಕಕ್ಕಯ್ಯ ಮಾದಾರ ಚನ್ನಯ್ಯ ಮೊದಲಾದವರನ್ನು ನೆನೆಸಿಕೊಂಡಿರುವುದನ್ನೂ ನೋಡಬಹುದು. ಕೆಂಭಾವಿ ಭೋಗಣ್ಣನೂ ದಾಸಿಮಯ್ಯನಿಗಿಂತ ಪೂರ್ವದವನೆಂದು ತಿಳಿದುಬರುತ್ತದೆ. ದಾಸಿಮಯ್ಯ ಒಟ್ಟು 106 ವಚನಗಳನ್ನು ಬರೆದಿರುವನೆಂದು ಕವಿಚರಿತೆಕಾರರು ಹೇಳಿದ್ದಾರೆ. ರಾವ್ ಬಹದ್ದೂರ್ ಪಿ. ಜಿ. ಹಳಕಟ್ಟಿಯವರು 148 ವಚನಗಳನ್ನು ಸಂಪಾದಿಸಿದ್ದಾರೆ. ದಾಸಿಮಯ್ಯ ರಚಿಸಿರುವ ಒಂದು ರಗಳೆಯೂ ಇದೆಯೆಂದು ಗೊತ್ತಾಗುತ್ತದೆ. ಏನೇ ಆದರೂ ಈಗ ದೊರೆತಿರುವ ವಚನಗಳಲ್ಲಿ ದಾಸಿಮಯ್ಯನ ವಚನಗಳೇ ಪ್ರಾಚೀನವಾದವು
ಜೀವನದಲ್ಲಿ ವಚನಕಾರರ ವಿಚಾರಗಳನ್ನು ನಾವು ವಿನಿಮಯ ಮಾಡಿಕೊಳ್ಳಬೇಕು ಅವರ ಆಚಾರ ವಿಚಾಗಳನ್ನು ತಿಳಿದು ಕೊಳ್ಳಬೇಕು ಎಂದರು.

ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜಣ್ಣ ಮಾತನಾಡಿ ಒಂದು ಜೇಡರ ದಾಸಿಮಯ್ಯ ಒಂದೇ ಸಮುದಾಯಕ್ಕೆ ಸೀಮಿತರಾದವರಲ್ಲ ಎಲ್ಲಾ ಸಮುದಾಯಕ್ಕೆ ವಚನಗಳನ್ನು ಕೊಟ್ಟಿದ್ದಾರೆ , ವಚನಕಾರರು ಸಮಾಜಕ್ಕೆ ಕೊಟ್ಟಂತರ ವಿಚಾರಗಳು ಶೈಲಿ ಕೊಡುಗೆ ಅಪಾರ , ಆದುನಿಕ ಸಮಾಜದಲ್ಲಿ ಯುವ ಪೀಳಿಗೆಗೆ ವಚನಾಕಾರರು ಯಾರು ಎಂದು ತಿಳಿಸಬೇಕಾಗುತ್ತದೆ ಅವರ ಆದಶ೯ಗಳನ್ನು ಪಾಲಿಸಬೇಕು ಅದೇ ರೀತಿ ನೇಕಾರರ ಸಮುದಾಯಕ್ಕೆ ಸಕಾ೯ರದಿಂದ ಬರುವಂತಹ ಸವಲತ್ತುಗಳನ್ನು ಸದುಪಯೋಗ ಪಡೆಯಬೇಕು ಎಂದರು.

ತಹಸೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ ಸುಮಾರು 1040ರಲ್ಲಿದ್ದ ವೀರಶೈವ ವಚನಕಾರಶಂಕರ ದಾಸಿಮಯ್ಯನ ಸಮಕಾಲೀನ ಈತನಿಗೆ ದೇವರ ದಾಸಿಮಯ್ಯನೆಂಬ ಇನ್ನೊಂದು ಹೆಸರೂ ಇತ್ತ೦ತೆ ಜೇಡರ ದಾಸಿಮಯ್ಯ ಬಟ್ಟೆ ನೇಯುವ ಕಸುಬನ್ನು ಅವಲಂಬಿಸಿದ್ದನೆಂದು ತಿಳಿದು ಬರುತ್ತದೆ. ಬಟ್ಟೆಯನ್ನು ನೇಯುತ್ತ ನೇಯುತ್ತಲೇ ಮನಸ್ಸಿನಲ್ಲಿ ಮೂಡಿದ ಭಾವಗಳನ್ನು ವಚನಗಳ ರೂಪದಲ್ಲಿ ಅಭಿವ್ಯಕ್ತಗೊಳಿಸುತ್ತಿದ್ದರಂತೆ ಇಂತಹ ಮಹಾನ್ ವಚನಕಾರ ಜಯಂತಿಯನ್ನು ನಾವು ಆಚರಣೆ ಮಾಡುವುದು ಸಂತೋಷದಾಯಕ ಎಂದರು  ಕಾಯ೯ಕ್ರಮದಲ್ಲಿ ತಾಲ್ಲೂಕು ಉಪಾದ್ಯಕ್ಷ ಎಚ್.ನರಸಿಂಹಯ್ಯ, ತಾಲ್ಲೂಕು ಕಾಯ೯ ನಿವ೯ಹಣಾ ಅಧಿಕಾರಿ ವೆಂಕಟೇಶ್, ಬಿ. ಇ .ಓ. ರಘುನಾಥ್ ರೆಡ್ಡಿ, ಬಾಸ್ಕರ್, ಮುಂತಾದವರು ಹಾಜರಿದ್ದರು

LEAVE A REPLY

Please enter your comment!
Please enter your name here